Thursday, July 4, 2024

ಸತ್ಯ | ನ್ಯಾಯ |ಧರ್ಮ

ನಕಲಿ ನೋಟಿನ ಜಾಲ : ‘ಫರ್ಜಿ’ ವೆಬ್ ಸೀರೀಸ್ ನಿಂದ ಪ್ರೇರಿತ ತಂಡವನ್ನು ಬಂಧಿಸಿದ ಪೊಲೀಸರು

ಬೆಳಗಾವಿ ಜಿಲ್ಲೆಯ ನಕಲಿ ನೋಟು ಜಾಲವನ್ನು ಪತ್ತೆ ಹಚ್ಚಿದ ಕರ್ನಾಟಕ ಪೊಲೀಸರು, ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಗ್ಯಾಂಗ್‌ನ ಆರು ಸದಸ್ಯರನ್ನು ಬಂಧಿಸಿದ್ದಾರೆ. ಗಮನಿಸಬೇಕಾದ ವಿಚಾರ ಎಂದರೆ ಈ ಗ್ಯಾಂಗ್ ಹಿಂದಿಯ ವೆಬ್ ಸೀರೀಸ್ ‘ಫರ್ಜಿ’ ನಿಂದ ಪ್ರೇರಿತವಾಗಿದೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳಾದ ಅನ್ವರ್ ಯಾದವಾಡ, ಸದ್ದಾಂ ಯಡಳ್ಳಿ, ರವಿ ಹಯಾಗಡಿ, ದುಂಡಪ್ಪ ಒಣಶೆಣವಿ, ವಿಟ್ಟಲ್ ಹೊಸತೋಟ, ಮಲ್ಲಪ್ಪ ಕುಂಡಲಿ ಎಂಬುವರು 100 ಮತ್ತು 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ತಯಾರಿಸಿ, ಎಲ್ಲಾ ಕಡೆಗೂ ಹಂಚುತ್ತಿದ್ದರು ಎಂದು ತಿಳಿದು ಬಂದಿದೆ.

ಆರೋಪಿಗಳ ಪ್ರಾಥಮಿಕ ತನಿಖೆ ಹಾಗೂ ವಿಚಾರಣೆ ವೇಳೆ ಆರೋಪಿಗಳ ತಂಡ ರಾತ್ರಿ ವೇಳೆ ಅರಭಾವಿ ತಾಲೂಕಿನ ಮನೆಯೊಂದರಲ್ಲಿ ನಕಲಿ ನೋಟು ಮುದ್ರಿಸುತ್ತಿರುವುದು ಬೆಳಕಿಗೆ ಬಂದಿದೆ. ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಉನ್ನತ ಪೋಲೀಸ್ ಅಧಿಕಾರಿಗಳು, ಗ್ಯಾಂಗ್‌ನ ಕಾರ್ಯಾಚರಣೆಯು ಅವರ ಕಾರ್ಯಾಚರಣೆಯ ಮೇಲೆ ಪ್ರಭಾವ ಬೀರಿದ ‘ಫರ್ಜಿ’ ವೆಬ್ ಸರಣಿಯಲ್ಲಿ ಚಿತ್ರಿಸಿದಂತೆಯೇ ಇದೆ ಎಂದು ದೃಢಪಡಿಸಿದರು.

ಗೋಕಾಕ ಪಟ್ಟಣದ ಕಡಬಗಟ್ಟಿ ಗುಡ್ಡದಲ್ಲಿ ಪೊಲೀಸರು ಕಾರೊಂದನ್ನು ವಶಪಡಿಸಿಕೊಳ್ಳಲು ಹೋದಾಗ ಆಕಸ್ಮಿಕವಾಗಿ ಸಿಕ್ಕಿಬಿದ್ದ ಈ ತಂಡವನ್ನು ಬಂಧಿಸಲಾಗಿದೆ. ಕಾರಿನೊಳಗೆ ಅಧಿಕಾರಿಗಳು 305 ನಕಲಿ 100 ನೋಟುಗಳು ಮತ್ತು 6,792 ರೂ ಮೌಲ್ಯದ 500 ನೋಟುಗಳನ್ನು ಪತ್ತೆ ಮಾಡಿದ್ದಾರೆ.

ವಶಪಡಿಸಿಕೊಂಡಲ್ಲಿ 5,23,900 ಮೌಲ್ಯದ ನಕಲಿ ನೋಟುಗಳು, ಪ್ರಿಂಟರ್, ಸ್ಕ್ರೀನಿಂಗ್ ಬೋರ್ಡ್, ಪೇಂಟ್, ಪ್ರಿಂಟಿಂಗ್ ಪೇಪರ್, ಆರು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಗೋಕಾಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

ಈಗಾಗಲೆ ಈ ತಂಡ 5 ಲಕ್ಷ ರೂಪಾಯಿ ನಕಲಿ ನೋಟುಗಳನ್ನು 1 ಲಕ್ಷ ರೂಪಾಯಿಗೆ ಅಸಲಿ ನೋಟಿಗೆ ಬದಲಾಯಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಅವರು ಬಾಗಲಕೋಟೆ, ಮಹಾಲಿಂಗಪುರ, ಗೋಕಾಕ, ಮತ್ತು ಮೂಡಲಗಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು ಎಂದು ಎಸ್ಪಿ ಗುಳೇದ್ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು