Friday, June 14, 2024

ಸತ್ಯ | ನ್ಯಾಯ |ಧರ್ಮ

PFI ಸಂಘಟನೆ ಬಾಂಬ್ ತಯಾರಿಕಾ ಕೈಪಿಡಿ ಹೊಂದಿತ್ತು : ಏಜೆನ್ಸಿ ತನಿಖಾಧಿಕಾರಿಗಳು

ದೇಶದಲ್ಲಿ PFI ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರಿಂದ ವಶಪಡಿಸಿಕೊಂಡ ಮಾರಕಾಸ್ತ್ರಗಳ ಪೈಕಿ ಬಾಂಬ್ ತಯಾರಿಕೆಯ ಕೈಪಿಡಿಗಳು ಸೇರಿವೆ ಎಂದು ತನಿಖಾ ಸಂಸ್ಥೆಗಳು ಹೇಳಿಕೊಂಡಿವೆ.

ಮೂರು ದಶಕಗಳಷ್ಟು ಹಳೆಯದಾದ ಇಸ್ಲಾಮಿಕ್ ಹಿನ್ನೆಲೆ ಎಂದು ಗುರುತಿಸಲ್ಪಡುವ ಸಂಘಟನೆಯು ಜನರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಿದೆ ಎಂದು ಹೇಳಿಕೊಂಡಿದೆ. ಆದರೆ ಕಳೆದ ವಾರ ಭಾರತದಾದ್ಯಂತ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಜಾರಿ ನಿರ್ದೇಶನಾಲಯ (ED) ಈ ಸಂಘಟನೆ ಮುಖ್ಯಸ್ಥರ ಮನೆ ಮತ್ತು ಕಛೇರಿಗಳ ಮೇಲೆ ದಾಳಿ ನಡೆಸಿತ್ತು. ದಾಳಿ ಪರಿಣಾಮವಾಗಿ 300 ಕ್ಕೂ ಹೆಚ್ಚು ಬಂಧನ ಪ್ರಕರಣ ನಡೆದಿದೆ. ಅದರ ನಂತರ ಇಂದು ಬೆಳಿಗ್ಗೆ, ಕೇಂದ್ರ ಗೃಹ ಸಚಿವಾಲಯವು PFI ಮತ್ತು ಎಲ್ಲಾ ಅಂಗಸಂಸ್ಥೆಗಳ ಮೇಲೆ ನಿಷೇಧವನ್ನು ಪ್ರಕಟಿಸಿತು.

ನಿಷೇಧದ ಬೆನ್ನಲ್ಲೇ ತನಿಖಾ ಸಂಸ್ಥೆಗಳು ಭಯೋತ್ಪಾದಕ ಚಟುವಟಿಕೆಗಳ ಆಪಾದಿತ ಪುರಾವೆಗಳ ವಿವರಗಳನ್ನು ಹಂಚಿಕೊಂಡಿವೆ. “IED” ಅಥವಾ ಸುಧಾರಿತ ಸ್ಫೋಟಕ ಸಾಧನವನ್ನು ಸುಲಭವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿ ಹೇಗೆ ತಯಾರಿಸುವುದು ಎಂಬುದರ ಕುರಿತು ವಿವರಗಳಿರುವ ಪುಸ್ತಕಗಳೂ ಇವುಗಳ ಪಟ್ಟಿಯಲ್ಲಿ ಸೇರಿವೆ ಎಂದು ತನಿಖಾ ತಂಡ ಹೇಳಿಕೊಂಡಿದೆ. “ಉತ್ತರ ಪ್ರದೇಶದ ಬಾರಾಬಂಕಿಯ ಪಿಎಫ್‌ಐ ಮುಖಂಡ ಮೊಹಮ್ಮದ್ ನದೀಮ್ ಅವರಿಂದ ಅಂತಹ ಒಂದು ದಾಖಲೆಯನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಏಜೆನ್ಸಿ ಅಧಿಕಾರಿಗಳು ಹೇಳಿದ್ದಾರೆ.

“ಸುಲಭವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಐಇಡಿಗಳನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ಕಿರು ಕೋರ್ಸ್” ಶೀರ್ಷಿಕೆಯ ಡಾಕ್ಯುಮೆಂಟ್ ಅನ್ನು ಖಾದ್ರಾ, ಯುಪಿ ಪಿಎಫ್‌ಐ ನಾಯಕ ಅಹ್ಮದ್ ಬೇಗ್ ನದ್ವಿ ಅವರಿಂದ ವಶಪಡಿಸಿಕೊಳ್ಳಲಾಗಿದೆ” ಎಂದು ತನಿಖಾ ಸಂಸ್ಥೆಯ ಅಧಿಕಾರಿಗಳು ವಿವರಿಸಿದ್ದಾರೆ.

ಇದರ ಜೊತೆಗೆ ಮಹಾರಾಷ್ಟ್ರ ರಾಜ್ಯದ PFI ಉಪಾಧ್ಯಕ್ಷರ ಕಡೆಯಿಂದ ‘ಮಿಷನ್ 2047’ ಕ್ಕೆ ಸಂಬಂಧಿಸಿದ “ನೂರಾರು ದೋಷಾರೋಪಣೆ ಸಾಮಗ್ರಿಗಳ” ವಿವರಗಳೊಂದಿಗೆ ಮತ್ತೊಂದು ಟಿಪ್ಪಣಿ… ಇದಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ಹೊಂದಿರುವ ಪೆನ್ ಡ್ರೈವ್‌ಗಳನ್ನು ವಶಪಡಿಸಿಕೊಂಡ ಬಗ್ಗೆ ತನಿಖಾಧಿಕಾರಿಗಳು ವಿವರಿಸಿದ್ದಾರೆ.

ಇದೇ ಸಂದರ್ಭದಲ್ಲಿ ನಿಷೇಧಿತ PFI ಸಂಘಟನೆಗೆ ಸೇರಿದ್ದ ಮುಖಂಡರು “ಯುವಕರು ತೀವ್ರಗಾಮಿಯಾಗುವುದನ್ನು ತಡೆಯಲು ಮತ್ತು ದೇಶಭಕ್ತಿ, ದೇಶದ ಸಂವಿಧಾನಕ್ಕೆ ಬಲವಾದ ನಿಷ್ಠೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಲು ಪಿಎಫ್‌ಐ ಪ್ರಯತ್ನಿಸುತ್ತಿದೆ” ಎಂದು ಅದು ಹೇಳಿದ್ದಾರೆ. “ಪಾಪ್ಯುಲರ್ ಫ್ರಂಟ್ ಎಂದಿಗೂ ದೇಶದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಬಗ್ಗೆ ಯೋಚಿಸಿಲ್ಲ ಅಥವಾ ಪ್ರಯತ್ನಿಸಿಲ್ಲ.” ಎಂದೂ ಸಹ ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು