Tuesday, July 29, 2025

ಸತ್ಯ | ನ್ಯಾಯ |ಧರ್ಮ

ಪಿಎಫ್‌ಐ ಬ್ಯಾನ್‌ ಪ್ರಕರಣ :  ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ  ವಾಗ್ದಾಳಿ

ದೆಹಲಿ : ಪಿಎಫ್‌ಐ ಬ್ಯಾನ್‌ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯ ಬಿಜೆಪಿ ಘಟಕ ವಾಗ್ದಾಳಿ ನಡೆಸಿದೆ.

ದೇಶದ್ಯಾಂತ 5 ವರ್ಷಗಳ ಕಾಲ  ಪಿಎಫ್‌ಐ ಬ್ಯಾನ್‌ ಮಾಡಿರುವ ಬಗ್ಗೆ ಮಾತಾನಾಡಿದ ಕೆಪಿಸಿಸಿ ವಕ್ತಾರ ಪ್ರಿಯಾಂಕ ಖರ್ಗೆ “ಕರ್ನಾಟಕ, ಅಸ್ಸಾಂ, ಮಧ್ಯಪ್ರದೇಶ ಸೇರಿದಂತೆ ದೇಶವ್ಯಾಪಿ ಇದ್ದಂತಹ ಭಯೋತ್ಪಾದನಾ ಚಟುವಟಿಕೆಗಳು, ಅಕ್ರಮ ಹಣ ವರ್ಗಾವಣೆಗಳು ಜಾರಿ ನಿರ್ದೇಶನಾಲಯಗಳಿಗೆ(ED), ಗುಪ್ತಚರ ಇಲಾಖೆಗಳಿಗೆ ಇಷ್ಟು ವರ್ಷ ಗಮನಕ್ಕೆ ಬಂದಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಪಿಎಫ್‌ಐ ಬ್ಯಾನ್‌ ಮಾಡಿರುವುದು ಸರ್ಕಾರದ ಒಳ್ಳೆಯ ನಿರ್ಧಾರವೇ ಆದರೆ ಇಷ್ಟು ತಡವಾಗಿ ಬ್ಯಾನ್‌ ಮಾಡಿರುವುದು ಗುಪ್ತಚರ ಇಲಾಖೆಗಳ ದೊಡ್ಡ ವೈಫಲ್ಯವಾಗಿದೆ” ಎಂದು ಹೇಳಿದರು.

ಈ ಕುರಿತು ಟ್ವೀಟ್‌ ಮಾಡಿದ ರಾಜ್ಯ ಬಿಜೆಪಿ ಘಟಕ ʼಪ್ರಿಯಾಂಕ್ ಖರ್ಗೆ ಅವರೇ, “ಉಗ್ರಭಾಗ್ಯ” ಯೋಜನೆಯಡಿ  ಸಿದ್ದರಾಮಯ್ಯ ಸರ್ಕಾರ 1400 ಕ್ಕೂ ಅಧಿಕ ಪಿಎಫ್‌ಐ ಉಗ್ರರ ಕೇಸ್‌ ರದ್ದು ಮಾಡುವ ಸಂದರ್ಭದಲ್ಲಿ ನೀವು ಶಾಸಕರಾಗಿದ್ದಿರಿ ಎನ್ನುವುದನ್ನು ಮರೆಯಬೇಡಿ. ಅಂದು “ಉಗ್ರ ಪರಿವಾರದ” ಮತ ಕಳೆದುಕೊಳ್ಳಬಹುದು ಎಂಬ ಭಯದಿಂದ ನೀವು ಮೌನವಾಗಿದ್ರಾ?ʼ ಎಂದು ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/GBc6sg7E2FQLuXblEdBxSi

ಇದನ್ನು ಓದಿ : E=MC² ಸೂತ್ರವನ್ನು ಕಂಡುಹಿಡಿದ ಆಲ್ಬರ್ಟ್ ಐನ್‌ಸ್ಟಿನ್ ಮಹಾತ್ಮ ಗಾಂಧಿಯವರ ಅಭಿಮಾನಿಯಾಗಿದ್ದರು ಎಂಬುದು ನಿಮಗೆ ಗೊತ್ತೆ? ಪ್ರಖ್ಯಾತ ವಾಗ್ಮಿ ನಿಕೇತ್ ರಾಜ್ ಮೌರ್ಯ ಅವರ ಮಾತುಗಳನ್ನು ಕೇಳಿಸಿಕೊಳ್ಳಿ.

https://fb.watch/fPBGNUYrnC/

Related Articles

ಇತ್ತೀಚಿನ ಸುದ್ದಿಗಳು

You cannot copy content of this page