Monday, June 17, 2024

ಸತ್ಯ | ನ್ಯಾಯ |ಧರ್ಮ

ಜನರ ಗಮನ ಬೇರೆಡೆಗೆ ಸೆಳೆಯುವುದು ಬಿಜೆಪಿ ಚುನಾವಣಾ ತಂತ್ರದ ಭಾಗ – ರಾಹುಲ್ ಗಾಂಧಿ

ನಾಲ್ಕು ರಾಜ್ಯಗಳ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಗೆಲುವನ್ನು ಕಾಣೋದು ನಿಚ್ಚಳ ಎಂಬುದಾಗಿ ರಾಹುಲ್ ಗಾಂಧಿ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಕಂಡ ಗೆಲುವಿನಿಂದ ತೆಲಂಗಾಣ, ಮಧ್ಯ ಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿನ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಬಿಜೆಪಿಯು ತನ್ನ ಸಾಧನೆಗಳಿಂದಲ್ಲ, ಬದಲಾಗಿ ಜನರ ಗಮನವನ್ನು ಬೇರೆಡೆ ಹರಿಸಿ ಮತ್ತು ವಿಷಯಗಳನ್ನು ತಿರುಚುವ ಮೂಲಕ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಿತ್ತು. ಹೀಗಾಗಿ ಏನನ್ನೂ ತಿರುಚಲು ಬಿಜೆಪಿಗೆ ಸಾಧ್ಯವಾಗದ ರೀತಿಯಲ್ಲಿ ಕರ್ನಾಟಕದಲ್ಲಿ ನಾವು ಬಿಜೆಪಿಯನ್ನು ಎದುರಿಸಿ ಗೆಲುವು ಸಾಧಿಸಿದೆವು. ಬೇರೆಡೆ ಗಮನ ಹರಿಸುವ ಬಿಜೆಪಿಯ ಯೋಜನೆಯನ್ನು ಎದುರಿಸುವುದು ಹೇಗೆ ಎಂದು ಕರ್ನಾಟಕ ಚುನಾವಣೆಯಿಂದ ನಾವು ಪಾಠ ಕಲಿತಿದ್ದೇವೆ’ ಎಂದರು.

ಬಿಜೆಪಿಯು ಒಂದು ರಾಷ್ಟ್ರ ಒಂದು ಚುನಾವಣೆ ಮತ್ತು ಇಂಡಿಯಾ ಹೆಸರು ಬದಲಾವಣೆ ಕೂಡಾ ಜನರ ಗಮನ ಬೇರೆಡೆಗೆ ಸೆಳೆಯುವ ತಂತ್ರಗಾರಿಕೆ ಎಂಬುದು ನಮಗೆ ತಿಳಿದಿದೆ. ಬಿಜೆಪಿ ಸಂಸದ ರಮೇಶ್‌ ಬಿಧುರಿ ಮತ್ತು ಕಾಂಗ್ರೆಸ್‌ ಸಂಸದ ದಾನಿಶ್‌ ಅಲಿ ಅವರ ವಾಗ್ವಾದದ ವಿವಾದ ಕೂಡಾ ಬಿಜೆಪಿ ತಂತ್ರಗಾರಿಕೆಯ ಇನ್ನೊಂದು ಭಾಗ. ಇದು ಜನರ ಗಮನವನ್ನು ಬೇರೆಡೆಗೆ ಸೆಳೆದು ಗೊಂದಲಗಳನ್ನು ಸೃಷ್ಟಿಸುವ ಬಿಜೆಪಿಯ ತಂತ್ರವಾಗಿದೆ ಎಂದು ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತೆಲಂಗಾಣ, ಮಧ್ಯ ಪ್ರದೇಶ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರ ಹಿಡಿಯುವುದು ಶತಃಸಿದ್ದ. ರಾಜಸ್ಥಾನದಲ್ಲೂ ಸಹ ಅತ್ಯಂತದ ಸಮೀಪದ ಸ್ಪರ್ಧೆ ಇದೆ. ಪಕ್ಷ ಇನ್ನಷ್ಟು ಸಕ್ರಿಯವಾದರೆ ಕಾಂಗ್ರೆಸ್‌ ಅಲ್ಲೂ ಕೂಡಾ ಅಧಿಕಾರ ಹಿಡಿಯಲಿದೆ. ಅಲ್ಲದೆ, ಮುಂಬರುವ ದಿನಗಳಲ್ಲಿ ನಡೆಯಲಿರುವ ಎಲ್ಲ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ. 2024ರ ಲೋಸಕಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಆಘಾತ ಎದುರಿಸಲಿದೆ ಎಂದರು.

Related Articles

ಇತ್ತೀಚಿನ ಸುದ್ದಿಗಳು