Wednesday, June 19, 2024

ಸತ್ಯ | ನ್ಯಾಯ |ಧರ್ಮ

ಪುಣ್ಯಕೋಟಿ ಯೋಜನೆಗೆ ದಯವಿಟ್ಟು ನನ್ನ ಸಂಬಳ ಕಟಾವು ಮಾಡಬೇಡಿ: ಸರ್ಕಾರಕ್ಕೆ ನೌಕರರ ಮನವಿಪತ್ರ

ಬೆಂಗಳೂರು: ʼಪುಣ್ಯಕೋಟಿʼ ಯೋಜನೆಗೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಕುರಿತು ಸರ್ಕಾರಿ ನೌಕರರೊಬ್ಬರು ಮನವಿಪತ್ರ ಸಲ್ಲಿಸಿದ್ದು, ಯೋಜನೆಗೆ ನನ್ನ ಸಂಬಳ ಕಟಾವು ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿನ ಗೋವುಗಳ ರಕ್ಷಣೆಗಾಗಿ, ರಾಜ್ಯ ಸರ್ಕಾರವು ʼಪುಣ್ಯಕೋಟಿʼ ಯೋಜನೆಯನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಸರ್ಕಾರಿ ನೌಕರರು, ತಮ್ಮ ಒಂದು ತಿಂಗಳ ಸಂಬಳದ ಹಣವನ್ನು ಈ ಯೋಜನೆಗೆ ಮೀಸಲಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದೇಶ ಹೊರಡಿಸಿದ್ದರು. ಆದರೆ ಇದಕ್ಕೆ ನೌಕರರ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನೌಕರರೊಬ್ಬರು ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರವು ಪೀಪಲ್‌ ಮೀಡಿಯಾಕ್ಕೆ ಲಭ್ಯವಾಗಿದೆ.

ನೌಕರರು ಸಲ್ಲಿಸಿರುವ ಮನವಿ ಪತ್ರದಲ್ಲಿ ಏನಿದೆ?

ಬೆಂಗಳೂರಿನಲ್ಲಿ 10ನೇ ಮುಖ್ಯ ಮಹಾದಂಡಾದಿಕಾರಿಗಳ ನ್ಯಾಯಾಲಯದಲ್ಲಿ ಶಿ ರಸ್ತೇದಾರರಾಗಿ ನೌಕರಿ ಮಾಡುತ್ತಿರುವ ಮೋಹನ್‌ ಕುಮಾರ್‌ ಹೆಚ್‌. ಎಂಬುವರು ಸರ್ಕಾರಕ್ಕೆ ಮನವಿ ಪತ್ರಸಲ್ಲಿಸಿರುವ ಈ ಪತ್ರದಲ್ಲಿ, ʼಸರ್ಕಾರ ತಂದಿರುವ ಹೊಸ ಪಿಂಚಣಿ ಯೋಜನೆ NPS (New Pension Scheme)  ನನಗೆ ಅನ್ವಯವಾಗುತ್ತಿದ್ದು, ನಿವೃತ್ತಿ ನಂತರ ನನ್ನ ಬದುಕಿಗೇ ನಿರ್ದಿಷ್ಟ ಹಾಗೂ ಸುಭದ್ರ ವ್ಯವಸ್ಥೆ ಇಲ್ಲದಿರುವಾಗ ಪುಣ್ಯಕೋಟಿಗಳಾದ ಗೋವುಗಳ ನಿರ್ವಹಣೆಗೆ ಹಣ ಒದಗಿಸುವುದು ಸಾದುವಲ್ಲʼ ಎಂದು ತಿಳಿಸಿದ್ದಾರೆ. ಈ ಕಾರಣದಿಂದ ತಮ್ಮ ಸಂಬಳದಿಂದ ಸರ್ಕಾರದ ಪುಣ್ಯಕೋಟಿ ಯೋಜನೆಗೆ ʼಹಣ ಕಟಾವು ಮಾಡಿಕೊಳ್ಳದಂತೆʼ ಸರ್ಕಾರವನ್ನು ಕೋರಿಕೊಂಡಿದ್ದಾರೆ.

ಇದೇ ಪತ್ರದಲ್ಲಿ ಈಗಿರುವ NPS ಯೋಜನೆಗೆ ಬದಲು ಹಳೆಯ OPS ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೊಳಿಸಲು ಕೇಳಿಕೊಂಡಿರುವ ಮೋಹನ್‌ಕುಮಾರ್‌, ʼನನಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಂದರೆ ನನ್ನ ನಿವೃತ್ತಿಯವರೆಗೂ ಈ ಯೋಜನೆಗೆ ಇಂತಿಷ್ಟು ಎಂದು ಹಣ ನೀಡುತ್ತೇನೆʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪುಣ್ಯಕೋಟಿ ಯೋಜನೆಗಾಗಿ ಸರ್ಕಾರಿ ನೌಕರರ ಜೇಬಿಗೆ ಕತ್ತರಿ

ರಾಜ್ಯದ ಸರ್ಕಾರಿ ನೌಕರರು ಹೀಗೆ ಸರ್ಕಾರದ ಮಹತ್ವಾಕಾಂಕ್ಷೆಯ ಪುಣ್ಯಕೋಟಿ ಯೋಜನೆಗೆ ಒಬ್ಬೊಬ್ಬರಾಗಿ ಅಸಮ್ಮತಿ ವ್ಯಕ್ತಪಡಿಸುತ್ತಿರುವುದನ್ನು ಗಮನಿಸಬಹುದಾಗಿದೆ. ಈಗ ನೌಕರರು ಹೊಸ ಪಿಂಚಣಿ ಯೋಜನೆ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದು ಇತ್ತೀಚೆಗಷ್ಟೇ ದಾವಣಗೆರೆಯಲ್ಲಿ ಬೃಹತ್‌ ಪಾದಯಾತ್ರೆ ನಡೆಸಿದ್ದಾರೆ. ಇದೀಗ ಹಳೆಯ ಪಿಂಚಣಿ ಜಾರಿಗೊಳಿಸುವವರೆಗೂ ಪುಣ್ಯಕೋಟಿ ಯೋಜನೆಗೆ ಹಣ ಕೊಡಲು ನಿರಾಕರಿಸುತ್ತಿರುವುದು NPS ವಿರೋದಿ ಹೋರಾಟಕ್ಕೆ ಹೊಸ ಕಳೆ ಬಂದಿದೆ.

ಇದನ್ನೂ ಓದಿ: ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರ ಹಣ ; ಯಡವಟ್ಟಿನ ನಿರ್ಧಾರಕ್ಕೆ ವಿರೋಧ

Related Articles

ಇತ್ತೀಚಿನ ಸುದ್ದಿಗಳು