Saturday, June 22, 2024

ಸತ್ಯ | ನ್ಯಾಯ |ಧರ್ಮ

ಪಂಚರತ್ನ ರಥಯಾತ್ರೆಯು ಯಾವ ಜಾತಿಗೂ ಸೀಮಿತ ಅಲ್ಲ: ಹೆಚ್.ಡಿ ದೇವೇಗೌಡ

ಕೋಲಾರ : ಜೆಡಿಎಸ್‌ ನ ಮೊದಲನೆ ದಿನದ ಪಂಚರತ್ನ ರಥಯಾತ್ರೆ ಯಶಸ್ವಿಯಾಗಿ ಪೂರೈಸಿದ್ದು, ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಶುಕ್ರವಾರದಂದು ಯೋಜನೆಗೆ ಚಾಲನೆ ನೀಡಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ಶುಕ್ರವಾರದಂದು ಬೃಹತ್‌ ಸಮಾವೇಶ ನಡೆಸುವುದರ ಮೂಲಕ ಜೆಡಿಎಸ್‌ನ ಪಕ್ಷದ ಮಹಾತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಪಂಚರತ್ನ ಯೋಜನೆಗೆ ರಾಜ್ಯದ  ವಿವಿಧೆಡೆಯಿಂದ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದು, ಈಗಾಗಲೇ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಿಗೆ ಬಸ್‌ ಚಾಲನೆ ನೀಡಲಾಗಿದೆ. ಮತ್ತಷ್ಟು ಮಂದಿ ರಥಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

ಪಂಚರತ್ನ ಯೋಜನೆಯ ಮೊದಲನೇ ದಿನದ ಚಾಲನೆಯ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವರಾದ ಜಿ.ಡಿ ದೇವೇಗೌಡರು, ಪಕ್ಷದ ಅಧ್ಯಕ್ಷರಾದ ಸಿ.ಎಂ ಇಬ್ರಾಹಿಂ ಸೇರಿದಂತೆ ಹಲವು ಜೆಡಿಎಸ್‌ ಮುಖಂಡರು ಭಾಗವಗಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.

ಕಾರ್ಯಕ್ರಮವನ್ನು ಉದ್ಧೇಶಿಸಿಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ʼಪಂಚರತ್ನ ರಥಯಾತ್ರೆ ಅನ್ನೋದು ಯಾವ ಜಾತಿಗೂಸೀಮಿತ ಅಲ್ಲ. ನಾಡಿನ ಸಮಸ್ತ ಜನರಿಗೆ ಜಾತಿ ಬೇಧ ಇಲ್ಲʼ ಎಂದು
ಮಾತನಾಡಿದ್ದಾರೆ.

ಈ ಕುರಿತು ಜೆಡಿಎಸ್‌ ಪರ್ವ ಫೇಸ್‌ಬುಕ್‌ ಖಾತೆಯಲ್ಲಿ ವಿಷಯ ಹಂಚಿಕೊಂಡಿದ್ದು, ʼಮೂಡಲಬಾಗಿಲು ದ್ವಾಪರಯುಗದಲ್ಲಿ ಶ್ರೀಕೃಷ್ಣ ನ ಆಜ್ಞೆಯ ಮೇರೆಗೆ ಅರ್ಜುನನಿಂದ ಪ್ರತಿಷ್ಟಾಪಿಸಲಾದ ಪುರಾಣ ಪ್ರಸಿದ್ಧ ಆಂಜನೇಯ ದೇವಸ್ಥಾನ ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ… ಮಣ್ಣಿನ ಮಗನ ದೇವೇಗೌಡರ ಪೂಜಾಫಲ ಹಾಗೂ ದೇವರ ಅನುಗ್ರಹದಿಂದ ನೆನ್ನೆ ಮಳೆಯ ತೊಂದರೆಯಿಲ್ಲದೆ ಪಂಚರತ್ನ ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಜಿ ಸಚಿವರಾದ ಜಿ.ಟಿ ದೇವೇಗೌಡರು ಪಕ್ಷದ ಅಧ್ಯಕ್ಷರಾದ ಸಿ.ಎಂ ಇಬ್ರಾಹಿಂ ರವರು ಸೇರಿದಂತೆ ಅನೇಕ ಹಿರಿಯ ಹಾಗೂ ಯುವ ಮುಖಂಡರು ಹಾಗೂ ಲಕ್ಷಾಂತರ ಕಾರ್ಯಕರ್ತರು ಈ ಅದ್ದೂರಿ ಕಾರ್ಯಕ್ರಮದಲ್ಲಿ ಸಾಕ್ಷಿಯಾದರು… ʼ ಎಂದು ಹೇಳಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು