Tuesday, July 29, 2025

ಸತ್ಯ | ನ್ಯಾಯ |ಧರ್ಮ

PayCM ವಿವಾದ : ವಿಚಾರಣೆ ನೆಪದಲ್ಲಿ ಕಾಂಗ್ರೆಸ್ ಮುಖಂಡನ ಬಂಧನ.!

ನಿನ್ನೆ ಸೆ.21 ರ ಇಡೀ ದಿನ ಬಿತ್ತಿಪತ್ರ ಮತ್ತು ಜಾಲತಾಣಗಳ ಪ್ರಮುಖ ಆಕರ್ಷಣೆಯ ಕೇಂದ್ರಬಿಂದು ಆಗಿದ್ದ “PayCM ಅಭಿಯಾನ” ಸಂಜೆಯ ವೇಳೆಗೆ ಸೇಡು ತೀರಿಸುವ ಹಂತಕ್ಕೆ ಬೆಳೆದಿದೆ. ನಿನ್ನೆ ತಡರಾತ್ರಿಯಲ್ಲಿ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮಾಜಿ ಅಧ್ಯಕ್ಷ ಬಿ.ಆರ್.ನಾಯ್ಡು ಅವರನ್ನು ಹೈಗ್ರೌಂಡ್ ಪೊಲೀಸರು ವಿಚಾರಣೆ ನೆಪದಲ್ಲಿ ಮನೆಗೆ ಬಂದು ಕರೆದುಕೊಂಡು ಹೋಗಿದ್ದಾರೆ.

ಇದರ ಜೊತೆಗೆ ಕೆಆರ್ ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಿ.ಎ ಗೋಪಾಲ್ ಅವರ ಮಗ ಗಗನ್ ಅವರನ್ನು ಕೂಡ ಸದಾಶಿವನಗರ ಪೊಲೀಸ್ ಠಾಣೆಯ ಪೊಲೀಸರು ಮಧ್ಯರಾತ್ರಿ ಕರೆದುಕೊಂಡು ಹೋಗಿದ್ದಾರೆ.

ಸಧ್ಯ ಈ ಬೆಳವಣಿಗೆ ಕಾಂಗ್ರೆಸ್ ಪಕ್ಷದ ವಲಯದಲ್ಲಿ ಅತ್ಯಂತ ಹೆಚ್ಚು ಚರ್ಚಿತ ವಿಚಾರವಾಗಿದ್ದು, ‘40% ಲಂಚ ಪಡೆದವರನ್ನು ವಿಚಾರಣೆ ಮಾಡುವ ಬದಲಾಗಿ, ಆರೋಪಿಸಿದವರನ್ನು ಗುರಿ ಮಾಡಲಾಗಿದೆ’ ಎಂದು ಹೇಳಲಾಗುತ್ತಿದೆ. ನಿನ್ನೆಯ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹ ಈ ಬಿತ್ತಿ ಪತ್ರ ಅಂಟಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಮಾತನಾಡಿದ್ದು ಅಧಿಕಾರ ದುರುಪಯೋಗದ ಆರೋಪವೂ ಮುಖ್ಯಮಂತ್ರಿಗೆ ತಗಲುವ ಸಾಧ್ಯತೆ ಇದೆ.

ವಿಚಾರಣೆ ನೆಪದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಇಂದು ಸದನದಲ್ಲಿ ಬಿಸಿಬಿಸಿ ಚರ್ಚೆಗೂ ದಾರಿಯಾಗುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.

ಒಟ್ಟಿನಲ್ಲಿ ಆಡಳಿತ ಪಕ್ಷದ ಟೀಕೆಗೆ ಬಂಧನದ ಬೀತಿ ಹುಟ್ಟಿಸಿ ಬಿಜೆಪಿ ಸರ್ಕಾರ ಜನತೆಗೆ ಯಾವ ಸಂದೇಶ ಕೊಡಲಿದೆ ಎಂಬುದು ಸಧ್ಯಕ್ಕೆ ಎದ್ದಿರುವ ಪ್ರಮುಖ ಪ್ರಶ್ನೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page