Friday, May 9, 2025

ಸತ್ಯ | ನ್ಯಾಯ |ಧರ್ಮ

ಪೆಟ್ರೋಲ್‌, ಡಿಸೇಲ್‌ ದಾಸ್ತಾನು ಸಾಕಷ್ಟಿದೆ, ಹೆದರಬೇಡಿ: ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌

ಹೊಸದಿಲ್ಲಿ: ಎಲ್ಲ ಪ್ರಜೆಗಳಿಗೂ ಸಾಕಾಗುವಷ್ಟು ದೇಶಾದ್ಯಂತ ಸಾಕಷ್ಟು ಇಂಧನ(ಪೆಟ್ರೋಲ್, ಡಿಸೇಲ್‌) ದಾಸ್ತಾನು ಹೊಂದಿದ್ದೇವೆ. ಜನರು ಭಯಭೀತರಾಗಿ ಖರೀದಿಸುವ ಅಗತ್ಯವಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸ್ಪಷ್ಟನೆಯನ್ನು ನೀಡಿದೆ.

ಭಾರತ –ಪಾಕಿಸ್ತಾನದ ಉದ್ವಿಗ್ನತೆಯ ಮಧ್ಯೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಇಂಡಿಯನ್ ಆಯಿಲ್ ದೇಶಾದ್ಯಂತ ಸಾಕಷ್ಟು ಇಂಧನ ದಾಸ್ತಾನುಗಳನ್ನು ಹೊಂದಿದೆ. ಯಾವುದೇ ಸಮಸ್ಯೆಯಿಲ್ಲದೆ ಸರಾಗವಾಗಿ ಸರಬರಾಜು ಆಗುತ್ತಿದೆ. ಜನರು ಭಯಭೀತರಾಗಿ ಖರೀದಿಸುವ ಅಗತ್ಯವಿಲ್ಲ. ಇಂಧನ ಮತ್ತುಎಲ್‌ಪಿಜಿ ನಮ್ಮ ಎಲ್ಲಾ ಔಟ್‌ಲೈಟ್‌ಗಳಲ್ಲಿ ಸುಲಭವಾಗಿ ಲಭ್ಯವಿರಲಿದೆ. ಜನರು ಶಾಂತವಾಗಿರಿ ಮತ್ತು ಅನಗತ್ಯವಾಗಿ ಪೇಕ್‌ ಸುದ್ದಿಗಳಿಗೆ ಕವಿಗೊಡುವ ಅಗತ್ಯವಿಲ್ಲ ಎಂದು ಪೋಸ್ಟ್‌ ನಲ್ಲಿ ತಿಳಿಸಿದೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಪೆಟ್ರೋಲ್, ಡೀಸಿಲ್ ವ್ಯತ್ಯಯದ ಭೀತಿಯಿಂದ ದೇಶದ ಕೆಲವೆಡೆ ಜನರು ಪೆಟ್ರೋಲ್ ಬಂಕ್‌ಗಳಲ್ಲಿ ಜಮಾಯಿಸಿದ್ದರು. ಇಂಧನವನ್ನು ಸಂಗ್ರಹಿಸಲು ಸರತಿ ಸಾಲಿನಲ್ಲಿ ನಿಂತಿರುವುದನ್ನು ತೋರಿಸುವ ಪೋಸ್ಟ್‌ಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸ್ಪಷ್ಟನೆ ನೀಡಿದೆ.

  • ಸುದ್ದಿಮೂಲ: PTI

Related Articles

ಇತ್ತೀಚಿನ ಸುದ್ದಿಗಳು

You cannot copy content of this page