Friday, July 11, 2025

ಸತ್ಯ | ನ್ಯಾಯ |ಧರ್ಮ

ಪತ್ರಕರ್ತರಿಗೆ ಲಕ್ಷಗಟ್ಟಲೆ ದುಡ್ಡು: ಸಿಎಂ ಕಚೇರಿಗೆ ಪತ್ರ ಬರೆದ ಪತ್ರಿಕಾ ಸಂಸ್ಥೆ

ಬೆಂಗಳೂರು: ಪತ್ರಕರ್ತರಿಗೆ ದೀಪಾವಳಿ ಗಿಫ್ಟ್‌ ನೆಪದಲ್ಲಿ ತಲಾ 2.5 ಲಕ್ಷ ರುಪಾಯಿ ನಗದು ನೀಡಿದ ಕ್ರಮವನ್ನು ಖಂಡಿಸಿ ಕನ್ನಡದ ಪ್ರತಿಷ್ಠಿತ ಪತ್ರಿಕಾ ಸಂಸ್ಥೆಯೊಂದು ಸಿಎಂ ಕಚೇರಿಗೆ ಪತ್ರ ಬರೆದಿದ್ದು, ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತ ಮಾಹಿತಿ ʻಪೀಪಲ್‌ ಮೀಡಿಯಾʼಗೆ ಲಭ್ಯವಾಗಿದ್ದು, ಕನ್ನಡದ ವಿಶ್ವಾಸಾರ್ಹ ಪತ್ರಿಕೆಯೊಂದರ ಮುಖ್ಯಸ್ಥರು ಬರೆದ ಪತ್ರಕ್ಕೆ ಸಿಎಂ ಕಚೇರಿಯೂ ಪ್ರತಿಕ್ರಿಯಿಸಿದ್ದು, ಆಗಿರುವ ತಪ್ಪಿಗೆ ವಿಷಾದ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.

ದೀಪಾವಳಿ ಸಂದರ್ಭಕ್ಕೆ ಆಯ್ದ ಕೆಲ ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಸಿಹಿ ತಿಂಡಿಗಳ ಗಿಫ್ಟ್‌ ಪ್ಯಾಕ್‌ ಒಂದನ್ನು ನೀಡಲಾಗಿತ್ತು. ಗಿಫ್ಟ್‌ ಪ್ಯಾಕ್‌ ತೆರೆದ ಪತ್ರಕರ್ತರಿಗೆ ಅಚ್ಚರಿ ಕಾದಿದ್ದು, ಪ್ರತಿ ಗಿಫ್ಟ್‌ ಪ್ಯಾಕ್‌ನಲ್ಲೂ 2.5 ಲಕ್ಷ ರುಪಾಯಿ ನಗದು ಇಡಲಾಗಿತ್ತು.

ವಿಶ್ವಾಸಾರ್ಹ ಮಾಧ್ಯಮ ಸಂಸ್ಥೆಯ ಕನ್ನಡ ಮತ್ತು ಇಂಗ್ಲಿಷ್‌ ಪತ್ರಿಕೆಗಳ ವರದಿಗಾರರಿಗೂ ಈ ಗಿಫ್ಟ್‌ ಬಾಕ್ಸ್‌ ಕೊಡಲಾಗಿದ್ದು, ಕೂಡಲೇ ಈ ವರದಿಗಾರರು ಹಣವನ್ನು ಹಿಂದಿರುಗಿಸಿ ತಮ್ಮ ಸಂಸ್ಥೆಯ ಮುಖ್ಯಸ್ಥರ ಗಮನಕ್ಕೆ ಈ ವಿಷಯವನ್ನು ತಂದಿದ್ದರು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಮುಖ್ಯಸ್ಥರು ಸಿಎಂ ಕಚೇರಿಗೆ ಪತ್ರ ಬರೆದು ತಮ್ಮ ಅಸಮಾಧಾನ, ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ಈ ನಡುವೆ ಸಚಿವರೊಬ್ಬರು ಹಲವು ಪತ್ರಕರ್ತರಿಗೆ ದೀಪಾವಳಿ ಪ್ರಯುಕ್ತ ಚಿನ್ನದ ಕಾಯ್ನ್‌ ಗಳನ್ನು ಗಿಫ್ಟ್‌ ನೀಡಿದ್ದಾರೆ ಎಂಬ ಮಾಹಿತಿಗಳು ಮಾಧ್ಯಮ ವಲಯದಲ್ಲಿ ಹರಿದಾಡುತ್ತಿದೆ.

ಈ ಎಲ್ಲ ಬೆಳವಣಿಗೆಗಳ ಕುರಿತು ಹಿರಿಯ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಕುರಿತು ಸರಿಯಾದ ತನಿಖೆಯಾಗಲಿ, ಭ್ರಷ್ಟ ಪತ್ರಕರ್ತರಿಂದಾಗಿ ಪ್ರಾಮಾಣಿಕ ಪತ್ರಕರ್ತರೂ ತಲೆ ಎತ್ತಿ ಓಡಾಡಲು ಆಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಪತ್ರಕರ್ತರಿಗೆ ಝಣಝಣಝಣ ಕಾಂಚಾಣ ಕೊಟ್ಟ ಸಿಎಂ ಕಚೇರಿ. ದೀಪಾವಳಿ ಸಿಹಿ ತಿಂಡಿ ಇದ್ದ ಗಿಫ್ಟ್ ಪ್ಯಾಕ್ ನಲ್ಲಿ 2.5 ಲಕ್ಷ ರುಪಾಯಿ ನೋಡಿ ಬೆರಗಾದ ಪತ್ರಕರ್ತರು 😱

ಪತ್ರಕರ್ತರಿಗೆ ಹಣ ಹಂಚಿಕೆ: ಲೋಕಾಯುಕ್ತ ತನಿಖೆಗೆ ಹಿರಿಯ ಪತ್ರಕರ್ತರ ಆಗ್ರಹ

Related Articles

ಇತ್ತೀಚಿನ ಸುದ್ದಿಗಳು

You cannot copy content of this page