ಗುಜರಾತ್: ಬುಧವಾರ ಬೆಳಗ್ಗೆ ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಗುಜರಾತ್ ಭಯೊತ್ಪಾದನಾ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಚರಣೆ ನಡಿಸಿ 200 ಕೋಟಿ ರೂಪಾಯಿ ಮೌಲ್ಯದ 40 ಕೆಜಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ದೋಣಿಯನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಭಾರತೀಯ ಕೋಸ್ಟ್ ಗಾರ್ಡ್(ಐಸಿಜಿ) ಅಧಿಕಾರಿಗಳು ಮಾಹಿತಿ ನೀಡಿದ್ದು, ಇಂದು ಮುಂಜಾನೆ ಎರಡು ಇಂಡಿಯನ್ ಕೋಸ್ಟ್ ಗಾರ್ಡ್‌ನ ದೋಣಿಗಳು ಗುಜರಾತ್‌ನ ಜಖೌ ಕಾರವಳಿಯಿಂದ 33 ಮೈಲಿ ದೂರದಲ್ಲಿದ್ದ ದೋಣಿಯನ್ನು ಹಿಡಿದು, ಕೋಟಿ-ಕೋಟಿ ಬೆಲೆಬಾಳುವ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿನ್ನಲೆ ಹೆಚ್ಚಿನ ತನಿಖೆಗೆ ದೋಣಿಯೊಂದಿಗೆ ಅದರಲ್ಲಿದ್ದ ಸಿಬ್ಬಂದಿಯನ್ನು ಜಕೌಗೆ ಕರೆತರಲಾಗಿದೆ ಎಂದು ಐಸಿಜಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.