Wednesday, December 10, 2025

ಸತ್ಯ | ನ್ಯಾಯ |ಧರ್ಮ

ಪಾಂಡ್ಯ ಸ್ಫೋಟಕ ಬ್ಯಾಟಿಂಗ್‌, ಆಫ್ರಿಕಾ ವಿರುದ್ಧ ಭಾರತಕ್ಕೆ 101 ರನ್‌ಗಳ ಭರ್ಜರಿ ಜಯ

ಕಟಕ್‌ : ಹಾರ್ದಿಕ್‌ ಪಾಂಡ್ಯ (Hardik Pandya) ಅವರ ಸ್ಫೋಟಕ ಅರ್ಧಶತಕ, ಬೌಲರ್‌ಗಳು ಸಾಂಘಿಕ ಪ್ರದರ್ಶನದಿಂದಾಗಿ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ 101 ರನ್‌ಗಳಿಂದ ಭರ್ಜರಿ ಜಯಗಳಿಸಿದೆ. ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಭಾರತ (Team India) 6 ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿಸಿತು. ಈ ಸವಾಲನ್ನು ಬೆನ್ನಟ್ಟಿದ ಆಫ್ರಿಕಾ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು 74 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ  ಸೋಲನ್ನು ಒಪ್ಪಿಕೊಂಡಿತು. ಆಫ್ರಿಕಾ ಮೊದಲ ಓವರ್‌ನಲ್ಲೇ ಕ್ವಿಂಟಾನ್‌ ಡಿ ಕಾಕ್‌ ವಿಕೆಟ್‌ ಕಳೆದುಕೊಂಡಿತು. ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಲ್ಲದ ಕಾರಣ ಸುಲಭವಾಗಿ ಸೋತಿತು. ಆಫ್ರಿಕಾ ಪರ ಬ್ರೇವಿಸ್‌ 22 ರನ್‌ ಹೊಡೆದರು. ಭಾರತದ ಪರ ಅರ್ಶ್‌ದೀಪ್‌ ಸಿಂಗ್‌, ಬುಮ್ರಾ, ವರುಣ್‌ ಚಕ್ರವರ್ತಿ, ಅಕ್ಷರ್ ಪಟೇಲ್‌ ತಲಾ 2 ವಿಕೆಟ್‌ ಪಡೆದರೆ ಹಾರ್ದಿಕ್‌ ಪಾಂಡ್ಯ ಮತ್ತು ಶಿವಂ ದುಬೆ ತಲಾ ಒಂದೊಂದು ವಿಕೆಟ್‌ ಪಡೆದರು.

ಪಾಂಡ್ಯ ಸ್ಫೋಟಕ ಆಟ:
17 ರನ್‌ಗಳಿಗೆ ಭಾರತ 2 ವಿಕೆಟ್‌ ಕಳೆದುಕೊಂಡಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಅಕ್ಷರ್‌ ಪಟೇಲ್‌ ಮತ್ತು ತಿಲಕ್‌ ವರ್ಮಾ ನಿಧಾನವಾಗಿ ಜೊತೆಯಾಟವಾಡಿ ಇನ್ನಿಂಗ್ಸ್‌ ಕಟ್ಟಿದರು.

ತಿಲಕ್‌ ವರ್ಮಾ ಔಟಾದ ಬಳಿಕ ಕ್ರೀಸ್‌ಗೆ ಬಂದ ಪಾಡ್ಯ ಸಿಕ್ಸರ್‌ ಬೌಂಡರ್‌ಗಳನ್ನು ಸಿಡಿಸಿ ರನ್‌ ಹಿಗ್ಗಿಸಿದರು. 25 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಪಾಂಡ್ಯ ಔಟಾಗದೇ 59 ರನ್‌(28 ಎಸೆತ, 6 ಬೌಂಡರಿ, 4 ಸಿಕ್ಸ್‌) ಚಚ್ಚಿದರು. ಮೊದಲ 10 ಓವರ್‌ಗಳಲ್ಲಿ ಭಾರತ 71 ರನ್‌ ಗಳಿಸಿತ್ತು. ಕೊನೆಯ 60 ಎಸೆತಗಳಲ್ಲಿ ಭಾರತ 104 ರನ್‌ ಹೊಡೆದಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page