Tuesday, July 8, 2025

ಸತ್ಯ | ನ್ಯಾಯ |ಧರ್ಮ

ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣ: ಇಬ್ಬರು ಆರೋಪಿಗಳನ್ನು ಇನ್ನೂ ಹತ್ತು ದಿನಗಳ ಕಸ್ಟಡಿಗೆ ನೀಡಿದ ನ್ಯಾಯಾಲಯ

ಜಮ್ಮು: ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ಇಬ್ಬರು ಆರೋಪಿಗಳನ್ನು ಇನ್ನೂ ಹತ್ತು ದಿನಗಳ ಕಾಲ ಎಎನ್‌ಐ ವಶಕ್ಕೆ ನೀಡಲಾಗಿದೆ. ಜಮ್ಮುವಿನ ವಿಶೇಷ ನ್ಯಾಯಾಲಯ ಸೋಮವಾರ ಈ ಅನುಮತಿ ನೀಡಿದೆ.

ಹಿಂದಿನ ಕಸ್ಟಡಿ ಅವಧಿ ಮುಗಿದ ನಂತರ ಆರೋಪಿಗಳಾದ ಪರ್ವೈಜ್ ಅಹ್ಮದ್ ಜೋಧರ್ ಮತ್ತು ಬಶೀರ್ ಅಹ್ಮದ್ ಜೋಧರ್ ಇಬ್ಬರನ್ನೂ ಸೋಮವಾರ NIA ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ತನಿಖೆ ಮುಂದುವರಿಸಲು ಅನುವು ಮಾಡಿಕೊಡಲು ಅವರ ರಿಮಾಂಡ್ ವಿಸ್ತರಿಸಬೇಕೆಂಬ NIA ಕೋರಿಕೆಯನ್ನು ನ್ಯಾಯಾಲಯ ಪರಿಗಣಿಸಿತು.

ಜೂನ್ 22 ರಂದು ಇಬ್ಬರನ್ನು ಬಂಧಿಸಲಾಯಿತು. ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾಗಿದ್ದರು ಮತ್ತು 16 ಜನರು ಗಂಭೀರವಾಗಿ ಗಾಯಗೊಂಡರು. ದಾಳಿಯಲ್ಲಿ ಭಾಗಿಯಾಗಿದ್ದ ಸಶಸ್ತ್ರ ಭಯೋತ್ಪಾದಕರಿಗೆ ಆರೋಪಿಗಳು ಉದ್ದೇಶಪೂರ್ವಕವಾಗಿ ಆಶ್ರಯ, ಆಹಾರ ಮತ್ತು ಸಾರಿಗೆ ಸೌಲಭ್ಯಗಳನ್ನು ಒದಗಿಸಿದ್ದಾರೆ ಎಂದು NIA ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page