ಬೆಂಗಳೂರು: ಯುವ ನಿರ್ದೇಶಕ ಜೀವಾ ನವೀನ್ ಅವರು ನಿರ್ದೇಶನಮಾಡಿರುವ ಕನ್ನಡ ಚಲನಚಿತ್ರದ ʼಪಾಲಾರ್ʼ ಟ್ರೈಲರ್ ಸೋಮವಾರ ಬಿಡುಗಡೆಯಾಗಿದ್ದು, ಖ್ಯಾತ ತಮಿಳು ಚಲನಚಿತ್ರ ನಿರ್ದೇಶಕ ʼಪ.ರಂಜಿತ್ʼ ಅವರು ಸಿನಿಮಾದ ಟ್ರೈಲರನ್ನು ತಮ್ಮ ಟ್ವಿಟರ್ ಖಾತೆಯ ಮೂಲಕ ಲೋಕಾರ್ಪಣೆಗೊಳಿಸಿ ಪಾಲಾರ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಕರ್ನಾಟಕದಾದ್ಯಂತ ʼಪಾಲಾರ್ʼ ಟ್ರೈಲರ್ ಸದ್ದು ಮಾಡುತ್ತಿದ್ದು, ದಲಿತರ ಮೇಲಾಗುವ ದೌರ್ಜನ್ಯ, ಜಾತಿಯತೆಯ ತಾರತಮ್ಯ ಸವರ್ಣಿಯರ ದಬ್ಬಾಳಿಕೆ, ಮತ್ತು ದಲಿತ ಪ್ರತಿರೋಧದ ಕಥಾವಸ್ತುವನ್ನು ಒಳಗೊಂಡ ಸಿನಿಮಾ ಪಾಲಾರ್.
ಈ ಸಿನಿಮಾ ಕುರಿತು ಖ್ಯಾತ ತಮಿಳು ಚಲನಚಿತ್ರ ನಿರ್ದೇಶಕ ʼಪ.ರಂಜಿತ್ʼ ಟ್ವೀಟ್ ಮಾಡಿದ್ದು, ಜೀವಾ ನವೀನ್ ನಿರ್ದೇಶನದ ಹಾಗೂ ಸೌನವಿ ಫಿಲ್ಮ್ಸ್ ಅರ್ಪಿಸುವ ಕನ್ನಡ ಚಲನಚಿತ್ರ ʼಪಾಲಾರ್ʼ ಟ್ರೈಲರ್ ಅನ್ನು ಅರ್ಪಿಸುತ್ತಿದ್ದೇನೆ. ಕಥೆಯು ನೈಜ ಘಟನೆಗಳ ಆಧಾರದ ಮೇಲೆ ನಿರ್ಮಾಣವಾಗಿದ್ದು, ʼಪಾಲಾರ್ʼ ಸಿನಿಮಾ ಕನ್ನಡ ಚಲನಚಿತ್ರರಂಗದಲ್ಲಿ ಮೈಲಿಗಲ್ಲಾಗಲಿ ಎಂದು ಶುಭಹಾರೈಸಿದ್ದಾರೆ.
ಸಿನಿಮಾದಲ್ಲಿ ‘ಸಿನಿಮಾ ಬಂಡಿ’ ಖ್ಯಾತಿಯ ನಟಿ, ಗಾಯಕಿ ವೈ.ಜಿ.ಉಮಾ ಮುಖ್ಯ ಪಾತ್ರದಲ್ಲಿ, ನಾಯಕನಾಗಿ ರಾಷ್ಟ್ರೀಯ ನಾಟಕ ಶಾಲೆಯ ತಿಲಕ್ ರಾಜ್ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ನೂರಕ್ಕು ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ. ಹಾಗಯೇ ಚಿತ್ರಕ್ಕೆ ಆಲಿಫ್ ರೆಹಾನ್‌ರವರ ಛಾಯಗ್ರಾಹಣ, ವಲಿ ಕುಲಾಯಿಸ್ ಸಂಕಲನ, ರಾಜಮೌಳಿ ತಂಡದ ಸಾಹಿತಿ ವರದರಾಜ್ ಚಿಕ್ಕಬಳ್ಳಾಪುರ ಹಾಡುಗಳನ್ನು ರಚಿಸಿದ್ದು, ಸುಬ್ರಹ್ಮಣ್ಯ ಆಚಾರ್ಯ ಅವರ ಸಂಗೀತವಿದೆ. ಸುಪ್ರೀತ್ ಪಲ್ಗುಣ, ಸುಭ್ರಹ್ಮಣ್ಯ ಆಚಾರ್ಯ ಜೊತೆಗೆ ಉಮಾ ವೈ.ಜಿ. ಹಾಡುಗಳಿಗೆ ದನಿಯಾಗಿದ್ದಾರೆ.