Tuesday, January 27, 2026

ಸತ್ಯ | ನ್ಯಾಯ |ಧರ್ಮ

ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣದ ಮಾಸ್ಟರ್ ಮೈಂಡ್ ಬಂಧನ

ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣದ ಮಾಸ್ಟರ್ ಮೈಂಡ್ ಲಲಿತ್ ಝಾ ಅವರನ್ನು ದೆಹಲಿ ಪೊಲೀಸರು ಗುರುವಾರ ತಡರಾತ್ರಿ ಬಂಧಿಸಿದ್ದಾರೆ.

ಸಂಸತ್ ಭದ್ರತಾ ಉಲ್ಲಂಘನೆ ಸಂಚು ಪ್ರಕರಣದ ಮಾಸ್ಟರ್ ಮೈಂಡ್ ಲಲಿತ್ ಮೋಹನ್ ಝಾ ಗುರುವಾರ ರಾತ್ರಿ ಕರ್ತವ್ಯ ಪಥ್ ಪೊಲೀಸ್ ಠಾಣೆಯಲ್ಲಿ ಶರಣಾದ ಬಳಿಕ ದೆಹಲಿ ಪೊಲೀಸರು ಬಂಧಿಸಿದ್ದಾರೆ.ಲಲಿತ್ ಮೋಹನ್ ಝಾ ಕೋಲ್ಕತ್ತಾ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಲಲಿತ್ ಝಾ ಘಟನೆಯ ವಿಡಿಯೋ ತೆಗೆದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಸಾಗರ್ ಶರ್ಮಾ (26) ಮತ್ತು ಮನೋರಂಜನ್ ಡಿ (34) ಬುಧವಾರ ಮಧ್ಯಾಹ್ನ ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಸಭಾಂಗಣಕ್ಕೆ ಜಿಗಿದು ಬಣ್ಣದ ಹೊಗೆಯ ಬಾಂಬ್‌ ಬಿಡುಗಡೆ ಮಾಡಿದರು. ಅದೇ ಸಮಯದಲ್ಲಿ, ಅಮೋಲ್ ಶಿಂಧೆ (25) ಮತ್ತು ನೀಲಂ ದೇವಿ (37) ಸಂಸತ್ತಿನ ಆವರಣದ ಹೊರಗೆ ಪ್ರತಿಭಟನಾ ಘೋಷಣೆಗಳನ್ನು ಕೂಗಿದರು. ಸಂಸತ್ತಿನ ಘಟನೆಯ ನಂತರ ಲಲಿತ್ ಮೋಹನ್ ಝಾ ಅವರು ಬಸ್ ಮೂಲಕ ರಾಜಸ್ಥಾನದ ನಾಗೌರ್ ತಲುಪಿದರು. ಅಲ್ಲಿ ತನ್ನ ಇಬ್ಬರು ಸ್ನೇಹಿತರನ್ನು ಭೇಟಿಯಾದರು.

ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಉಳಿದ ನಾಲ್ವರು ಆರೋಪಿಗಳಿಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಗುರುವಾರ ಏಳು ದಿನಗಳ ಕಸ್ಟಡಿಯಲ್ ರಿಮಾಂಡ್ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page