Home ದೆಹಲಿ ವಿರೋಧ ಪಕ್ಷಗಳು ದೊಡ್ಡ ತಪ್ಪು ಮಾಡಿವೆ: ಮಹಿಳಾ ಮೀಸಲಾತಿ ಮಸೂದೆ ಸೋಲಿನ ಬಗ್ಗೆ ಪ್ರಧಾನಿ ಮೋದಿ...

ವಿರೋಧ ಪಕ್ಷಗಳು ದೊಡ್ಡ ತಪ್ಪು ಮಾಡಿವೆ: ಮಹಿಳಾ ಮೀಸಲಾತಿ ಮಸೂದೆ ಸೋಲಿನ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ

0

ದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ (ಸಂವಿಧಾನದ 131ನೇ ತಿದ್ದುಪಡಿ ಮಸೂದೆ) ಸೋಲುಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯ ವಿಷಯದಲ್ಲಿ ವಿರೋಧ ಪಕ್ಷಗಳು ದೊಡ್ಡ ತಪ್ಪು ಮಾಡಿವೆ ಮತ್ತು ಇದಕ್ಕಾಗಿ ಅವರು ಜೀವನ ಪರ್ಯಂತ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಪ್ರಧಾನಿ ಗುಡುಗಿದ್ದಾರೆ.

ಶನಿವಾರ ದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ಮೋದಿ, ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. “ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸದೆ ವಿರೋಧ ಪಕ್ಷಗಳು ಐತಿಹಾಸಿಕ ತಪ್ಪು ಮಾಡಿವೆ. ಈ ತಪ್ಪು ಅವರಿಗೆ ದುಬಾರಿಯಾಗಿ ಪರಿಣಮಿಸಲಿದೆ,” ಎಂದು ಅವರು ಎಚ್ಚರಿಸಿದರು. ಮಸೂದೆಯನ್ನು ವಿರೋಧಿಸಿ, ಈಗ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳಲು ವಿರೋಧ ಪಕ್ಷಗಳು ನೆಪಗಳನ್ನು ಹುಡುಕುತ್ತಿವೆ ಎಂದು ಪ್ರಧಾನಿ ಟೀಕಿಸಿದರು.

ವಿರೋಧ ಪಕ್ಷಗಳು ಮಹಿಳಾ ವಿರೋಧಿಗಳು ಎಂಬ ವಿಷಯವನ್ನು ದೇಶದ ಪ್ರತಿ ಹಳ್ಳಿಗೂ ತಲುಪಿಸುವಂತೆ ಪ್ರಧಾನಿ ಮೋದಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಚಟ್ಟಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶ ಹೊಂದಿದ್ದ ಈ ಮಸೂದೆಯನ್ನು ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾಗಿರುವುದು ಮಹಿಳಾ ಸಬಲೀಕರಣಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಲೋಕಸಭೆಯಲ್ಲಿ ಮಸೂದೆಯ ಮೇಲೆ ನಡೆದ ಮತದಾನದಲ್ಲಿ, ಒಟ್ಟು 298 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 230 ಮಂದಿ ಅದನ್ನು ವಿರೋಧಿಸಿದರು. ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಸದನದಲ್ಲಿ ಮೂರನೇ ಎರಡರಷ್ಟು ಬಹುಮತದ (ಕನಿಷ್ಠ 360 ಮತಗಳು) ಅಗತ್ಯವಿತ್ತು. ಸರ್ಕಾರಕ್ಕೆ ಅಗತ್ಯವಿದ್ದ 62 ಮತಗಳ ಕೊರತೆಯಿಂದಾಗಿ ಮಸೂದೆಯು ಅಂಗೀಕಾರವಾಗಲು ಸಾಧ್ಯವಾಗಲಿಲ್ಲ.

You cannot copy content of this page

Exit mobile version