Home ದೇಶ ಭಾರತ-ಚೀನಾ ವಿವಾದದ ಬಗ್ಗೆ ಸುಳ್ಳು ಹೇಳುವ ಮೂಲಕ ಪ್ರಧಾನಿ ಮೋದಿ, ಅಮಿತ್ ಶಾ ದೇಶದ್ರೋಹ ಎಸಗಿದ್ದಾರೆ:...

ಭಾರತ-ಚೀನಾ ವಿವಾದದ ಬಗ್ಗೆ ಸುಳ್ಳು ಹೇಳುವ ಮೂಲಕ ಪ್ರಧಾನಿ ಮೋದಿ, ಅಮಿತ್ ಶಾ ದೇಶದ್ರೋಹ ಎಸಗಿದ್ದಾರೆ: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

0

ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಕಡೆಗೆ ತಮ್ಮ ಕೋವಿಯನ್ನು ತಿರುಗಿಸಿದ್ದಾರೆ. ಅವರು ಭಾರತ-ಚೀನಾ ಲಡಾಖ್ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ್ರೋಹದ ಅಪರಾಧಕ್ಕೆ ಗುರಿಯಾಗುತ್ತಾರೆ ಎಂದು ಹೇಳಿದ್ದಾರೆ.

2020ರ ಏಪ್ರಿಲ್‌ನಿಂದ ಚೀನಾ 4046 ಚದರ ಕಿಲೋಮೀಟರ್‌ಗಳಷ್ಟು ವಿವಾದಾಸ್ಪದ ಲಡಾಖ್ ಪ್ರದೇಶವನ್ನು ವಶಪಡಿಸಿಕೊಂಡಿದೆ ಆದರೆ ಈ ಜೋಡಿಯು ‘ಕೋಯಿ ಆಯಾ ನಹೀ’ ಎಂಬ ಸುಳ್ಳಿಗೆ ಅಂಟಿಕೊಂಡಿದೆ. ಆದರೆ ಸತ್ಯ ಹೊರಬಂದಾಗ, ಅವರು ದೇಶದ್ರೋಹದ ಅಪರಾಧಕ್ಕೆ ಗುರಿಯಾಗಲಿದ್ದಾರೆ ಎನ್ನುವುದನ್ನು ಪ್ರಧಾನಿ ಮತ್ತು ಗೃಹಸಚಿವ ತಿಳಿದುಕೊಳ್ಳಲಿ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಈ ಹಿಂದೆ ಮಾತನಾಡಿದ್ದ ಬಿಜೆಪಿ ಮುಖಂಡ ಸ್ವಾಮಿ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಅರುಣಾಚಲ ಪ್ರದೇಶದ ಭಾರತೀಯ ಭೂಪ್ರದೇಶದೊಳಗೆ ಕನಿಷ್ಠ 60 ಕಿಲೋಮೀಟರ್ ದೂರದವರೆಗೆ ಪ್ರವೇಶಿಸಿದೆ ಎನ್ನುವ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಚೀನಾದೊಂದಿಗಿನ ಭಾರತದ ರಾಯಭಾರಿ ಮಟ್ಟದ ಸಂಬಂಧವನ್ನು ಮುರಿದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.

ಮೋದಿಯವರು ಭಾರತ ಮಾತೆಯ ಗೌರವಕ್ಕೆ ದ್ರೋಹ ಬಗೆದಿದ್ದಾರೆ ಎಂದು ನಾವು ಘೋಷಿಸೋಣವೇ? ಚೀನಾದೊಂದಿಗಿನ ರಾಯಭಾರಿ ಮಟ್ಟದ ಸಂಬಂಧವನ್ನು ಕೊನೆಗೊಳಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದ್ದಾರೆ.

You cannot copy content of this page

Exit mobile version