Home ಲೋಕಸಭೆ ಚುನಾವಣೆ -2024 ಪ್ರಧಾನಿ ಮೋದಿ ‘ವಸೂಲಿ ರಾಜ’, ಚುನಾವಣಾ ಬಾಂಡ್‌ಗಳ ಮೂಲಕ ಹಣ ಸುಲಿಗೆ ಮಾಡಿದ್ದಾರೆ: ಎಂಕೆ ಸ್ಟಾಲಿನ್

ಪ್ರಧಾನಿ ಮೋದಿ ‘ವಸೂಲಿ ರಾಜ’, ಚುನಾವಣಾ ಬಾಂಡ್‌ಗಳ ಮೂಲಕ ಹಣ ಸುಲಿಗೆ ಮಾಡಿದ್ದಾರೆ: ಎಂಕೆ ಸ್ಟಾಲಿನ್

0

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೋಮವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಬಿಜೆಪಿಯ ಬೊಕ್ಕಸವನ್ನು ತುಂಬಲು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡ “ವಸೂಲಿ ರಾಜ” ಎಂದು ಕರೆದಿದ್ದಾರೆ.

ಚೆನ್ನೈಯಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಸ್ಟಾಲಿನ್, ಭಾರತ ಹಲವು ಪ್ರಧಾನಿಗಳನ್ನು ಕಂಡಿದೆ ಆದರೆ ನರೇಂದ್ರ ಮೋದಿ ಮಾತ್ರ ರಾಜಕೀಯ ಪಕ್ಷಗಳನ್ನು ಒಡೆಯಲು, ಶಾಸಕರು ಮತ್ತು ಸಂಸದರನ್ನು ಖರೀದಿಸಲು, ಮುಖ್ಯಮಂತ್ರಿಗಳನ್ನು ಬಂಧಿಸಲು ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹೇಳಿದರು.

“ತನಿಖಾ ಸಂಸ್ಥೆಗಳ ಮೂಲಕ ವ್ಯವಹಾರ ಸಂಸ್ಥೆಗಳಿಗೆ ಬೆದರಿಕೆ ಹಾಕಿ ಚುನಾವಣಾ ಬಾಂಡ್‌ ಮತ್ತು ಪಿಎಂ ಕೇರ್ಸ್ ಫಂಡ್ ಮೂಲಕ ಹಣ ಸುಲಿಗೆ ಮಾಡಿದ ಏಕೈಕ ‘ವಸೂಲಿ ರಾಜ’ ಪ್ರಧಾನಿ ಮೋದಿ” ಎಂದು ಅವರು ಹೇಳಿದರು.

ಅವರು ಬಿಜೆಪಿ ಪ್ರಣಾಳಿಕೆಯನ್ನೂ ಟೀಕಿಸಿ ಅದು ದೇಶದ ಜನರ ಪಾಲಿನ ವಿಲನ್‌ ಎಂದು ಹೇಳಿದರು.

“ಬಿಜೆಪಿಯ ಪ್ರಣಾಳಿಕೆಯು ಜನರಿಗೆ ಮತ್ತು ಈ ದೇಶಕ್ಕೆ ಖಳನಾಯಕನಂತಿದೆ, ನಾನು ಅದನ್ನು ಏಕೆ ವಿಲನ್ ಎಂದು ಕರೆಯುತ್ತೇನೆ ಎಂದರೆ ಬಿಜೆಪಿ ಪ್ರಣಾಳಿಕೆಯು ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಪ್ರಯತ್ನದಲ್ಲಿ ಏಕರೂಪ ನಾಗರಿಕ ಸಂಹಿತೆ ತರುವುದಾಗಿ ಭರವಸೆ ನೀಡಿದೆ. ಯುಸಿಸಿ ನಮ್ಮ ದೇಶಕ್ಕೆ ಸಂಭವಿಸಬಹುದಾದ ಗಂಭೀರ ಅಪಾಯದ ಟ್ರೈಲರ್” ಎಂದು ಸ್ಟಾಲಿನ್ ಹೇಳಿದರು.

ಬಿಜೆಪಿ ಪ್ರಣಾಳಿಕೆಯಲ್ಲಿ ಸ್ವಂತಿಕೆಯ ಕೊರತೆಯಿದೆ ಎಂದು ಪ್ರತಿಪಾದಿಸಿದ ಅವರು, “ಬಿಜೆಪಿ ಪ್ರಣಾಳಿಕೆಯು ಕೇವಲ ವಿಭಜನೆಯಲ್ಲ, ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತದೆ. 2019ರಂತೆಯೇ ಈ ಬಾರಿಯೂ ಅವರು 1 ರೂಪಾಯಿಗೆ ಸ್ಯಾನಿಟರಿ ನ್ಯಾಪ್ಕಿನ್ ನೀಡುವ ಭರವಸೆಯನ್ನು ಕಾಪಿ ಪೇಸ್ಟ್ ಮಾಡಿದ್ದಾರೆ ಆದರೆ ಸತ್ಯವೆಂದರೆ, ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೂ ಬಿಜೆಪಿ ಜಿಎಸ್‌ಟಿ ಹೇರಿದೆ” ಎಂದರು.

You cannot copy content of this page

Exit mobile version