ಕೆಲ ದಿನಗಳಿಂದ ಮಾಧ್ಯಮ ಸಂಸ್ಥೆಗಳಿಗೆ ಸಂದರ್ಶನ ನೀಡುತ್ತಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, ದೇಶದಲ್ಲಿ ಯಾವ ಪಕ್ಷ ಎಷ್ಟು ಸೀಟು ಗೆಲ್ಲಲಿದೆ, ಯಾವ ರಾಜ್ಯದಲ್ಲಿ ಎಷ್ಟು, ಯಾವ ಪಕ್ಷದ ಸ್ಥಾನ ಏನು ಎಂಬುದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ.
ಇತ್ತೀಚೆಗೆ ಖ್ಯಾತ ಪತ್ರಕರ್ತ ಕರಣ್ ಥಾಪರ್ ಅವರಿಗೆ ಸಂದರ್ಶನ ನೀಡಿದ್ದರು. ಆ ಸಂದರ್ಶನದಲ್ಲಿ ಕರಣ್ ಥಾಪರ್ ಅವರ ಶೈಲಿಯ ಪ್ರಶ್ನೆಗಳಿಗೆ ಪಿಕೆ ತಬ್ಬಿಬ್ಬಾದರು.
ನೀವು ಜನರ ನಾಡಿ ಮಿಡಿತ ಕಂಡುಹಿಡಿಯುವುದಾಗಿ ಹೇಳುತ್ತೀರಿ… ಆದರೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ನೀವು ಈ ಹಿಂದೆ ಹೇಳಿದ್ದೀರಿ. ಆದರೆ ಅಲ್ಲಿ ಕಾಂಗ್ರೆಸ್ ಗೆದ್ದಿದೆ. ತೆಲಂಗಾಣದಲ್ಲೂ ಬಿಆರ್ ಎಸ್ ಗೆಲ್ಲಲಿದೆ ಎಂದು ನೀವು ಹೇಳಿದ್ದೀರಿ ಆದರೆ ಸೋಲನುಭವಿಸಿತು… ಇವುಗಳ ಕುರಿತು ನಿಮ್ಮ ಅಭಿಪ್ರಾಯವೇನು? ಎಂದು ಕರಣ್ ಥಾಪರ್ ಕೇಳಿದ್ದರು.
ಈ ಪ್ರಶ್ನೆಗೆ ಉತ್ತರಿಸುತ್ತಾ, ಹಿಮಾಚಲದಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ಯಾವತ್ತೂ ಹೇಳಿಲ್ಲ… ಅದೆಲ್ಲ ಮಾಧ್ಯಮಗಳು ಸೃಷ್ಟಿಸಿದ್ದು ಎಂದು ಪಿಕೆ ಪ್ರತಿಕ್ರಿಯಿಸಿದ್ದಾರೆ. ಆದರೆ ಕರಣ್ ತಮ್ಮದೇ ಸ್ಟೈಲಿನಲ್ಲಿ ಪಿಕೆಗೆ ಡೇಟ್ ಸಮೇತ ಹೇಳಿದರು… ನೀವು ಹೇಳಿಕೆ ನೀಡಿಡಿದ್ದೀರಿ ಎಂದು. ನಂತರ ಪಿಕೆ ಎಂದರೆ ಹಾಗಲ್ಲ… ನಾನು ಹೇಳಿಲ್ಲ ಎಂದು ಸಾಧಿಸತೊಡಗಿದರು.
ಇದೀಗ ಈ ಸಂದರ್ಶನದ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕರಣ್-ಪಿಕೆ ಸಂದರ್ಶನದ ವೇಳೆ ಕೆಲವರು ಪಿಕೆ ಟ್ವೀಟ್ ಹೇಳಿಕೆಯ ಸ್ಕ್ರೀನ್ ಶಾಟ್ ಸಮೇತ ವಿಡಿಯೋ ಹಂಚಿಕೊಂಡು ಪ್ರಶಾಂತ್ ಕಿಶೋರ್ ಅವರ ಸುಳ್ಳನ್ನು ಬಯಲಿಗೆಳೆಯುತ್ತಿದ್ದಾರೆ.
ರಾಜಕೀಯ ಚಾಣಕ್ಯ ಎಂದು ತನ್ನನ್ನು ತಾನೇ ಬಿಂಬಿಸಿಕೊಂಡ ಪಿಕೆ ಈಗ ಥಾಪರ್ ಎದುರು ರಾಜಕೀಯ ಬಾಲಕ ಎನ್ನಿಸಿಕೊಂಡಿದ್ದಾರೆ. ಕೆಲವರಂತೂ ಈ ಹಿಂದೆ ಮೋದಿ ಕರಣ್ ಥಾಪರ್ ಅವರ ಸಂದರ್ಶನದ ವಿಡೀಯೋ ಹಂಚಿಕೊಂಡು ಥಾಪರ್‌ಗೆ ಥಾಪರೇ ಸಾಟಿ ಎನ್ನುತ್ತಿದ್ದಾರೆ.