Home ದೇಶ ಪತಂಜಲಿ ಸೋಹನ್‌ ಪಾಪ್ಡಿ | ಪತಂಜಲಿ ಕಂಪನಿಯ ಅಧಿಕಾರಿ ಜೈಲುಪಾಲು

ಪತಂಜಲಿ ಸೋಹನ್‌ ಪಾಪ್ಡಿ | ಪತಂಜಲಿ ಕಂಪನಿಯ ಅಧಿಕಾರಿ ಜೈಲುಪಾಲು

0

ಪತಂಜಲಿ ಸಂಸ್ಥೆಯ ಸೋಹನ್‌ ಪಾಪ್ಡಿ ಆಹಾರ ಪರೀಕ್ಷೆಯ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಮತ್ತು ಇದೇ ಕಾರಣಕ್ಕಾಗಿ ಕಂಪನಿಗೆ ಸೇರಿದ ಆಧಿಕಾರಿ ಸೇರಿದಂತೆ ಮೂವರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಪಿತ್ರೋಗಢ್‌ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಈ ಆದೇಶವನ್ನು ಹೊರಡಿಸಿದ್ದಾರೆ. ಅಪರಾಧಿಗಳಲ್ಲಿ ಒಬ್ಬರಾದ ಅಭಿಷೇಕ್ ಕುಮಾರ್ ಪತಂಜಲಿ ಸಂಸ್ಥೆಯಲ್ಲಿ ಸಹಾಯಕ ವ್ಯವಸ್ಥಾಪಕ.

2019ರಲ್ಲಿ ಬೆರಿನಾಗ್‌ ‌ಪ್ರದೇಶದ ಪಿಟ್ರೋಗಢ್‌ನ ಮುಖ್ಯ ಮಾರುಕಟ್ಟೆಯಲ್ಲಿರುವ ಅಂಗಡಿಯೊಂದಕ್ಕೆ ಆಹಾರ ಸುರಕ್ಷತಾ ನಿರೀಕ್ಷಕರು ಭೇಟಿ ನೀಡಿದ ಸಂದರ್ಭದಲ್ಲಿ ಪತಂಜಲಿ ಸೋಹನ್ ಪಾಪ್ಡಿಯ ಗುಣಮಟ್ಟದ ಕುರಿತು ಮೊದಲ ಬಾರಿಗೆ ಪ್ರಶ್ನೆಗಳು ಹುಟ್ಟಿದ್ದವು.

ಸಿಹಿತಿಂಡಿಯ ಮಾದರಿಗಳ ಫೋರೆನ್ಸಿಕ್ ಪರೀಕ್ಷೆಯನ್ನು ಮೇ 18, 2019ರಂದು ನಡೆಸಲಾಯಿತು. ಇದರ ನಂತರ ಹರಿದ್ವಾರದಲ್ಲಿರುವ ಕಂಪನಿಯ ಮುಖ್ಯ ಕಚೇರಿ ಮತ್ತು ರಾಮನಗರ ಮೂಲದ ಕನಾಹಾ ಜಿ ಡಿಸ್ಟ್ರಿಬ್ಯೂಟರ್‌ಗೆ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಪ್ರಕಟಣೆ ವರದಿ ಮಾಡಿದೆ.

ಲ್ಯಾಬ್ ವರದಿಯನ್ನು ಡಿಸೆಂಬರ್ 2020ರಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸಲ್ಲಿಸಲಾಯಿತು. ವರದಿಯು ಗುಣಮಟ್ಟದ ಕುರಿತಾದ ಅನುಮಾನಗಳನ್ನು ನಿಜವೆಂದು ಸಾಬೀತುಪಡಿಸಿದ್ದವು.

ನಂತರ, ಅಧಿಕಾರಿಗಳು ವಿತರಕ ಅಜಯ್ ಜೋಶಿ, ಕುಮಾರ್ ಮತ್ತು ಉದ್ಯಮಿ ಲೀಲಾ ಧರ್ ಪಾಠಕ್ ವಿರುದ್ಧ ಪ್ರಕರಣಗಳನ್ನು ದಾಖಲಿಸಿದರು.

ನ್ಯಾಯಾಲಯವು ಜೋಶಿ, ಕುಮಾರ್ ಮತ್ತು ಪಾಠಕ್ ಅವರಿಗೆ ಕ್ರಮವಾಗಿ 10,000, 25,000 ಮತ್ತು 5,000 ರೂ.ಗಳ ದಂಡದೊಂದಿಗೆ ತಲಾ ಆರು ತಿಂಗಳ ಶಿಕ್ಷೆಯನ್ನು ವಿಧಿಸಿದೆ.

“ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾದ ಪುರಾವೆಗಳು ಉತ್ಪನ್ನದ ಗುಣಮಟ್ಟವನ್ನು ಸ್ಪಷ್ಟವಾಗಿ ಪ್ರದರ್ಶಿಸಿವೆ” ಎಂದು ಆಹಾರ ಸುರಕ್ಷತೆ ಅಧಿಕಾರಿಯನ್ನು ಉಲ್ಲೇಖಿಸಿ ಪ್ರಕಟಣೆ ತಿಳಿಸಿದೆ.

ಪತಂಜಲಿ ಇತ್ತೀಚೆಗೆ ತನ್ನ ಆಯುರ್ವೇದ ಔಷಧಿಗಳ ಕಾರಣಕ್ಕಾಗಿ ಸುಪ್ರೀಂ ಕೋರ್ಟಿನಲ್ಲಿ ಛೀಮಾರಿ ಎದುರಿಸಿತ್ತು.

You cannot copy content of this page

Exit mobile version