ರಾಜಕೀಯದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಸಂಸದರಿಗೆ ಸಂಬಳ ಸಾಕಾಗುವುದಿಲ್ಲ ಎಂದು ಸಂಸದೆ ಕಂಗನಾ ರನೌತ್ ಹೇಳಿದ್ದಾರೆ. ತಮ್ಮ ಸಿಬ್ಬಂದಿಗೆ ಸಂಬಳ ನೀಡಿದ ನಂತರ, ಸಂಸದರ ಪಾಲಿಗೆ ಉಳಿಯುವುದು ಬಹಳ ಕಡಿಮೆ ಎಂದು ಅವರು ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.
ಜನ ಪ್ರತಿನಿಧಿಗಳು ಮತ್ತು ಪಿಎಗಳು ವಾಹನಗಳಲ್ಲಿ ತಮ್ಮ ಕ್ಷೇತ್ರಗಳಿಗೆ ಪ್ರಯಾಣಿಸಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ ಎಂದು ಕಂಗನಾ ಹೇಳಿದ್ದಾರೆ. ಕ್ಷೇತ್ರದ ಕೆಲವು ಸ್ಥಳ 300-400 ಕಿ.ಮೀ ದೂರದಲ್ಲಿರುತ್ತದೆ ಎನ್ನುವುದು ಇದಕ್ಕೆ ಕಾರಣ ಎಂದು ಅವರು ಹೇಳಿದರು.
ಇದರಿಂದಾಗಿ ರಾಜಕೀಯ ದುಬಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಂಸದರಿಗೆ ಸಿಗುವ ಸಂಬಳ ಸಾಕಾಗುವುದಿಲ್ಲ. ಈ ಕಾರಣದಿಂದಲೇ ಸಂಸದರು ಬೇರೆ ಕೆಲಸಗಳನ್ನೂ ಮಾಡಬೇಕಾಗುತ್ತದೆ. ಅನೇಕ ಸಂಸದರು ತಮ್ಮದೇ ಆದ ವ್ಯವಹಾರಗಳನ್ನು ಹೊಂದಿದ್ದಾರೆ ಮತ್ತು ಕೆಲವರು ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಸಂಸದರಾಗಲು ಬೇರೆ ಕೆಲಸ ಬೇಕು, ಈ ಹುದ್ದೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಈ ಹಿಂದೆ ಕಂಗನಾ ಜನರು ಮೋರಿ ಒಡೆದಿದೆ ಎನ್ನುವಂತಹ ದೂರುಗಳೊಂದಿಗೆ ಜನರು ನನ್ನ ಬಳಿ ಬರುತ್ತಾರೆ. ನನಗೆ ರಾಜಕೀಯ ಬದುಕನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಅಲ್ಲದೆ ಜನರು ನಿಮ್ಮ ಸ್ವಂತ ದುಡ್ಡಿನಲ್ಲಿ ರಸ್ತೆ ರಿಪೇರಿ ಮಾಡಿಸಿ ಎಂದು ಜನರು ನನ್ನ ಬಳಿ ಆಗ್ರಹಿಸುತ್ತಾರೆ ಎಂದೂ ದೂರಿದ್ದರು.