ದೆಹಲಿ ಚುನಾವಣೆ : ಬಿಜೆಪಿ ಸುಲಭ ಮುನ್ನಡೆ, ಎಎಪಿ ಘಟಾನುಘಟಿಗಳು ನೆಲಕ್ಕೆ
ಲಿಂಕ್ ನಕಲಿಸಲಾಗಿದೆ ✓
ದೆಹಲಿ ವಿಧಾನಸಭೆ ಚುನಾವಣೆ 2025 ರ ಅಂತಿಮ ಫಲಿತಾಂಶ ಇನ್ನೇನು ಕೆಲವೇ ಗಂಟೆಗಳಲ್ಲಿ ಬರಲಿದ್ದು, ಮತ ಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ. ಆರಂಭಿಕ ಹಂತದಲ್ಲೇ ಆಡಳಿತಾರೂಢ ಎಎಪಿ ಪಕ್ಷ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದೆ.
43 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ರೆ, ಆಮ್ ಆದ್ಮಿ ಪಕ್ಷ 27 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ರೆ, ಆದರೆ ದೆಹಲಿ ಮಾಜಿ ಸಿಎಂ ಕೇಜ್ರಿವಾಲ್ ಗೆ ನವದೆಹಲಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ರೆ, ಸಿಎಂ ಆತಿಶಿ ಹಿನ್ನಡೆ ಸಾಧಿಸಿದ್ದಾರೆ.
ದೆಹಲಿಯ ಎಲ್ಲಾ 70 ಕ್ಷೇತ್ರಗಳಲ್ಲೂ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ. ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು 9 ನೇ ಸುತ್ತಿನ ಮತ ಎಣಿಕೆಯಲ್ಲೂ ಹಿನ್ನಡೆ ಸಾಧಿಸಿದ್ದಾರೆ. ಆದರೆ ಬಹುತೇಕ ಎಎಪಿ ನಾಯಕರು ಈ ಚುನಾವಣೆಯಲ್ಲಿ ಸೋಲನ್ನಪ್ಪುವ ಸಾಧ್ಯತೆ ಎದ್ದು ಕಾಣುತ್ತಿದೆ.
ಒಟ್ಟಾರೆ ಬಿಜೆಪಿ ಸುಲಭವಾಗಿ ಮುನ್ನಡೆ ಸಾಧಿಸುತ್ತಿದ್ದರೆ, ಕಾಂಗ್ರೆಸ್ ಖಾತೆ ತೆರೆಯಲು ಹಿಂದೇಟು ಹಾಕುತ್ತಿರುವುದು ಸ್ಪಷ್ಟ.
Peepal Media Desk
Peepal Media · ರಾಜಕೀಯ ವಿಭಾಗ