ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ದೇವೇಗೌಡರಿಗೆ ಬಂದ ಆ ಫೋನ್ ಕರೆಯೂ, ಕುಮಾರಸ್ವಾಮಿಯ ದಿಢೀರ್ ಶರಣಾಗತಿ ಪತ್ರಿಕಾಗೋಷ್ಠಿಯೂ

PPeepal Media Desk

Peepal Media Desk ರಾಜಕೀಯ, ವಿಶೇಷ

• 2 ನಿಮಿಷದ ಓದು

ದೇವೇಗೌಡರಿಗೆ ಬಂದ ಆ ಫೋನ್ ಕರೆಯೂ, ಕುಮಾರಸ್ವಾಮಿಯ ದಿಢೀರ್ ಶರಣಾಗತಿ ಪತ್ರಿಕಾಗೋಷ್ಠಿಯೂ

BREAKING NEWS

ಎಲ್ಲರೂ ಪ್ರಜ್ವಲ್ ರೇವಣ್ಣ ಎಲ್ಲಿದ್ದಾನೆ? ಎಂದು ತಲೆಕೆಡಿಸಿಕೊಂಡಿದ್ದಾರೆ. ಇಂಟರ್ ಪೋಲ್ ಸಹಾಯ ಕೇಳಿದರೂ ಎಸ್ ಐ ಟಿಯಿಂದ ಆತನ ಜಾಡು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಒಮ್ಮೊಮ್ಮೆ ಜರ್ಮನಿಯತ್ತ ಬೊಟ್ಟು ತೋರಿಸಿದರೆ, ಮತ್ತೊಂದು ಸಲ ಲಂಡನ್ ನಲ್ಲಿ ಓಡಾಡಿಕೊಂಡಿದ್ದಾನೆ ಎಂಬ ಸುದ್ದಿಗಳು ಬರುತ್ತಿವೆ.

ಇಂತದ್ದೊಂದು ದೊಡ್ಡ ಲೈಂಗಿಕ ಹಗರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಎಸಗಿರುವ ತಪ್ಪು ಎಷ್ಟು ದೊಡ್ಡದೋ, ಆತನಿಗೆ ರಕ್ಷಣೆ ಕೊಟ್ಟು ಬಚಾವು ಮಾಡುತ್ತಿರುವವರ ಅಪರಾಧ ಕೂಡಾ ಅಷ್ಟೇ ದೊಡ್ಡದು. ಇದರಲ್ಲಿ ಅನುಮಾನವಿಲ್ಲ. ಹಾಗೆ ಬಚಾವು ಮಾಡುತ್ತಿರುವವರು ಯಾರು? ಕೇಂದ್ರ ಸರ್ಕಾರ, ಆತನಿಗೆ ನೀಡಿರುವ ಡಿಪ್ಲೊಮ್ಯಾಟಿಕ್ ಪಾಸ್ ರದ್ದು ಮಾಡದೆ ಆತ ವಿದೇಶದಲ್ಲೆ ತಲೆಮರೆಸಿಕೊಳ್ಳಲು ನೆರವಾಗುತ್ತಿದೆ ಅನ್ನೋದು ರಾಜ್ಯ ಕಾಂಗ್ರೆಸಿಗರ ವಾದ. ಇದು ಎಷ್ಟರಮಟ್ಟಿಗೆ ಸತ್ಯವೋ, ಸಮಂಜಸವೋ ಗೊತ್ತಿಲ್ಲ; ಆದರೆ ಪ್ರಜ್ವಲ್ ರೇವಣ್ಣನ ಕಣ್ಮರೆಯ ಹಿಂದೆ ಸ್ವತಃ ಆತನ ಕುಟುಂಬದ ಪಾತ್ರವನ್ನು ಅನುಮಾನಿಸದೆ ಇರಲು ಸಾಧ್ಯವಿಲ್ಲ.

ಮಾಜಿ ಪ್ರಧಾನಿ, ಮಾಜಿ ಸಿಎಂ, ಮಾಜಿ ಸಚಿವ, ಮಾಜಿ ಶಾಸಕಿಯರ ದಂಡೇ ಇರುವ ಈ ಕುಟುಂಬ ಒಬ್ಬ ಅಪರಾಧಿಯನ್ನು ಹೀಗೆ ನೆಲದ ಕಾನೂನಿಗೆ ವಿರುದ್ಧವಾಗಿ ಬಚ್ಚಿಟ್ಟು ರಕ್ಷಣೆ ಮಾಡುತ್ತಿರುವುದು ಎಷ್ಟು ಸರಿ? ಅವರ್‍ಯಾರಿಗೂ ಆತ ಎಲ್ಲಿದ್ದಾನೆ ಎಂಬ ಮಾಹಿತಿ ಇಲ್ಲವೇ? ಕುಟುಂಬದ ಸಂಪರ್ಕ, ಪ್ರಭಾವ ಕಡಿದುಕೊಂಡು ಆತ ಪರದೇಶಿ ನೆಲದಲ್ಲಿ ಇಷ್ಟು ದಿನಗಳ ಕಾಲ ಉಳಿಯಲು ಸಾಧ್ಯವೇ?

ಇಂತಹ ಪ್ರಶ್ನೆಗಳಿಂದ ಆ ರಾಜಕೀಯ ಪ್ರಭಾವಿ ಕುಟುಂಬವನ್ನು ತಿವಿಯಬೇಕಿದ್ದ ನಮ್ಮ ಮಾಧ್ಯಮಗಳು ಮತ್ತು ಸಮಾಜ, ಅದನ್ನು ಬಿಟ್ಟು ಆ ಪೆನ್ ಡ್ರೈವ್ ಹೊರಗೆ ಬರುವಲ್ಲಿ ಯಾರ ಪಾತ್ರವಿದೆ ಎಂಬ ಸರ್ವಿಸ್ ರಸ್ತೆಗಿಳಿದು ತನಿಖೆಯ ಹೆದ್ದಾರಿಯನ್ನೇ ಮರೆಮಾಚಲು ಯತ್ನಿಸುತ್ತಿವೆ. ಮತ್ತೊಂದೆಡೆ ಯಾರದೋ ಸಂಚಿಗೆ ಬಲಿಯಾಗುತ್ತಿರುವ `ಸಂತ್ರಸ್ತ ಕುಟುಂಬದಂತೆ’ ದೇವೇಗೌಡರ ಫ್ಯಾಮಿಲಿಯನ್ನು ಬಿಂಬಿಸಲಾಗುತ್ತಿದೆ. ಇದು ಯಾವ ಹಂತದವರೆಗೆ ಹೋಗಿದೆಯೆಂದರೆ, ಕಾಂಗ್ರೆಸ್ ಪಕ್ಷವು ದೇವೇಗೌಡರ ಸಾವಿಗೆ ಸಂಚು ನಡೆಸಿದೆ ಎಂದು ಜೆಡಿಎಸ್ ಪಕ್ಷ, ತನ್ನ ಘನತೆಯನ್ನು ಮರೆತು ಟ್ವೀಟಿಸಿ ಆರೋಪಕ್ಕಿಳಿದಿದೆ!

ದೇವೇಗೌಡರು ಹಿರಿಯರಿರಬಹುದು; ಅನುಭವಿ ರಾಜಕಾರಣಿಯೂ ಆಗಿರಬಹುದು; ಮಾಜಿ ಪ್ರಧಾನಿ ಅಂತಲೂ ಅನ್ನಿಸಿಕೊಂಡಿರಬಹುದು; ಆದರೆ ಈ ಪೆನ್ ಡ್ರೈವ್ ಪ್ರಕರಣದಲ್ಲಿ ಅವರು ಅಮಾಯಕರೇ? ಈ ನೆಲದ ಕಾನೂನು ಪ್ರಕ್ರಿಯೆಯ ಮೇಲೆ ಒಬ್ಬ ಮಾಜಿ ಪ್ರಧಾನಿಯಾಗಿ ಅವರೇ ವಿಶ್ವಾಸ ಕಳೆದುಕೊಂಡರೇ? ತಮ್ಮ ಮೊಮ್ಮಗ ಎಲ್ಲಿದ್ದಾನೆ ಎಂಬ ಮಾಹಿತಿ ನಿಜಕ್ಕೂ ಈ ಫೀನಿಕ್ಸ್ ರಾಜಕಾರಣಿಗೆ ತಿಳಿದಿಲ್ಲವೇ?

ಇದಕ್ಕೆಲ್ಲ ಕೊನೆಗೂ ಉತ್ತರ ಸಿಗುವ ಕಾಲ ಹತ್ತಿರವಾದಂತೆ ಕಾಣುತ್ತೆ. ಎಸ್ ಐ ಟಿ ತನಿಖೆಗೆ ಪೂರಕವಾಗುವ ಮಹತ್ವದ ಸುಳಿವೊಂದು ಸಿಕ್ಕ ಬಗ್ಗೆ ಈಗ ಸುದ್ದಿಗಳು ಹರಿದಾಡುತ್ತಿವೆ. 92ನೇ ಜನ್ಮದಿನದಂದು ದೇವೇಗೌಡರಿಗೆ ವಿದೇಶದಿಂದ ಕರೆಯೊಂದು ಬಂದ ಬಗ್ಗೆ ಎಸ್ ಐ ಟಿಗೆ ಮಾಹಿತಿ ಸಿಕ್ಕಿದೆಯಂತೆ. ಆ ಐ ಎಸ್ ಡಿ ಕರೆ ಯಾರು ಮಾಡಿದ್ದರು, ಯಾರ ನಂಬರ್ ಮೂಲಕ ಬಂದಿತ್ತು ಅನ್ನೋದಕ್ಕಿಂತ ಆ ಕರೆಯ ಮೂಲಕ ದೇವೇಗೌಡರೊಟ್ಟಿಗೆ ಮಾತಾಡಿದ್ದು ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅನ್ನೋ ಸುದ್ದಿ ಈಗ ತನಿಖೆಯ ವೇಗವನ್ನೇ ಬದಲಾಯಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬೆಂಗಳೂರಿನ ಖ್ಯಾತ ಉದ್ಯಮಿ ಹಾಗೂ ಚಿನ್ನದ ವ್ಯಾಪಾರಿಯೂ ಆಗಿರುವ ದೇವೇಗೌಡರ ಕುಟುಂಬದ ಆಪ್ತ ವ್ಯಕ್ತಿಯೊಬ್ಬನ ಸಂಬಂಧಿಯ ವಿದೇಶಿ ಸಂಪರ್ಕ ಸಂಖ್ಯೆಯಿಂದ ಸಂಪರ್ಕಿಸಲಾದ ಆ ದೂರವಾಣಿಯಲ್ಲಿ ದೇವೇಗೌಡರು ಮತ್ತು ಪ್ರಜ್ವಲ್ ರೇವಣ್ಣ ಪರಸ್ಪರ 1.52 ನಿಮಿಷಗಳ ಕಾಲ ಮಾತಾಡಿದ್ದಾರೆ ಎನ್ನುತ್ತಿವೆ ಎಸ್ ಐ ಟಿ ಮೂಲಗಳು.

