Home ವಿದೇಶ ದಕ್ಷಿಣ ಸುಡಾನ್‌ನಲ್ಲಿ ವಿಮಾನ ಪತನ: 14 ಮಂದಿ ಸಾವು

ದಕ್ಷಿಣ ಸುಡಾನ್‌ನಲ್ಲಿ ವಿಮಾನ ಪತನ: 14 ಮಂದಿ ಸಾವು

0

ಜುಬಾ: ದಕ್ಷಿಣ ಸುಡಾನ್‌ನ ರಾಜಧಾನಿ ಜುಬಾದ ಹೊರವಲಯದಲ್ಲಿ ಸೋಮವಾರ ಪ್ರಯಾಣಿಕರ ವಿಮಾನವೊಂದು ಪತನಗೊಂಡಿದ್ದು, ವಿಮಾನದಲ್ಲಿದ್ದ 14 ಮಂದಿ ದುರ್ಮರಣವನ್ನಪ್ಪಿದ್ದಾರೆ. ಸಿಟಿ ಲಿಂಕ್ ಏವಿಯೇಷನ್‌ಗೆ ಸೇರಿದ ‘ಸೆಸ್ನಾ-208 ಕ್ಯಾರವಾನ್’ (Cessna-208 Caravan) ಎಂಬ ಸಣ್ಣ ಗಾತ್ರದ ವಿಮಾನವು ಯೆಯ್‌ನಿಂದ ಜುಬಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ.

ರಾಜಧಾನಿ ಜುಬಾದ ನೈಋತ್ಯ ದಿಕ್ಕಿನಲ್ಲಿ ಸುಮಾರು 20 ಕಿಲೋಮೀಟರ್ ದೂರದಲ್ಲಿ ವಿಮಾನವು ಪತನಗೊಂಡಿದೆ. ವಿಮಾನದ ಪೈಲಟ್ ಸೇರಿದಂತೆ ಅದರಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಮೃತಪಟ್ಟಿದ್ದಾರೆ ಎಂದು ದಕ್ಷಿಣ ಸುಡಾನ್ ನಾಗರಿಕ ವಿಮಾನಯಾನ ಸಂಸ್ಥೆಯು ಖಚಿತಪಡಿಸಿದೆ. ಮೃತರ ಪೈಕಿ ಇಬ್ಬರು ಕೀನ್ಯಾ ದೇಶದ ಪ್ರಜೆಗಳಾಗಿದ್ದರೆ, ಉಳಿದ 12 ಮಂದಿ ದಕ್ಷಿಣ ಸುಡಾನ್‌ನ ನಾಗರಿಕರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಧಿಕಾರಿಗಳ ಪ್ರಕಾರ, ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 9:43ಕ್ಕೆ ವಿಮಾನವು ಟೇಕಾಫ್ ಆಗಿತ್ತು. ಆದರೆ ಟೇಕಾಫ್ ಆದ 30 ನಿಮಿಷಗಳ ನಂತರ ವಿಮಾನದೊಂದಿಗಿನ ಸಂಪರ್ಕ ಕಡಿತಗೊಂಡಿದೆ. ಪ್ರತಿಕೂಲ ಹವಾಮಾನ ಮತ್ತು ಬೆಳಕಿನ ಕೊರತೆಯೇ ವಿಮಾನ ದುರಂತಕ್ಕೆ ಪ್ರಮುಖ ಕಾರಣವಿರಬಹುದು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

You cannot copy content of this page

Exit mobile version