ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಪ್ರಸ್ತುತ ಧರ್ಮ ಮತ್ತು ರಾಜಕಾರಣ ದಾರಿ ತಪ್ಪಿದ್ದು ಸರಿದಾರಿಗೆ ಕರೆದೊಯುವ ಕೆಲಸ ಆಗಲಿ – ಡಾ. ಬೈರಮಂಗಲ ರಾಮೇಗೌಡ

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌ ಅಂಕಣ, ರಾಜಕೀಯ, ರಾಜ್ಯ

• 2 ನಿಮಿಷದ ಓದು

ಪ್ರಸ್ತುತ ಧರ್ಮ ಮತ್ತು ರಾಜಕಾರಣ ದಾರಿ ತಪ್ಪಿದ್ದು ಸರಿದಾರಿಗೆ ಕರೆದೊಯುವ ಕೆಲಸ ಆಗಲಿ – ಡಾ. ಬೈರಮಂಗಲ ರಾಮೇಗೌಡ
filter: 0; fileterIntensity: 0.000000; filterMask: 0; captureOrientation: 0; shaking: 0.024806; highlight: 1; algolist: 0; multi-frame: 1; brp_mask: 0; brp_del_th: 0.0000,0.0000; brp_del_sen: 0.0000,0.0000; delta:null; module: photo;hw-remosaic: false;touch: (0.4494448, 0.5311048);sceneMode: 8;cct_value: 0;AI_Scene: (-1, -1);aec_lux: 292.0;aec_lux_index: 0;albedo: ;confidence: ;motionLevel: 0;weatherinfo: null;temperature: 42;zeissColor: bright;

ಹಾಸನ : ಪ್ರಸ್ತುತ ದಿನಗಳಲ್ಲಿ ಧರ್ಮ ಮತ್ತು ರಾಜಕಾರಣ ಸೇರಿದಂತೆ ಇತರೆಗಳಿಂದ ದಾರಿ ತಪ್ಪಿದ್ದು ಅವುಗಳನ್ನು ಸರಿದಾರಿಗೆ ಕರೆದೊಯ್ಯುವ ಕೆಲಸವನ್ನು ಕಾವ್ಯಗಳು ಮಾಡಬೇಕು ಎಂದು ಬಿಎಂಶ್ರೀ ಪ್ರತಿಷ್ಠಾನ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ತಿಳಿಸಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಪ್ರತಿ ಜಿಲ್ಲೆ ಹೊರನಾಡಿನ ಕನ್ನಡ ಪ್ರದೇಶಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿ ತಿಂಗಳ ಮೂರನೇ ಭಾನುವಾರ ಆಯೋಜಿಸಿರುವ ಕವಿಗೋಷ್ಠಿ ಕಾವ್ಯ ಸಂಸ್ಕೃತಿ ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಧರ್ಮ ಮತ್ತು ರಾಜಕಾರಣ ದಾರಿ ತಪ್ಪಿದ್ದು ಅವುಗಳನ್ನು ಸರಿದಾರಿಗೆ ಕರೆದೊಯ್ಯುವ ಕೆಲಸವನ್ನು ಕಾವ್ಯಗಳು ಮಾಡಬೇಕು ಎಂದು ಸಮಾಜದಲ್ಲಿ ನಿತ್ಯ ನಡೆಯುವ ಅಧ್ವಾನ, ಅನಾಚಾರ, ಭ್ರಷ್ಟಾಚಾರಗಳನ್ನು ಸೂಕ್ಷ್ಮವಾಗಿ ಕುಟುಕುವ ಕೆಲಸವನ್ನು ಕಾವ್ಯ ಮಾಡುತ್ತದೆ. ತಪ್ಪುಗಳನ್ನು ಮೊನಚಾದ ಬರಹಗಳ ಮೂಲಕ ಸಮಾಜಕ್ಕೆ ತಿಳಿಸುವ ಕೆಲಸವನ್ನು ಕವಿ ನಿರಂತರವಾಗಿ ಮಾಡುತ್ತಾನೆ. ಕವಿಯು ಅಂತರಂಗದ ಭಾವನೆಯನ್ನು ಬರಹ ರೂಪದಲ್ಲಿ ಪ್ರಕಟಿಸಿದಾಗ ಜೈಲು ಶಿಕ್ಷೆ ಅನುಭವಿಸಿದ ನಿದರ್ಶನಗಳು ಸಾಕಷ್ಟಿವೆ ಎಂದರು. ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮೇರಿಕಾದ ಲೇಖಕ ಗೆಬ್ರಿಯಲ್ ಗಾರ್ಸಿಯಾ ಕೂಡ ವಿಶ್ವದಲ್ಲಿ ರಾಜಕಾರಣ ಮಾತ್ರವಲ್ಲದೆ ಧರ್ಮವೂ ಕಲುಷಿತಗೊಂಡಿದೆ ಎಂದು ಹೇಳಿದ್ದಾರೆ. ರಾಜಕಾರಣವನ್ನು ಸರಿದಾರಿಗೆ ತರಲು, ತಪ್ಪು ಮಾಡುವವರ ಕಿವಿ ಹಿಂಡಲು ಕಾವ್ಯ ನೆರವಾಗುತ್ತದೆ ಎಂದ


