Saturday, June 15, 2024

ಸತ್ಯ | ನ್ಯಾಯ |ಧರ್ಮ

ಸುದ್ದಿಮನೆಗಳಲ್ಲಿ ಮೋದಿ| ಚಪರಾಸಿ ಪತ್ರಕರ್ತರ ಜೀ ಹುಜೂರ್‌ ಸಂದರ್ಶನ

ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ 31ರಿಂದ 14ರವರೆಗೆ ವಿವಿಧ ನಿಯತಕಾಲಿಕೆಗಳು ಮತ್ತು ಸುದ್ದಿ ವಾಹಿನಿಗಳಿಗೆ 41 ಸಂದರ್ಶನಗಳನ್ನು ನೀಡಿದ್ದಾರೆ. ಈ ಸಂದರ್ಶನಗಳಲ್ಲಿ ಅವರು ಎದುರಿಸಿದ ಕಷ್ಟಕರ ಪ್ರಶ್ನೆಗಳು ಬಹಳ ಕಡಿಮೆ.

ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಅವರಿಗೆ ಕಠಿಣ ಪ್ರಶ್ನೆಯೊಂದು ಎದುರಾಗಿದೆ. ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದ ರ್ಯಾಲಿಯಲ್ಲಿ ಮೋದಿಯವರ ಮುಸ್ಲಿಂ ವಿರೋಧಿ ಹೇಳಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಯದು.
ಅದಕ್ಕೆ ಉತ್ತರವಾಗಿ ಮೋದಿ ಮುಸ್ಲಿಮರಿಗೆ ಮಾತ್ರ ‘ಹೆಚ್ಚಿನ ಮಕ್ಕಳು’ ಎಂದು ಹೇಳಿಲ್ಲ ಎಂದರು. ‘‘ಎಲ್ಲ ಬಡ ಕುಟುಂಬಗಳಲ್ಲಿ ಹೆಚ್ಚು ಮಕ್ಕಳಿದ್ದಾರೆ. ಇದರಿಂದಾಗಿ ಅವರಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಎಲ್ಲಿ ಬಡತನವಿದೆಯೋ ಅಲ್ಲಿ ಮಕ್ಕಳ ಸಮೃದ್ಧಿ ಇರುತ್ತದೆ ಎಂದು ಹೇಳಿದ್ದು ಇಲ್ಲಿ ಹಿಂದೂ ಮುಸ್ಲಿಂ ಎನ್ನುವ ವಿಷಯ ಇದ್ದಿರಲಿಲ್ಲ ಎಂದರು. ಹಾಗಿದ್ದರೆ ನುಸುಳುಕೋರರೆಂದರೆ ಯಾರು ಎನ್ನುವ ಪ್ರಶ್ನೆಯನ್ನು ಕೇಳುವ ಧೈರ್ಯ ಆ ಸಂದರ್ಶಕನಿಗೂ ಇದ್ದಿರಲಿಲ್ಲ.

ಈ ವಿಷಯಗಳ ಕುರಿತ ಪ್ರಶ್ನೆಗಳೆಲ್ಲಿ?

ಸುದ್ದಿಗಾರರೊಂದಿಗೆ ಸಂವಾದ ನಡೆಸುವಾಗ, ಮೋದಿ ಅವರು ತಮ್ಮ ‘ಮೂರನೇ ಅವಧಿ’ ಬಗ್ಗೆ ಹೆಚ್ಚಾಗಿ ಮಾತನಾಡಿದ್ದಾರೆ. ಜೊತೆಗೆ 2047ರ ವೇಳೆಗೆ ಭಾರತದ ದೃಷ್ಟಿಕೋನದ ಬಗ್ಗೆಯೂ ಮಾತನಾಡಿದರು.

