Saturday, July 27, 2024

ಸತ್ಯ | ನ್ಯಾಯ |ಧರ್ಮ

ಒಲಿಂಪಿಕ್ಸ್‌ 2024| ಮೊದಲೆರಡು ಚಿನ್ನದ ಪದಕ ಕೊರಳಿಗೇರಿಸಿಕೊಂಡ ಚೀನಾ

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಒಟ್ಟು 32 ಕ್ರೀಡೆಗಳ ಸುಮಾರು 1000 ಪದಕಗಳು ಸ್ಪರ್ಧಾಳುಗಳ ಕೊರಳನ್ನು ಅಲಂಕರಿಸಲು ಕಾಯುತ್ತಿದೆ. ಈ ಪದಕಗಳಿಗಾಗಿ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಪೈಪೋಟಿ ನಡೆಸುತ್ತಿದ್ದಾರೆ.

ಹಲವು ಕ್ರೀಡೆಗಳಿಗಾಗಿ ಪದಕ ಬೇಟೆ ಆರಂಭವಾಗಿದ್ದು, ಈ ಬಾರಿಯ ಒಲಿಂಪಿಕ್ಸ್‌ನ ಮೊದಲ ಚಿನ್ನದ ಪದಕವನ್ನು ಚೀನಾ ಗೆದ್ದುಕೊಂಡಿದ್ದರೆ, ಕಜಕಿಸ್ತಾನ್ ಕಂಚು ವಶಪಡಿಸಿಕೊಂಡಿದೆ.

ಜುಲೈ 26 ರಂದು ನಡೆದ ಉದ್ಘಾಟನಾ ಸಮಾರಂಭದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ 2024 ಅಧಿಕೃತವಾಗಿ ಪ್ರಾರಂಭವಾಗಿದೆ. 19 ದಿನಗಳ ಕಾಲ ನಡೆಯುವ ಈ ಕ್ರೀಡಾ ಸಂಭ್ರಮದಲ್ಲಿ 32 ಕ್ರೀಡೆಗಳ ಒಟ್ಟು 329 ಪದಕಗಳಿಗಾಗಿ ಸ್ಪರ್ಧೆಗಳು ನಡೆಯಲಿವೆ. ಪುರುಷರಿಗೆ 157, ಮಹಿಳೆಯರಿಗೆ 152 ಮತ್ತು ಮಿಶ್ರ ತಂಡಗಳಿಗೆ 20 ಸ್ಪರ್ಧೆಗಳು ನಡೆಯಲಿವೆ.

ಪ್ಯಾರಿಸ್ ಒಲಿಂಪಿಕ್ಸ್ 2024ರ ಪದಕ ಪಟ್ಟಿಯ ಪ್ರಕಾರ, ಇದುವರೆಗೆ 5 ವಿವಿಧ ದೇಶಗಳು ಒಟ್ಟು 6 ಪದಕಗಳನ್ನು ಗೆದ್ದಿವೆ. ಕಝಾಕಿಸ್ತಾನ್ ತನ್ನ ಮೊದಲ ಪದಕವನ್ನು ಗೆದ್ದುಕೊಂಡಿತು. 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಅವರು ಈ ಪದಕ ಗೆದ್ದರು. ಈ ಸ್ಪರ್ಧೆಯಲ್ಲಿ ಕಜಕಿಸ್ತಾನ 17-5 ಅಂತರದಿಂದ ಜರ್ಮನಿಯನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿತು. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ ಚೀನಾ ಪಾಲಾಯಿತು. 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಚೀನಾ ಪದಕ ಗೆದ್ದಿದೆ. ಹುವಾಂಗ್ ಯುಟಿಂಗ್ ಮತ್ತು ಶೆಂಗ್ ಲಿಹಾವೊ ಜೋಡಿ ಕೊರಿಯಾ ಜೋಡಿಯನ್ನು ಸೋಲಿಸಿತು. ಇಲ್ಲಿಯವರೆಗೆ ಚೀನಾ ಒಟ್ಟು 2 ಪದಕಗಳನ್ನು ಗೆದ್ದಿದೆ ಮತ್ತು ಇವೆರಡೂ ಚಿನ್ನ. ಮಹಿಳೆಯರ ಡೈವಿಂಗ್ ಸಿಂಕ್ರೊನೈಸ್ಡ್ 3 ಮೀಟರ್ ಸ್ಪ್ರಿಂಗ್‌ಬೋರ್ಡ್ ಪಂದ್ಯದಲ್ಲಿ ಅವರು ತಮ್ಮ ಎರಡನೇ ಚಿನ್ನವನ್ನು ಗೆದ್ದರು.

ಚೀನಾ ಮತ್ತು ಕಜಕಿಸ್ತಾನ್ ಹೊರತುಪಡಿಸಿ, ಅಮೆರಿಕ, ರಿಪಬ್ಲಿಕ್ ಆಫ್ ಕೊರಿಯಾ ಮತ್ತು ಗ್ರೇಟ್ ಬ್ರಿಟನ್ ತಲಾ ಒಂದು ಪದಕ ಗೆದ್ದಿವೆ. 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕೊರಿಯಾ ಬೆಳ್ಳಿ ಪದಕವನ್ನು ಗೆದ್ದರೆ, ಮಹಿಳೆಯರ ಸಿಂಕ್ರೊನೈಸ್ಡ್ 3 ಮೀಟರ್ ಸ್ಪ್ರಿಂಗ್‌ಬೋರ್ಡ್ ಸ್ಪರ್ಧೆಯಲ್ಲಿ ಅಮೆರಿಕ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು ಮತ್ತು ಅದೇ ಸ್ಪರ್ಧೆಯಲ್ಲಿ ಬ್ರಿಟನ್ ಕಂಚಿನ ಪದಕವನ್ನು ಗೆದ್ದುಕೊಂಡಿತು.

ಪ್ಯಾರಿಸ್ ಒಲಿಂಪಿಕ್ಸ್ 2024ರ ಪದಕ ಪಟ್ಟಿಯಲ್ಲಿ ಚೀನಾ 2 ಚಿನ್ನದೊಂದಿಗೆ ಅಗ್ರಸ್ಥಾನದಲ್ಲಿದೆ. ಅದರ ನಂತರ, ರಿಪಬ್ಲಿಕ್ ಆಫ್ ಕೊರಿಯಾ ಮತ್ತು ಅಮೆರಿಕ ತಲಾ ಒಂದು ಬೆಳ್ಳಿಯೊಂದಿಗೆ ಜಂಟಿಯಾಗಿ ಎರಡನೇ ಸ್ಥಾನದಲ್ಲಿವೆ. ಆದರೆ ಗ್ರೇಟ್ ಬ್ರಿಟನ್ ಮತ್ತು ಕಜಕಿಸ್ತಾನ್ ತಲಾ ಒಂದು ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ ಜಂಟಿಯಾಗಿ ಮೂರನೇ ಸ್ಥಾನದಲ್ಲಿವೆ.

Related Articles

ಇತ್ತೀಚಿನ ಸುದ್ದಿಗಳು