ವಾಮನ ರೂಪಿ ಕಾವ್ಯಕ್ಕೆ ತ್ರಿವಿಕ್ರಮ ಶಕ್ತಿ ಇದೆ. ಕಾವ್ಯ ಯಾವಾಗ ಪ್ರಾರಂಭವಾಯಿತೋ ಆಗಿನಿಂದಲೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದೆ. ಸರ್ಕಾರಿ ಪ್ರಾಯೋಜಿತ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಪ್ರತಿಭಾನ್ವಿತ ಕವಿಗಳಿಗೆ ವೇದಿಕೆ ಸಿಗುವುದಿಲ್ಲ. ಅದರಿಂದ ಮನನೊಂದ ಸಮಾನ ಮನಸ್ಕರೆಲ್ಲ ಒಟ್ಟಾಗಿ ಕಾವ್ಯ ಸಂಸ್ಕೃತಿ ಯಾನ ಸಂಘಟನೆ ರಚಿಸಿದ್ದು ಪ್ರತಿ ಜಿಲ್ಲೆಗೂ ಭೇಟಿ ನೀಡುತ್ತಿದ್ದೇವೆ. ಕವಿಗೋಷ್ಠಿ ಆಯೋಜನೆ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು. ರಂಗಕರ್ಮಿ, ಕಾವ್ಯ ಸಂಸ್ಕೃತಿ ಯಾನ ಪ್ರಧಾನ ಸಂಚಾಲಕ ಮಲ್ಲಿಕಾರ್ಜುನನಸ್ವಾಮಿ ಮಹಾಮನೆ ಪ್ರಸ್ತಾವಿಕ ನುಡಿಯಲ್ಲಿ ಮಾತನಾಡಿ, ಸಮಾಜದಲ್ಲಿ ಸುಧಾರಿಸುವುದು ಇದ್ರೆ ಅದು ಈ ಕಾವ್ಯ. ಅದರಲ್ಲೂ ಕೊರೋನಾ ಸಂದರ್ಭದಲ್ಲಿ ಬದುಕೆ ಕಷ್ಟವಾಗಿತು. ಈ ಸಂದರ್ಭದಲ್ಲಿ ಚೈತನ್ಯ ತುಂಬಿರುವುದು ಈ ಕವಿತೆ. ಹೊಸ ಚೈತನ್ಯ. ಕಾವ್ಯ ಎಂಬುದು ಒಂದು ಸಮಾಜಕ್ಕೆ ಸರಳ ಬದುಕು ನೀಡಿತು. ಹೃಯದಕ್ಕೆ ತಟ್ಟಿತು. ಕಾವ್ಯ ಎಂಬುದು, ಯಾರೋಬ್ಬರ ಸ್ವತ್ತು ಅಲ್ಲ. ಸಾಮಾನ್ಯ ಜನರು ಸ್ವತ್ತು. ಕಾವ್ಯ ಬರೆಯುವಾಗ ಯಾವ ಶ್ರೀಮಂತಿಕೆ ಕಾಣುವುದಿಲ್ಲ. ಇಂದು ಇಡೀ ದೇಶದಲ್ಲಿ ಏನು ಕಾಡುತ್ತಿದೆ ಬಗ್ಗೆ ಯೋಚನೆ ಮಾಡಬೇಕು ಎಂದರು.

ನಾಟಕಕಾರ ಡಾ. ಚಂದ್ರು ಕಾಳೇನಹಳ್ಳಿ ಮಾತನಾಡಿ, ಸಮಾಜದಲ್ಲಿ ನಿತ್ಯ ನಡೆಯುವ ಅಧ್ವಾನ, ಅನಾಚಾರ, ಭ್ರಷ್ಟಾಚಾರಗಳನ್ನು ಸೂಕ್ಷ್ಮವಾಗಿ ಕುಟುಕುವ ಕೆಲಸವನ್ನು ಕಾವ್ಯ ಮಾಡುತ್ತದೆ. ಪಂಪನಿAದ ಕುವೆಂಪು ವರೆಗೆ ಹಲವು ಕವಿಗಳನ್ನು ಕನ್ನಡ ನಾಡು ಕಂಡಿದೆ. ಆದರೆ ಯಾರೂ ಕೂಡ ರಾಜ ಪ್ರಭುತ್ವಕ್ಕೆ ಗುಲಾಮರಾಗಲಿಲ್ಲ. ಕವಿಗಳು ನೊಂದವರ ದು:ಖ ದುಮಾನಗಳನ್ನು ಬರವಣಿಗೆ ಮೂಲಕ ಸಮಾಜಕ್ಕೆ ಹೇಳಿದರು. ರಾಜಮನೆತನದ ಆಶ್ರಯ ಪಡೆದರೂ ಸಹ ಗುಲಾಮರಾಗಿರಲಿಲ್ಲ ಎಂದರು. ಕನ್ನಡ ಸಾಹಿತ್ಯ ಹಲವು ಮಜಲುಗಳನ್ನು ಕಂಡಿದೆ. ಕವಿಯಾಗಲು ಕೇವಲ ಕನಸು ಕಂಡರೆ ಸಾಲುವುದಿಲ್ಲ. ಆತ ಕವಿತ್ವವನ್ನು ಮೈಗೂಡಿಸಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷ ಡಾ. ನಲ್ಲೂರು ಪ್ರಸಾದ್, ಹಿರಿಯ ಸಾಹಿತಿ ಭಾನುಮುಸ್ತಾಕ್, ಪ್ರೇಮಕಲಾ, ಚಂದ್ರಶೇಖರ್, ರಂಗಕರ್ಮಿ ಉಲಿವಾಳ್ ಮೋಹನ್, ರಂಗ ಕಲಾವಿದ ಗೋವಿಂದೇಗೌಡ, ಕಸಪಾ ಜಿಲ್ಲಾಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ, ಸಾಹಿತಿ ಹಾಡ್ಳಳ್ಳಿ ನಾಗರಾಜು, ಗುಂಡಣ್ಣ, ಸಂಚಾಲಕ ಚಲಂ ಇತರರು ಉಪಸ್ಥಿತರಿದ್ದರು.

ವಿಷಯಗಳು: #karnataka #news #peepalmedia #politics
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು