Home ಬ್ರೇಕಿಂಗ್ ಸುದ್ದಿ ಮಗನ ಕಳೆದುಕೊಂಡು ಅಂಗಾಂಗ ದಾನ ಮಾಡಿ – ಮಾನವೀಯತೆಗೆ ಸಾಕ್ಷೀಯಾದ ಹಾಸನದ ಪೋಷಕರು

ಮಗನ ಕಳೆದುಕೊಂಡು ಅಂಗಾಂಗ ದಾನ ಮಾಡಿ – ಮಾನವೀಯತೆಗೆ ಸಾಕ್ಷೀಯಾದ ಹಾಸನದ ಪೋಷಕರು

ಹಾಸನ: ಅಪಘಾತದಲ್ಲಿ ಪುತ್ರನನ್ನು ಕಳೆದುಕೊಂಡ ದುಃಖದ ನಡುವೆಯೂ ಪೋಷಕರು ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿ ಕಟ್ಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರವಿ (31) ಮೂರು ತಿಂಗಳ ಹಿಂದೆ ಹೊಳೆನರಸೀಪುರ ತಾಲ್ಲೂಕಿನ ಪಾರಸನಹಳ್ಳಿ ಗ್ರಾಮದ ಬಳಿ ನಡೆದಿದ್ದ ಹಿಟ್ ಅಂಡ್ ರನ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ.

ವಿಪ್ರೋ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ರವಿ, ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿಯ ತದ್ರೂಪಿಯಂತಿದ್ದರು ಎನ್ನಲಾಗಿದೆ. ಅವರ ನಿಧನದಿಂದ ಕುಟುಂಬಸ್ಥರು ಹಾಗೂ ಸ್ನೇಹಿತರು ದುಃಖದಲ್ಲಿ ಮುಳುಗಿದ್ದಾರೆ. ಮಗನನ್ನು ಕಳೆದುಕೊಂಡ ನೋವಿನ ನಡುವೆಯೂ ರವಿ ಅವರ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದು, ಪುತ್ರನ ಅಂಗಾಂಗಗಳ ಮೂಲಕ ಹಲವು ಮಂದಿಗೆ ಹೊಸ ಬದುಕು ಸಿಗುವಂತೆ ಮಾಡಿದ್ದಾರೆ. ಪೋಷಕರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

You cannot copy content of this page

Exit mobile version