ಇಷ್ಟು ಸಂದರ್ಶನಗಳಲ್ಲಿ ಒಬ್ಬ ಸಂದರ್ಶಕನೂ ಹತ್ತು ವರ್ಷಗಳಲ್ಲಿ ನಿಮ್ಮ ಸಾಧನೆಯೇನು ಎಂದು ಪ್ರಶ್ನಿಸಿಲ್ಲ. ಕೋವಿಡ್‌ ನಿಭಾಯಿಸುವಲ್ಲಿ ಮೋದಿ ಸರ್ಕಾರದ ಅಸಮರ್ಥತೆಯ ಕುರಿತು ಪ್ರಶ್ನೆ ಕೇಳಿಲ್ಲ. ದೇಶದಲ್ಲಿ ನಡೆದ ಹಿಂಸಾಚಾರದ ಕುರಿತು ಒಬ್ಬನೂ ತುಟಿ ಎರಡು ಮಾಡಲಿಲ್ಲ. ‘ಅಸ್ಸಾಂ ಟ್ರಿಬ್ಯೂನ್’ಗೆ ನೀಡಿದ ಸಂದರ್ಶನದಲ್ಲಿ ಮಾತ್ರ ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಕೇಳಲಾಯಿತು.

ಸ್ಥಳೀಯ ಸಮಸ್ಯೆಗಳ ವಿಷಯದಲ್ಲೂ ಅದೇ

ತಂತಿ ಟಿವಿ, ಎಎನ್‌ಐ, ರಾಜಸ್ಥಾನ ಪತ್ರಿಕಾ ಮತ್ತು ದಿವ್ಯಾ ಭಾಸ್ಕರ್‌ಗೆ ನೀಡಿದ ಸಂದರ್ಶನದಲ್ಲಿ ಚುನಾವಣಾ ಬಾಂಡ್ ವಿವಾದದ ಕುರಿತು ಮೋದಿ ಅವರನ್ನು ಪ್ರಶ್ನಿಸಲಾಯಿತು. ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರೇಪ್ ವಿಡಿಯೋ ಬೆಳಕಿಗೆ ಬಂದ ನಂತರ ಮೋದಿ 29 ಸಂದರ್ಶನಗಳನ್ನು ನೀಡಿದ್ದಾರೆ. ಪ್ರಜ್ವಲ್ ಜತೆಗಿನ ಸಂಬಂಧವನ್ನು ಕೇವಲ ಮೂರು ಸಂದರ್ಶನಗಳಲ್ಲಿ (ಟೈಮ್ಸ್ ನೌ ಚಾನೆಲ್, ಹಿಂದಿ ನಿಯತಕಾಲಿಕ ಹಿಂದೂಸ್ತಾನ್, ಇಂಗ್ಲಿಷ್ ನಿಯತಕಾಲಿಕ ಹಿಂದೂಸ್ತಾನ್ ಟೈಮ್ಸ್) ಪ್ರಶ್ನಿಸಲಾಗಿದೆ. ಪ್ರಾದೇಶಿಕ ಮಾಧ್ಯಮ ಸಂಸ್ಥೆಗಳು ತಮ್ಮ ರಾಜ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸುವಲ್ಲಿ ವಿಫಲವಾಗಿವೆ.

ಉತ್ತರಾಖಂಡ ಮೂಲದ ಸ್ಥಳೀಯ ಹಿಂದಿ ಪತ್ರಿಕೆಗಳಾದ ಅಮರ್ ಉಜಾಲಾ ಮತ್ತು ಹಿಂದೂಸ್ತಾನ್ ವಿವಾದಿತ ಅಗ್ನಿಪಥ್ ಕುರಿತು ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ. ಈ ರಾಜ್ಯದಿಂದ ಹೆಚ್ಚಿನ ಸಂಖ್ಯೆಯ ಯುವಕರು ಸೇನೆಗೆ ಸೇರುತ್ತಾರೆ. ಅಸ್ಸಾಂ ಮತ್ತು ಬಂಗಾಳ ರಾಜ್ಯಗಳಲ್ಲಿ ಸಿಎಎ ಪ್ರಮುಖ ಚುನಾವಣಾ ವಿಷಯವಾಗಿದೆ. ಗುಜರಾತ್‌ನ ಆರು ಸುದ್ದಿ ಸಂಸ್ಥೆಗಳು ಮೋದಿಯವರನ್ನು ಸಂದರ್ಶಿಸಿವೆ. ಆದರೆ ಎಲ್ಲಿಯೂ ರಾಜ್ಯ ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ಯಾರೂ ಅವರಿಗೆ ಪ್ರಶ್ನೆ ಕೇಳಲಿಲ್ಲ.

