Saturday, December 7, 2024

ಸತ್ಯ | ನ್ಯಾಯ |ಧರ್ಮ

ರಾಜಕೀಯ ಒತ್ತಡ, ಆಮಿಷಗಳು ನಡೆದು ಸೋಲು ಅನುಭವಿಸಬೇಕಾಯಿತು – ಕೆ.ಎಂ. ಶ್ರೀನಿವಾಸ್

ಹಾಸನ: ಪದಾಧಿಕಾರಿಗಳ ಚುನಾವಣೆಯಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ನಾನು ಸ್ವಾಭಿಮಾನಿ ತಂಡದಿಂದ ಸ್ಪರ್ದೆ ಮಾಡಿ ಅಲ್ಪ ಮತಗಳ ಅಂತರದಲ್ಲಿ ಪರಾಜಿತಗೊಂಡಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕಾರಣಿಗಳ ಒತ್ತಡಗಳು, ಆಮಿಷಗಳು ನಡೆದು ಸೋಲು ಅನುಭವಿಸಬೇಕಾಯಿತು ಎಂದು ಸಂಘದ ಪರಾಜಿತ ಅಭ್ಯರ್ಥಿ ಕೆ.ಎಂ. ಶ್ರೀನಿವಾಸ್ ಬೇಸರದಲ್ಲಿ ಹೇಳಿದರು.

     ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ನಮ್ಮ ಎದುರಾಳಿ ಅಭ್ಯರ್ಥಿಯನ್ನೆ ಆಯ್ಕೆ ಮಾಡಬೇಕೆಂದು ಪಣತೊಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು, ಹಾಲಿ ಜೆಡಿಎಸ್ ಶಾಸಕರು ಹಾಗೂ ಮಾಜಿ ಸಚಿವರು ಮತ್ತು ಕಾಂಗ್ರೆಸ್ ಮುಖಂಡರಾದ ಮಂಜೇಗೌಡರ ಜೊತೆ ಸೇರಿ ಒಬ್ಬ ಬಡ ಉಪನ್ಯಾಸಕನ ವಿರುದ್ಧ ದೊಡ್ಡ ಮಟ್ಟದ ರಾಜಕಾರಣದ ಹೋರಾಟ ನಡೆದಿದೆ. ಡಿಸೆಂಬರ್ ೩ರ ವರೆಗೂ ಅನೇಕರು ನಮ್ಮ ಜೊತೆ ಗುರುತಿಸಿಕೊಂಡು ಸಂಘಟನೆಗೆ ಬಂದಂತಹವರು ನಮಗಾಗಿ ದುಡಿದಿದ್ದಾರೆ. ಚುನಾವಣೆ ಹಿಂದಿನ ದಿನ ರಾತ್ರಿಯಲ್ಲಿ ಗಂಟೆ ಗಂಟೆಗೂ ನಡೆದಂತಹ ವ್ಯವಹಾರಗಳು, ನಡೆ ನಮಗೆ ದುಃಖ ತಂದಿದೆ ಎಂದರು. ಈ ಚುನಾವಣೆ ಇತಿಹಾಸ ಸೃಷ್ಟಿಸಿದೆ. ಆತ್ಮೀಯರೇ ಎನಿಸಿಕೊಂಡಿದ್ದ ನಿರ್ದೇಶಕರು ಮೋಸ ಮಾಡಿದರು. ಡಿ. ೩ರ ರಾತ್ರಿಯಿಂದ ಬೆಳಿಗ್ಗೆ ನಡೆದ ವ್ಯವಹಾರದಿಂದ ನಾನು ಸೋಲಬೇಕಾಯಿತು. ರಾಜಕೀಯ ಮುಖಂಡರಾದ ಬಾಗೂರು ಮಂಜೇಗೌಡ, ಹೆಚ್.ಡಿ.ರೇವಣ್ಣ ಒಂದಾಗಿದ್ದರಿಂದ ನಾನು ಅನಾಥನಾದೆ. ಈ ನಡೆ ಭಾರಿ ಬೇಸರ ತರಿಸಿದೆ. ಯಾರೂ ಸಂಘದ ಹಿತದೃಷ್ಟಿಯಿಂದ ಚುನಾವಣೆಯನ್ನು ನೋಡಲಿಲ್ಲ. ಐಪಿಎಲ್ ಮಾದರಿಯಲ್ಲಿ ಈ ಚುನಾವಣೆ ನಡೆದಿದೆ. ಯಾರಾರು ಎಲ್ಲೆಲ್ಲಿ ಒಂದಾದರು ಗೊತ್ತಾಗಲೇ ಇಲ್ಲ.  ಶಿವಸ್ವಾಮಿ ಮತ್ತು ನಾನು ಒಟ್ಟಾದಾಗ ಬೆಂಬಲಿಸಿದವರೇ ನಂತರ ನಮಗೆ ಮೋಸ ಮಾಡಿದರು. ಐದು ವರ್ಷಗಳ ಹಿಂದೆಯೂ ಇದೇ ರೀತಿ ರಾಜಕೀಯ ಮಾಡಿ ನನ್ನ ಸೋಲಿಸಿದರು. ನಮ್ಮ ತಂಡ ಗೆಲ್ಲಬೇಕೆಂಬ ಆಸೆ ಎಲ್ಲರದ್ದಾಗಿತ್ತು ಎಂದು ಹೇಳಿದರು. ರಾಜಕೀಯ ಮುಖಂಡರಾದ ಬಾಗೂರು ಮಂಜೇಗೌಡ, ಹೆಚ್.ಡಿ.ರೇವಣ್ಣ ಒಂದಾಗಿದ್ದರಿಂದ ನಾನು ಅನಾಥನಾದೆ. ಈ ನಡೆ ನನಗೆ ಬೇಸರ ತರಿಸಿದೆ. ಯಾರೂ ಸಂಘದ ಹಿತದೃಷ್ಟಿಯಿಂದ ಚುನಾವಣೆಯನ್ನು ಕಾಣಲಿಲ್ಲ. ನಾವು ಎಲ್ಲಾ ಸರಕಾರಿ ನೌಕರರ ಮನಸ್ಸು ಗೆದ್ದಿದ್ದೇವು. ಮತ ಹಾಕುವುದರಲ್ಲಿ ನಮಗೆ ಮೋಸ ಮಾಡಿದರು. ನಾನು ಇನ್ನೂ ಮುಂದೆ ಯಾವ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದ ಅವರು, ಹಲವಾರು ಆಮಿಷದ ನಡುವೆಯೂ ನನಗೆ ೩೧ ಮತಗಳನ್ನು ನೀಡಿದ ಸಹಕಾರ ಕೊಟ್ಟವರಿಗೆ ಇದೆ ವೇಳೆ ಧನ್ಯವಾದಗಳನ್ನು ತಿಳಿಸಿದರು.

     ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪರಿಷತ್ತ್ ನೂತನ ಸದಸ್ಯರಾದ ಟಿ. ರಾಜು, ಖಜಾಂಚಿ ಅಭ್ಯರ್ಥಿ ಮಧು, ಸಂಘದ ನಿರ್ದೇಶಕ ವಿಶ್ವನಾಥ್ ಇತರರು ಉಪಸ್ಥಿತರಿದ್ದರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page