#paycm ಪೋಸ್ಟರ್‌ ಅಂಟಿಸಿದ ಸಿದ್ದು, ಡಿಕೆಶಿ ಸೇರಿ ಕಾಂಗ್ರೆಸ್‌ನ ಹಲವು ನಾಯಕರು ವಶಕ್ಕೆ

ಬೆಂಗಳೂರು: ಪೀಸಿಎಂ ಅಭಿಯಾನಕ್ಕೆ ಸ್ವತಃ ವಿರೂಧ ಪಕ್ಷದ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್ಸಿನ ಹಲವು ನಾಯಕರುಗಳು ಬೊಮ್ಮಾಯಿ ಚಿತ್ರ ಹೊಂದಿರುವ ಕ್ಯೂ ಆರ್‌ ಕೋಡಿನ ಪೋಸ್ಟರ್‌ ಅನ್ನು ಅಂಟಿಸುವುದರ ಮೂಲಕ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ದ ಆಕ್ರೋಶ ಹೊರಹಾಕಿದರು.

ಈ ಅಭಿಯಾನದಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರನ್ನು ಸೇರಿದಂತೆ ಕಾಂಗ್ರೆಸ್ಸಿನ ಹಲವು ನಾಯಕರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕಾಂಗ್ರೆಸ್ಸಿನ ಹಲವು ನಾಯಕರು ಟ್ವೀಟ್‌ ಮಾಡುವ ಮೂಲಕ, 40ಪರ್ಸೆಂಟ್ ಕಮಿಷನ್ ಬೊಮ್ಮಾಯಿ ಸರ್ಕಾರವು ಎಷ್ಟು ವಿಚಲಿತವಾಗಿದೆ ಎಂದರೆ ಅದು ಕರ್ನಾಟಕ ಪೊಲೀಸರಿಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಬದಲು ಪೋಸ್ಟರ್‌ಗಳನ್ನು ಹರಿದು ಹಾಕುವ ಮತ್ತು ವಿರೋಧ ಪಕ್ಷದ ನಾಯಕರನ್ನು ಬಂಧಿಸುವ ಕೆಲಸವನ್ನು ನೀಡಿದೆ. ಭ್ರಷ್ಟಾಚಾರದ ಅಸಹನೀಯ ದುರ್ವಾಸನೆಯಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವನ್ನು ಹೊರಹಾಕಲು ಜನರು ಕಾಯುತ್ತಿದ್ದಾರೆ ಎಂದು ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ.

https://twitter.com/rssurjewala/status/1573299875613380609?ref_src=twsrc%5Etfw%7Ctwcamp%5Etweetembed%7Ctwterm%5E1573299875613380609%7Ctwgr%5E1127ec3ed2553a5c1f748f3f75a691cb68a7f583%7Ctwcon%5Es1_&ref_url=https%3A%2F%2Fwww.prajavani.net%2Fkarnataka-news%2Fpaycm-poster-pastes-siddaramaiah-dk-shivakumar-ranadeep-singh-surjewala-detained-by-police-974512.html

Related Articles

ಇತ್ತೀಚಿನ ಸುದ್ದಿಗಳು