Monday, July 28, 2025

ಸತ್ಯ | ನ್ಯಾಯ |ಧರ್ಮ

ಪಾಕ್‌ನಲ್ಲಿ ವಿದೇಶದ ಚರ್ಚೆ: ಆಡಿಯೋ ಸೋರಿಕೆ ಪ್ರಕರಣದಲ್ಲಿ ಇಮ್ರಾನ್‌ ವಿರುದ್ದ ಕ್ರಮಕ್ಕೆ ಶಿಫಾರಸ್ಸು

ಇಸ್ಲಾಮಾಬಾದ್‌ : ದೇಶದ ಸಚಿವರು ಮುಖ್ಯ ಕಾರ್ಯದರ್ಶಿ ವಿದೇಶದ ಪತ್ರವೊಂದರ ಬಗ್ಗೆ ಚರ್ಚಿಸುವುದರ ಆಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅಲ್ಲಿನ ಸಚಿವ ಸಂಪುಟ ಇಂದು ಔಪಚಾರಿಕವಾಗಿ ಅನುಮೋದನೆ ನೀಡಿದೆ.

ಈ ಹಿನ್ನಲೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಮಾಜಿ ಸಚಿವ ಅಸಾದ್‌ ಉಮರ್‌ ಮತ್ತು ಮುಖ್ಯ ಕಾರ್ಯದರ್ಶಿಯವರು  ಮೂವರು ಸೇರಿ ಅಮೇರಿಕಾದ ಪತ್ರವೊಂದರ ಕುರಿತು ಚರ್ಚೆ ನಡೆಸಿದ್ದಾರೆ. ಚರ್ಚೆಗೆ ಸಂಬಂಧಿಸಿದ ಎರಡು ಆಡಿಯೋಗಳು ಸೋರಿಕೆಯಾಗಿವೆ. ಇದು ರಾಷ್ಟ್ರದ ಭದ್ರತೆಗೆ ಕುತ್ತು ತರುವ ವಿಚಾರವಾಗಿದ್ದು, ಇದಕ್ಕೆ ಸಂಬಂಧ ಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ಸಮಿತಿ ಹೇಳಿದೆ.

ಈ ಹಿಂದೆ ಆಡಿಯೋ ಸೋರಿಕೆ ಸಂಬಂಧ ಪಟ್ಟಂತೆ  ಪರಿಶೀಲನೆ ನಡೆಸಲು ತನಿಖಾ ಸಮಿತಿಯೊಂದನ್ನು ರಚಿಸಿಲಾಗಿತ್ತು. ಆ ಸಮಿತಿಯು ಇಮ್ರಾನ್‌ ನ ಕಡೆ ಬೆರಳು ತೋರಿಸಿದ್ದು ಅವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಚಿವ ಸಂಪುಟ ಶಿಫಾರಸ್ಸು ಮಾಡಿದೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ಓದಿ : ಮಹಾತ್ಮ ಗಾಂಧಿಯವರು ಕೇವಲ ಭಾರತೀಯರನ್ನು ಪ್ರಭಾವಿಸಲಿಲ್ಲ. ಇಡೀ ಜಗತ್ತಿನ ಮಹಾನಾಯಕರಿಗೆ ಪ್ರೇರಕಶಕ್ತಿಯಾದರು. ದಕ್ಷಿಣ ಆಫ್ರಿಕಾದ ಕರಿಯರ ಹೋರಾಟವನ್ನು ಗೆಲ್ಲಿಸಿದ ನೆಲ್ಸನ್ ಮಂಡೇಲಾ ಅವರಿಗೆ ಗಾಂಧಿ ಹೇಗೆ ಸ್ಫೂರ್ತಿಯಾಗಿದ್ದರು ಗೊತ್ತೆ? ಈ ವಿಡಿಯೋ ನೋಡಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page