Friday, October 17, 2025

ಸತ್ಯ | ನ್ಯಾಯ |ಧರ್ಮ

SSLC – 206 ಅಂಕ PUC – 198 ಅಂಕ ತೆಗೆದರೆ ಪಾಸ್‌ – ಶಿಕ್ಷಣ ಸಚಿವ ಮಧುಬಂಗಾರಪ್ಪ

ಬೆಂಗಳೂರು : 2025-26ನೇ ಸಾಲಿನಿಂದ ಪರೀಕ್ಷಾ (Exam) ಪಾಸಿಂಗ್ ಅಂಕವನ್ನು (Passing Marks) ಕಡಿತಗೊಳಿಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ಒಟ್ಟು 625 ಅಂಕಗಳಿಗೆ 206 ಅಂಕ ಗಳಿಸಿದರೆ ಪಾಸ್‌ ಆಗಬಹುದು. ಜೊತೆಗೆ ಪ್ರತಿ ವಿಷಯದಲ್ಲೂ ವಿದ್ಯಾರ್ಥಿ ಕನಿಷ್ಠ 30 ಅಂಕ ಪಡೆಯಲೇಬೇಕು ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ (Madhu Bangarappa) ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷೆಯ ಅವ್ಯವಸ್ಥೆಯನ್ನು ಸುಧಾರಣೆ ತರೋದು ಅತಿ ಮುಖ್ಯವಾಗುತ್ತದೆ. ಹೀಗಾಗಿ ತುಂಬಾ ಚರ್ಚೆಗಳು ಆಗುತ್ತಿತ್ತು. ಮಕ್ಕಳು ಬೇರೆ ವ್ಯವಸ್ಥೆಯಲ್ಲಿ ಪಾಸ್ ಆದರೆ ಮುಂದೆ ತೊಂದರೆಯಾಗುತ್ತದೆ. ಹೀಗಾಗಿ ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಸುತ್ತಿದ್ದೇವೆ ಎಂದರು. ನಾವು ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅನುಕೂಲತೆಗಾಗಿ ಮೂರು ಪರೀಕ್ಷೆಗಳನ್ನು ತಂದೆವು. ಸರ್ಕಾರಿ ಶಾಲೆಗಳಲ್ಲಿ ಒಳ್ಳೆಯ ಟೀಚರ್‌ಗಳಿದ್ದಾರೆ. ಆದರೆ ಅವರನ್ನು ಬಳಸಿಕೊಳ್ಳುವುದರಲ್ಲಿ ಇಲಾಖೆ ಎಡವುತ್ತಿತ್ತು. ಶಿಕ್ಷಕರು ಅದನ್ನು ಸರಿಪಡಿಸಿಕೊಂಡು ಪಾಠ ಮಾಡುತ್ತಿದ್ದಾರೆ. ಸಿಎಂ ಕೂಡ ಗ್ರೇಸ್ ಮಾರ್ಕ್ಸ್ ನೀಡಬಾರದು ಎಂದು ಹೇಳಿದರು. ಅವರು 75% ಫಲಿತಾಂಶದ ಟಾರ್ಗೆಟ್ ನೀಡಿದ್ದರು. ಆದರೆ ಈ ವರ್ಷ ನಾವು 79%ಗೆ ರೀಚ್ ಆಗಿದ್ದೇವೆ ಎಂದು ಮಾಹಿತಿ ನೀಡಿದರು.