ಬರೀ ಸುಳ್ಳು


ಈ ಪತ್ರಕರ್ತರ ವೇಶದ ಸಂದರ್ಶಕರು ಮೋದಿ ನೀಡಿದ ಸುಳ್ಳು ಹೇಳಿಕೆಗಳು ಹಾಗೂ ಸುಳ್ಳು ಮಾಹಿತಿಗಳನ್ನು ಹಾಗೆಯೇ ಪ್ರಸಾರ ಮಾಡಿದರು. ನಂತರ ಸುದ್ದಿ ಮಾಧ್ಯಮಗಳು ಸಹ ಅದನ್ನು ಹಾಗೆಯೇ ಪ್ರಸಾರ ಮಾಡಿದವು. ಪ್ರಜ್ವಲ್‌ ರೇವಣ್ಣ ಕುರಿತಾದ ಪ್ರಶ್ನೆಗೆ ಮೋದಿ ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದರು. ನಂತರ ಈ ಹಿಂದೆ ಪ್ರಜ್ವಲ್‌ ರೇವಣ್ಣ ಅವರಿಗೆ ಕಾಂಗ್ರೆಸ್‌ ಜೊತೆಗೂ ನಂಟಿತ್ತು ಎನ್ನುವ ಮೂಲಕ ಆ ಪ್ರಶ್ನೆಯನ್ನು ಮೂಲೆಗೊತ್ತಿದರು. ಜೆಡಿಎಸ್‌ ಜೊತೆ ಮೈತ್ರಿ ಬೇಡ ಎಂದಿದ್ದ ಸ್ಥಳೀಯ ಬಿಜೆಪಿ ನಾಯಕರ ಸಲಹೆಯ ಕುರಿತು ಯಾವ ಪತ್ರಕರ್ತನೂ ಪ್ರಶ್ನೆ ಕೇಳಿಲ್ಲ.

ಸುಳ್ಳು… ಅಸಂಬದ್ಧ

ಧರ್ಮದ ಆಧಾರದ ಮೇಲೆ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ನೀಡುವುದು ಅಪಾಯಕಾರಿ ಅಲ್ಲವೇ? ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ, ಈ ವಿಷಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ ಎಂದು ಸುಳ್ಳು ಹೇಳಿದರು. ಸಂವಿಧಾನವನ್ನು ಬದಲಾಯಿಸಲು ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಬಯಸಿದೆ ಎಂದು ಟಿವಿ9 ನೆಟ್‌ವರ್ಕ್‌ನ ಪತ್ರಕರ್ತರು ಪ್ರತಿಪಕ್ಷಗಳ ಆರೋಪದ ಕುರಿತು ಎತ್ತಿದಾಗ, ಮೋದಿ ಸುದೀರ್ಘ ಉತ್ತರವನ್ನು ನೀಡಿದರು ಮತ್ತು ಹಲವಾರು ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ಬದಲಾಯಿಸಿದೆ ಎಂದು ಆರೋಪಿಸಿದರು.

