Tuesday, July 8, 2025

ಸತ್ಯ | ನ್ಯಾಯ |ಧರ್ಮ

‌ಚಂದ್ರಯಾನ 3 | ಮೋದಿ ಹೆಸರಿನ ಫೇಕ್‌ ಅಕೌಂಟ್‌ನಿಂದ ಕಾಮೆಂಟ್:‌ ಪಿಗ್ಗಿ ಬಿದ್ದ ಅಶ್ವಿನ್

ಇಸ್ರೋಗೆ ಅಭಿನಂದನೆ ಸಲ್ಲಿಸಿದ ಅಶ್ವಿನ್.. ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ..! ಅಸಲಿ ವಿಷಯ ತಿಳಿದು ನಗುತ್ತಿರುವ ನೆಟ್ಟಿಗರು..

ಇಸ್ರೋ ವಿಜ್ಞಾನಿಗಳ ಹಿರಿಮೆಯನ್ನು ಇಡೀ ಜಗತ್ತಿಗೆ ಸಾರಿದ ಚಂದ್ರಯಾನ 3 ಮಿಷನ್ ಯಶಸ್ವಿಯಾದ ನಂತರ ಭಾರತ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ಈ ಹಿನ್ನಲೆಯಲ್ಲಿ ದೇಶದ ಪ್ರಮುಖ ರಾಜಕೀಯ ನಾಯಕರು, ಸಿನಿಮಾ ತಾರೆಯರು, ಭಾರತದ ಕ್ರಿಕೆಟಿಗರು ಇಸ್ರೋ ಬಗ್ಗೆ ಪ್ರಶಂಸೆ, ಅಭಿನಂದನೆಗಳ ಸುರಿಮಳೆಗೈಯುತ್ತಿದ್ದಾರೆ. ಆದರೆ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಸ್ರೋ ತಂಡವನ್ನು ಅಭಿನಂದಿಸಿ ಮಾಡಿರುವ ಟ್ವೀಟ್ ಸದ್ಯ ವೈರಲ್ ಆಗಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ.

ಹೌದು, ಅಶ್ವಿನ್‌ ಟ್ವೀಟ್‌ ವೈರಲ್‌ ಆಗಲು ಅವರೇ ಕಾರಣ.

“ಇತಿಹಾಸ ಸೃಷ್ಟಿ, ಇಸ್ರೋದ ಅತ್ಯುತ್ತಮ ಯಶಸ್ಸಿಗೆ ಅಭಿನಂದನೆಗಳು” ಎಂದು ಅಶ್ವಿನ್ ಟ್ವೀಟ್ ಮಾಡಿದ್ದರು.

ಅಶ್ವಿನ್ ಜೊತೆಗೆ ಹಲವು ಕ್ರಿಕೆಟಿಗರು ಇಸ್ರೋ ತಂಡವನ್ನು ಅಭಿನಂದಿಸಿದ್ದಾರೆ. ಆದರೆ ಅಶ್ವಿನ್ ಟ್ವೀಟ್ ಗೆ ಮಾತ್ರ ಅನಿರೀಕ್ಷಿತ ವ್ಯಕ್ತಿಯಿಂದ ಉತ್ತರ ಬಂದಿದೆ. ಆದರೆ ಆ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಅಲ್ಲ. ಹೌದು, ಟ್ವಿಟರ್ ನಲ್ಲಿ ಪ್ರಧಾನಿ ಮೋದಿ ಹೆಸರಲ್ಲಿ ಫೇಮಸ್ ಫೇಕ್ ಅಕೌಂಟ್ ಇದೆ. ಅದು ನರೇಂದ್ರ ಮೋದಿ ಪರೋಡಿ.
ಆ ಖಾತೆಯಿಂದ ಅಶ್ವಿನ್ ಪೋಸ್ಟಿಗೆ ಉತ್ತರ ಬರೆದಿದ್ದಾರೆ ‘ಪ್ರತಿಯೊಬ್ಬ ಭಾರತೀಯನಿಗೆ ಶುಭವಾಗಲಿ. ಈ ಅದ್ಭುತ ಸಾಧನೆಯನ್ನು ಸಾಧ್ಯವಾಗಿಸಿದ ಇಸ್ರೋಗೆ ಧನ್ಯವಾದಗಳು’ ಎಂಬ ಉತ್ತರ ಬಂತು. ಈ ಬಗ್ಗೆ ಅಶ್ವಿನ್ ಅವರು, ಪ್ರಧಾನಿ ಮೋದಿ ನಿಜವಾಗಿಯೂ ಉತ್ತರಿಸಿದರು ಎಂದುಕೊಂಡು ‘ಸರ್, ಹೇಗಿದ್ದೀರಾ..? ನನ್ನ ಟ್ವೀಟ್‌ಗೆ ನೀವು ಉತ್ತರಿಸಿದ್ದಕ್ಕಾಗಿ ನನಗೆ ತುಂಬಾ ಹೆಮ್ಮೆ ಎನ್ನಿಸುತ್ತಿದೆ. ಇದೊಂದು ದೊಡ್ಡ ಗೌರವ’ ಎಂದು ಉತ್ತರಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page