2025-26ನೇ ಸಾಲಿನಿಂದ ಪರೀಕ್ಷಾ ಪಾಸಿಂಗ್ ಅಂಕವನ್ನು ಕಡಿತಗೊಳಿಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ ಕನಿಷ್ಠ 206 ಅಂಕ ಗಳಿಸಿದರೆ ಪಾಸ್ ಆಗುತ್ತಾರೆ. ಪ್ರತಿ ವಿಷಯದಲ್ಲಿ ಕನಿಷ್ಠ 30 ಅಂಕ ಪಡೆಯಲೇ ಬೇಕು. ಇದರೊಂದಿಗೆ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 198ಅಂಕ ಪಡೆದರೆ ಪಾಸ್ ಆಗುತ್ತಾರೆ. ಪ್ರತಿ ವಿಷಯದಲ್ಲೂ ಲಿಖಿತ ಹಾಗೂ ಆಂತರಿಕ ಅಂಕ ಸೇರಿ 30 ಅಂಕ ಬರೋದು ಕಡ್ಡಾಯ ಎಂದು ಮಧಿ ಬಂಗಾರಪ್ಪ ಸೂಚಿಸಿದರು.ಇನ್ನು ಜಾತಿ ಜನಗಣತಿ ಸಮೀಕ್ಷೆಯಲ್ಲಿ ಶಿಕ್ಷಕರು ಭಾಗವಹಿಸುತ್ತಿದ್ದಾರೆ. ಅವರಿಗೆಲ್ಲಾ ನಾನು ಧನ್ಯವಾದಗಳನ್ನು ಹೇಳುತ್ತೇನೆ. ಇದೇ ವೇಳೆ ಶಿಕ್ಷಕರೊಬ್ಬರು ಸಾವನ್ನಪ್ಪಿದ್ದಾರೆ. ಸಾಕಷ್ಟು ಜನ ಶಿಕ್ಷಕರಿಗೆ ಸಾರ್ವಜನಿಕರು ತೊಂದರೆ ಕೊಟ್ಟಿದ್ದಾರೆ. ಆದರೂ ಕೂಡ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ಸ್ಪೆಷಲ್ ಕ್ಲಾಸ್ ಮಾಡಿ ಪಾಠವನ್ನು ಮುಗಿಸಲಿದ್ದಾರೆ ಎಂದರು.

ಪಾಸಿಂಗ್ ಮಾರ್ಕ್ಸ್ ಕಡಿತ ವಿಚಾರವನ್ನು ನಾವು ಪಬ್ಲಿಕ್ ಡೋಮೆನ್‌ಗೆ ಹಾಕಿದ್ದೆವು. 33 ಅಂಕದ ಪರವಾಗಿ 701 ಪತ್ರಗಳು ಬಂದಿದ್ವು. 35 ಅಂಕದ ಪರವಾಗಿ 8 ಪತ್ರಗಳು ಬಂದಿದ್ವು. ಹೀಗಾಗಿ 2025-26ನೇ ಸಾಲಿನಿಂದ 33% ಅನ್ನು ಜಾರಿಗೆ ತರುತ್ತಿದ್ದೇವೆ ಎಂದರು.

ರಾಜ್ಯದಲ್ಲಿ 308 ಪಬ್ಲಿಕ್ ಶಾಲೆಗಳಿವೆ. ಆದರೆ ಇಂದು 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳೆಂದು ಘೋಷಣೆ ಮಾಡುತ್ತಿದ್ದೇವೆ. ಅದರಲ್ಲಿ 500 ಶಾಲೆಗಳನ್ನು ಎಡಿಬಿ ಸಹಯೋಗದೊಂದಿಗೆ ಉನ್ನತೀಕರಣ ಮಾಡಲಾಗುತ್ತದೆ. ಜೊತೆಗೆ 200 ಶಾಲೆಗಳನ್ನು ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯ ನಿಧಿಯಿಂದ ಉನ್ನತೀಕರಣ ಹಾಗೂ 100 ಕೆಪಿಎಸ್‌ ಗಳನ್ನು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದಿಂದ ಉನ್ನತೀಕರಿಸಲು ನಿರ್ಧಾರ ಮಾಡಲಾಗಿದೆ. ಕೆಪಿಎಸ್‌ಗೆ 1100ಕ್ಕೂ ಹೆಚ್ಚು ಮಕ್ಕಳು ಬರುವ ನಿರೀಕ್ಷೆ ಇದೆ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page