ಬಿಜೆಪಿಯ ನಾಲ್ವರು ನಾಯಕರು ಬಹುಮತ ಪಡೆದರೆ ಸಂವಿಧಾನ ಬದಲಿಸುತ್ತೇವೆ ಎಂದು ಬಹಿರಂಗವಾಗಿ ಹೇಳಿದ್ದನ್ನು ಮೋದಿಗೆ ಯಾರೂ ನೆನಪಿಸಲಿಲ್ಲ. ಕೇವಲ ನಾಲ್ಕು ಸಂದರ್ಶನಗಳಲ್ಲಿ ಚುನಾವಣಾ ಬಾಂಡ್‌ಗಳ ಬಗ್ಗೆ ಮೋದಿಯವರನ್ನು ಕೇಳಲಾಗಿದೆ ಮತ್ತು ಅವರು ಯೋಜನೆಯನ್ನು ಬೆಂಬಲಿಸಿ ಮಾತನಾಡಿದ್ದಾರೆ. ಎಲೆಕ್ಟೋರಲ್ ಬಾಂಡ್ ಯೋಜನೆಯ ಮೂಲಕ ಕಾರ್ಪೊರೇಟ್‌ಗಳು ಮತ್ತು ಬಿಜೆಪಿ ನಡುವಿನ ಕ್ವಿಡ್ ಪ್ರೊ ಕೋ ಸಂಬಂಧದ ಬಗ್ಗೆ ಯಾರೂ ಮೋದಿಯವರನ್ನು ಏನನ್ನೂ ಕೇಳಲಿಲ್ಲ.

ಚಾರ್‌ ಸೋ ಪಾರ್‌ ಎನ್ನುವುದು ಜನರ ಘೋಷವಾಕ್ಯ

ಮೋದಿಯವರ ಸಂದರ್ಶನಗಳಲ್ಲಿ ಆಗಾಗ ಕೇಳಿಬರುವ ಇನ್ನೊಂದು ಮಾತು ‘400 ಪ್ಲಸ್’. ಬಿಜೆಪಿ ಕಾರ್ಯಕರ್ತರನ್ನು ಸಂತೃಪ್ತರನ್ನಾಗಿಸಲು ಮೋದಿ ಈ ಘೋಷಣೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂಬ ಟೀಕೆಗಳಿದ್ದವು. ಆದರೆ ಅಂತಹದ್ದೇನೂ ಇಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಎನ್‌ಡಿಎ ಈಗಾಗಲೇ 400ಕ್ಕೂ ಹೆಚ್ಚು ಸ್ಥಾನಗಳನ್ನು ಹೊಂದಿದೆ ಎಂದ ಅವರು, ‘2019ರಲ್ಲಿ ಎನ್‌ಡಿಎ ಸುಮಾರು 359 ಸ್ಥಾನಗಳನ್ನು ಗೆದ್ದಿದೆ. ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳ ರಾಜಕೀಯ ಪಕ್ಷಗಳು ನಮ್ಮ ಪರವಾಗಿವೆ. ಅಂದರೆ ಇನ್ನೂ 35 ಸ್ಥಾನಗಳು ಸೇರ್ಪಡೆಯಾಗಲಿವೆ. ಈಶಾನ್ಯ ಭಾಗದ ಸಂಸದರೂ ನಮ್ಮ ಪರ ಇದ್ದಾರೆ’ ಎಂದು ವಿವರಿಸಿದರು.

ದಕ್ಷಿಣದ ಕಡೆಗೂ ಗಮನ

ಮೋದಿ ತಮ್ಮ ಸಂದರ್ಶನಗಳಲ್ಲಿ ದಕ್ಷಿಣದ ಮಾಧ್ಯಮ ಸಂಸ್ಥೆಗಳಿಗೆ ಆದ್ಯತೆ ನೀಡಿದರು. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಸೇರಿದ ಏಳು ಸಂಸ್ಥೆಗಳಿಗೆ ಸಂದರ್ಶನ ನೀಡಿದರು. ಈ ಬಾರಿ ಗುಜರಾತ್ ನಂತರ ಅವರು ಹೆಚ್ಚಾಗಿ ದಕ್ಷಿಣದತ್ತ ಗಮನ ಹರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು