Tuesday, June 18, 2024

ಸತ್ಯ | ನ್ಯಾಯ |ಧರ್ಮ

ಮತ್ತೆ ಬಂದ್ ಆಗಲಿದೆ ಪೀಣ್ಯ ಫ್ಲೈ ಓವರ್! ಸರ್ವೀಸ್ ರಸ್ತೆ ಬಳಕೆಗೆ ಸೂಚನೆ

ಇದೇ ಜನವರಿ 16 ರ ರಾತ್ರಿ 11 ರಿಂದ ಜನವರಿ 19 ರ ಬೆಳಿಗ್ಗೆ 11 ರವರೆಗೆ 4 ದಿನಗಳ ಕಾಲ ಎಲ್ಲಾ ವಾಹನಗಳ ಸಂಚಾರಕ್ಕಾಗಿ ಪೀಣ್ಯ ಮೇಲ್ಸೇತುವೆಯನ್ನು ಮುಚ್ಚಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಯೋಜಿಸಿದೆ. ಈ ಬಗ್ಗೆ ಬೆಂಗಳೂರು ಸಂಚಾರ ವಿಭಾಗದ ಜಾಯಿಂಟ್ ಕಮೀಷನರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ತುಮಕೂರು ರಸ್ತೆ ಮುಂದಿನ ವಾರ ಬೃಹತ್‌ ವಾಹನ ದಟ್ಟಣೆ ಉಂಟಾಗಲಿದೆ ಎಂದು ವರದಿಯಾಗಿದೆ. 15-ಮೀಟರ್ ಅಗಲದ, 4.2-ಕಿಮೀ-ಉದ್ದದ ಫ್ಲೈಓವರ್ ಪೀಣ್ಯದಲ್ಲಿ ಪ್ರಾರಂಭವಾಗುತ್ತದೆ. ಇದು ತುಮಕೂರು ರಸ್ತೆಯ ನಾಗಸಂದ್ರದಲ್ಲಿ ಕೊನೆಗೊಳ್ಳುತ್ತದೆ, ಇದು ಎಲ್ಲಾ ಉತ್ತರ ದಿಕ್ಕಿನ ಸಂಚಾರಕ್ಕೆ ನಿರ್ಣಾಯಕ ಸಾರಿಗೆ ಕೇಂದ್ರವಾಗಿದೆ.

ಈ ಹಿಂದೆ ಪಿಲ್ಲರ್‌ಗಳಿಗೆ ಮೊದಲ ಹಂತದ 240 ಕೇಬಲ್ ಅಳವಡಿಕೆ ಕಾರ್ಯದ ಹಿನ್ನೆಲೆಯಲ್ಲಿ ಹಲವು ದಿನಗಳ ಕಾಲ ಬಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಈಗ ಫ್ರೈಓವರ್ ಮೇಲೆ ಎಲ್ಲಾ ವಾಹನಗಳಿಗೂ ಸಂಚಾರ ನಿರ್ಬಂಧಿಸಲಾಗಿದೆ.

ಈ ಬಗ್ಗೆ ಬೆಂಗಳೂರು ಸಂಚಾರ ವಿಭಾಗದ ಜಾಯಿಂಟ್ ಕಮೀಷನರ್ “ಲೋಡ್ ಪರೀಕ್ಷೆಗಾಗಿ ಪೀಣ್ಯ ಫ್ಲೈಓವರ್ ಮೇಲೆ ದಿ :16/01/24 ರಂದು ರಾತ್ರಿ 11 ಗಂಟೆಯಿಂದ 19/01/24 ರಂದು ಬೆಳಿಗ್ಗೆ 11 ಗಂಟೆಯವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಾಹನ ಸವಾರರು ಸರ್ವಿಸ್ ರಸ್ತೆಯನ್ನು ಬಳಸಲು ಕೋರಲಾಗಿದೆ.” ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು