ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಭಾರತದ ಗೋದಿ ಮೀಡಿಯಾಗಳು: ಸೋತರೆ ನಡ್ಡಾ, ಗೆದ್ದರೆ ಮೋದಿ!

PPeepal Media

Peepal Media • ಮೀಡಿಯಾ, ರಾಜಕೀಯ

• 1 ನಿಮಿಷದ ಓದು

ಭಾರತದ ಗೋದಿ ಮೀಡಿಯಾಗಳು: ಸೋತರೆ ನಡ್ಡಾ, ಗೆದ್ದರೆ ಮೋದಿ!

ಈಗಾಗಲೇ ಜಮ್ಮು-ಕಾಶ್ಮೀರ ಹಾಗೂ ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು, ಎರಡೂ ರಾಜ್ಯಗಳಲ್ಲಿ ಬಿಜೆಪಿ ಹಿನ್ನೆಡೆ ಸಾಧಿಸುತ್ತಿದೆ.

ಇದರ ಬೆನ್ನಲ್ಲೇ ಭಾರತದ ಮೋ(ಗೋ)ದಿ ಮೀಡಿಯಾಗಳು ಸಕ್ರಿಯವಾಗಿದ್ದು, ಕಾಂಗ್ರೆಸ್‌ ಚಿನ್ಹೆಯ ಪಕ್ಕದಲ್ಲಿ ರಾಹುಲ್‌ ಗಾಂಧಿ ಚಿತ್ರವನ್ನು ತೋರಿಸುತ್ತಿದ್ದರೆ, ಕಮಲದ ಚಿನ್ಹೆಯ ಪಕ್ಕ ನಡ್ಡಾ ಚಿತ್ರವನ್ನು ತೋರಿಸುತ್ತಿವೆ.

ಇದೊಂದು ಬಹಳ ಹಳೆಯ ಪ್ಯಾಟರ್ನ್.‌ ಯಾವ ರಾಜ್ಯದಲ್ಲೇ ಆಗಲಿ ಅಲ್ಲಿ ಬಿಜೆಪಿ ಗೆದ್ದರೆ ಮೋದಿ ಫೋಟೊ, ಸೋತರೆ ನಡ್ಡಾ ಫೋಟೊ. ಇದು ಪತ್ರಕರ್ತರು ಹಳ್ಳ ಹಿಡಿದಿರುವ ರೀತಿಯನ್ನು ತೋರಿಸುತ್ತದೆ.

ಇದೇ ವಿಷಯದ ಕುರಿತಾಗಿ ಇಂದು ಹಿರಿಯ ಪತ್ರಕರ್ತ ರಾಜದೀಪ ಸರದೇಸಾಯಿ ತಮ್ಮದೇ ಸಹೋದ್ಯೋಗಿ ಇಂಡಿಯಾ ಟುಡೇ ನ್ಯೂಸ್‌ ಆಂಕರ್‌ ರಾಹುಲ ಕನ್ವಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು “ನೀವು ನಡ್ಡಾ ಫೋಟೊ ಹಾಕುವುದಾದರೆ ಕಾಂಗ್ರೆಸ್‌ ಚಿನ್ಹೆಯ ಪಕ್ಕ ಖರ್ಗೆಯವರ ಫೋಟೊ ಹಾಕಬೇಕು. ಅಥವಾ ರಾಹುಲ್‌ ಫೋಟೊ ಹಾಕುವುದಾದರೆ ಸೋತಾಗಲೂ ಮೋದಿಯವರ ಫೋಟೊವನ್ನೇ ಹಾಕಬೇಕು. ನಡ್ಡಾ ಅವರನ್ನು ಬಲಿಪಶು ಮಾಡಬಾರದು” ಎಂದು ಕಟುವಾಗಿ ಹೇಳಿದ್ದಾರೆ.

ಇದಕ್ಕೆ ರಾಹುಲ್‌ ಕನ್ವಲ್‌ ರಾಹುಲ್‌ ಗಾಂಧಿಯವರಿಗೂ ಕ್ರೆಡಿಟ್‌ ಸಿಗಲಿ ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಿದ್ದೇವೆ ಎಂದಿದ್ದಾರೆ ಆದರೆ ಕಾರ್ಯಕ್ರಮದಲ್ಲಿದ್ದ ಪ್ಯಾನಲಿಸ್ಟ್‌ಗಳೂ ಈ ಕುರಿತು ಆಕ್ಷೇಪ ಎತ್ತಿದಾಗ ರಾಹುಲ್‌ ಕನ್ವಲ್‌ ಸುಮ್ಮನಾಗಿದ್ದಾರೆ.

ಸದಾ ಮೋದಿಯವರ ಪಿಆರ್‌ ಮಾಡಲು ಹಾತೊರೆಯುವ ಈ ಸೋ ಕಾಲ್ಡ್‌ ನ್ಯಾಷನಲ್‌ ಲೆವಲ್‌ ಮೀಡಿಯಾಗಳು ಸುದ್ದಿಗಿಂತಲೂ ಹೆಚ್ಚು ಬಿಜೆಪಿ ಪರ ರಾಜಕಾರಣ ಮಾಡುವುದಕ್ಕೆ ಖ್ಯಾತರು. ಇದಕ್ಕೆ ಹಿಂದಿ, ಇಂಗ್ಲಿಷ್‌ ಕನ್ನಡ ಎನ್ನುವ ಭೇದವಿಲ್ಲ.

ಇತ್ತೀಚೆಗೆ ಒಂದರ ಹಿಂದೆ ಒಂದರಂತೆ ಬಿಜೆಪಿ ಚುನಾವಣೆಗಳನ್ನು ಸೋಲುತ್ತಿರುವುದು ಮೋದಿ ಪರವಾದ ನರೇಟಿವ್‌ ಕಟ್ಟುವವರಿಗೆ ಬಹಳ ಹಿನ್ನಡೆಯನ್ನು ತಂದಿದೆ. ಇಂದು ಮೋದಿ ಇಸ್ಮ್‌ ಎನ್ನುವುದು ಕೇವಲ ರಾಜಕೀಯ ಪ್ರೊಪಗಾಂಡಾ ಮಾತ್ರವಲ್ಲ. ಅದೊಂದು ಬ್ರಾಂಡ್‌ ಅದನ್ನು ನಂಬಿ ಬಹಳಷ್ಟು ಜನರು ಕೋಟಿಗಟ್ಟಲೆ ಹಣ ಹೂಡಿದ್ದಾರೆ. ಕುಸಿಯುತ್ತಿರುವ ಮೋದಿ ಬ್ರಾಂಡ್‌ ಇವರೆಲ್ಲರನ್ನೂ ಕಂಗಾಲು ಮಾಡಿದೆ. ಹೀಗಾಗಿಯೇ ಶತಾಯಗತಾಯ ಅದನ್ನು ಉಳಿಸಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಆದರೆ ಮತದಾರ ಮಾತ್ರ ಇವರ ಈ ಪ್ರಯತ್ನಗಳಿಗೆ ಕಲ್ಲು ಹಾಕುತ್ತಿದ್ದಾನೆ.

PPeepal Media

Peepal Media

Peepal Media · ಮೀಡಿಯಾ ವಿಭಾಗ

ಸಂಬಂಧಿತ ಸುದ್ದಿಗಳು