Thursday, September 5, 2024

ಸತ್ಯ | ನ್ಯಾಯ |ಧರ್ಮ

ಆಂಬ್ಯುಲೆನ್ಸ್ ಸಿಗದೆ ಮಕ್ಕಳ ಶವಗಳನ್ನುಹೆಗಲ ಮೇಲೆ ಹೊತ್ತುಕೊಂಡು 15 ಕಿಲೋಮೀಟರ್‌ ನಡೆದ ಪೋಷಕರು!

ಮುಂಬೈ: ತೀವ್ರ ಜ್ವರದಿಂದ ಬಳಲುತ್ತಿದ್ದ ಇಬ್ಬರು ಬಾಲಕರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಮರಣಿಸಿದ್ದರು. ನಂತರ ಮಕ್ಕಳ ಕಳೇಬರಗಳನ್ನು ಊರಿಗೆ ಸಾಗಿಸಲು ಆಂಬುಲೆನ್ಸ್‌ ಸಿಗದ ಕಾರಣ ಮಕ್ಕಳ ಅಪ್ಪ- ಅಮ್ಮ ಶವಗಳನ್ನು ಹೆಗಲ ಮೇಲೆ ಹೊತ್ತು ಸಾಗಿದೆ ಘಟನೆ ಮಹಾರಾಷ್ಟ್ರದಿಂದ ವರದಿಯಾಗಿದೆ.

ಇದೀಗ ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪಟ್ಟಿಗಾಂವ್‌ ಎನ್ನುವ ಊರಿನ 10 ವರ್ಷದೊಳಗಿನ ದಂಪತಿಯ ಇಬ್ಬರು ಪುತ್ರರು ತೀವ್ರ ಜ್ವರಕ್ಕೆ ತುತ್ತಾಗಿದ್ದಾರೆ. ಇಬ್ಬರೂ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.

ಆದರೆ, ಸತ್ತ ಮಕ್ಕಳ ಶವಗಳನ್ನು ಅವರ ಊರಿಗೆ ಸಾಗಿಸಲು ಆ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೌಲಭ್ಯವಿರಲಿಲ್ಲ. ಹೀಗಾಗಿ ಪಾಲಕರು ಪುತ್ರರ ಶವವನ್ನು ಹೆಗಲ ಮೇಲೆ ಹೊತ್ತುಕೊಂಡೇ ಊರಿಗೆ ಹೊರಟರು. ಮಳೆಯಿಂದ ತೋಯ್ದ ಕೆಸರಿನ ರಸ್ತೆಯಲ್ಲಿ ಮಕ್ಕಳನ್ನು ಹೊತ್ತು ಸುಮಾರು 15 ಕಿಲೋಮೀಟರ್ ನಡೆದುಕೊಂಡು ತಮ್ಮ ಊರನ್ನು ತಲುಪಿದರು.

ಸೆಪ್ಟೆಂಬರ್ 1ರಂದು ಗರ್ಭಿಣಿ ಬುಡಕಟ್ಟು ಮಹಿಳೆ ಮನೆಯಲ್ಲಿಯೇ ಸತ್ತ ಮಗುವಿಗೆ ಜನ್ಮ ನೀಡಿದ್ದು, ಆ ಮಹಿಳೆಗೂ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸಿಗದೆ ಹೋಗಿದ್ದು ಘಟನೆಗೆ ಕಾರಣವಾಗಿತ್ತು. ಇದೀಗ ಜ್ವರದಿಂದ ಇಬ್ಬರು ಮಕ್ಕಳು ಸಾವನ್ನಪ್ಪಿರುವುದು ಇದೇ ತಿಂಗಳಲ್ಲಿ ನಡೆದಿರುವ ಎರಡನೇ ಘಟನೆಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page