ಕೇರಳ ತಲುಪಿದ ಪ್ರಧಾನಿ ಮೋದಿ, ವಯನಾಡಿನಲ್ಲಿ ವೈಮಾನಿಕ ಸಮೀಕ್ಷೆ

ತಿರುವನಂತಪುರಂ: ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ರಾಜ್ಯಪಾಲ ಆರಿಫ್ ಖಾನ್ ಅವರೊಂದಿಗೆ ಸಿಎಂ ವಿಜಯನ್ ಅವರನ್ನು ಸ್ವಾಗತಿಸಿದರು.

ವಯನಾಡಿನಲ್ಲಿ ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಕ್ಕೆ ಪ್ರಧಾನಿ ಮೋದಿ ಶೀಘ್ರದಲ್ಲೇ ಭೇಟಿ ನೀಡಲಿದ್ದಾರೆ. ವಯನಾಡಿನಲ್ಲಿ ತೀವ್ರ ಹಾನಿಯಾಗಿರುವುದರಿಂದ ಪುನರ್ವಸತಿಗೆ ಇನ್ನೂರು ಕೋಟಿ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಕೇಳಿದೆ.

ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಪ್ರಧಾನಿ ಮೋದಿ ಹೆಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಇವರೊಂದಿಗೆ ಕೇಂದ್ರ ಸಚಿವ ಸುರೇಶ್ ಗೋಪಿ ಕೂಡ ಆಗಮಿಸಲಿದ್ದಾರೆ.

ವಯನಾಡಿನಲ್ಲಿ ನಡೆದ ಈ ದುರಂತದಲ್ಲಿ 400ಕ್ಕೂ ಹೆಚ್ಚಿನ ಜನರು ಸಾವಿಗೀಡಾಗಿದ್ದು, ಹಲವರು ಕಣ್ಮರೆಯಾಗಿದ್ದರೆ. ಜೊತೆಗೆ ಅಪಾರ ಸಂಖ್ಯೆಯ ಆಸ್ತಿ ನಷ್ಟವೂ ಉಂಟಾಗಿದೆ.

Related Articles

ಇತ್ತೀಚಿನ ಸುದ್ದಿಗಳು