ಏನೇನು ಮಾತಾಡಿದ್ದಾರೆ ಅನ್ನುವುದು ಬೇರೆ ಸಂಗತಿ. ತಮ್ಮ ತಾತನ ಜನ್ಮದಿನಕ್ಕೆ ಪ್ರಜ್ವಲ್ ಶುಭಾಶಯ ಕೋರಿರಬಹುದು ಅಥವಾ ಈ ಕೇಸಿನ ಬಗ್ಗೆ, ತಮ್ಮ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿರಬಹುದು. ತನಿಖೆಯ ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ತಿಳಿಯಬಹುದು. ಆದರೆ ವಿಷಯ ಅದಲ್ಲ. ಪ್ರಮುಖ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ತಮ್ಮ ಮೊಮ್ಮಗ ಎಲ್ಲಿದ್ದಾನೆ ಎಂಬ ಮಾಹಿತಿ ದೇವೇಗೌಡರನ್ನೂ ಒಳಗೊಂಡಂತೆ ಅವರ ಕುಟುಂಬದ ಪ್ರತಿಯೊಬ್ಬರಿಗೂ ತಿಳಿದಿದೆ ಅನ್ನೋದು ಇದರಿಂದ ಖಾತ್ರಿಯಾಗುತ್ತೆ. ಆಪಾದಿತನೊಬ್ಬನನ್ನು ಮುಚ್ಚಿಡುತ್ತಿರುವ ಅಪರಾಧದಲ್ಲಿ ಈ ಕುಟುಂಬ ಭಾಗಿಯಾಗಿರುವುದು ಸತ್ಯವಾದಂತಾಗುತ್ತೆ. ಎಸ್ ಐ ಟಿ ತನಿಖಾಧಿಕಾರಿಗಳಿಗೆ ಅದೇಗೋ ಈ ಫೋನ್ ಕಾಲ್ ಮಾತುಕತೆಯ ಮಾಹಿತಿ ಸಿಕ್ಕಿರುವುದು ದೇವೇಗೌಡರ ಕುಟುಂಬಕ್ಕೆ ಗೊತ್ತಾಗಿರುವುದರಿಂದಲೇ ಎಚ್ ಡಿ ಕುಮಾರಸ್ವಾಮಿ ದಿಢೀರ್ ಪತ್ರಿಕಾಗೋಷ್ಠಿ ನಡೆಸಿ, ‘ದೇವೇಗೌಡರ ಮೇಲೆ ಗೌರವವಿದ್ದರೆ ಇನ್ನು ಇಪ್ಪತ್ನಾಲ್ಕರಿಂದ ನಲವತ್ತೆಂಟು ತಾಸುಗಳ ಒಳಗೆ ತನಿಖಾಧಿಕಾರಿಗಳ ಮುಂದೆ ಶರಣಾಗು’ ಎಂದು ಪ್ರಜ್ವಲ್ ಗೆ ಮನವಿ ಮಾಡಿಕೊಂಡಿದ್ದು ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಒಂದು ಅಪರಾಧದ ತನಿಖೆಯ ದಿಕ್ಕನ್ನೇ ಡಿ-ರೇಲ್ ಮಾಡುವ, ಅಪರಾಧಿಯನ್ನೇ ನಿಗೂಢವಾಗಿ ಬಚ್ಚಿಟ್ಟು ರಕ್ಷಿಸುವ, ತನಿಖಾ ಸಂಸ್ಥೆಯನ್ನೇ ಅವಮಾನಿಸುವ, ಅಪರಾಧ ಪ್ರಕರಣಕ್ಕೆ ರಾಜಕೀಯ ಲೇಪ ಬಳಿಯುತ್ತಿರುವ, ಕುಟುಂಬದ ಕುಡಿಯ ರಕ್ಷಣೆಗೋಸ್ಕರ ಮಹಿಳಾ ಸಂತ್ರಸ್ತೆಯರಿಗೆ, ಇಡೀ ಸ್ತ್ರೀ ಕುಲಕ್ಕೇ ದ್ರೋಹಗೈಯುತ್ತಿರುವ ಆ ಕುಟುಂಬಕ್ಕೆ `ಹುತಾತ್ಮ’ ಪಟ್ಟ ಕಟ್ಟಲು ಯತ್ನಿಸುತ್ತಿರುವವರು ಈ ನೆಲದ ಕಾನೂನಿಗಷ್ಟೇ ದ್ರೋಹ ಎಸಗುತ್ತಿಲ್ಲ; ತಾವು ಹುಟ್ಟಿಬಂದ ತಾಯಿಗರ್ಭಕ್ಕೂ ಅಪಮಾನಗೈಯುತ್ತಿದ್ದಾರೆ.

  • ವಿಶ್ವಾರಾಧ್ಯ ಸಿ ಕನ್ನಿಗಾನಹಳ್ಳಿ
PPeepal Media Desk

Peepal Media Desk

Peepal Media · ರಾಜಕೀಯ ವಿಭಾಗ

ಸಂಬಂಧಿತ ಸುದ್ದಿಗಳು