ಗೇ ಜೋಡಿಗಳನ್ನೂ ಆಶೀರ್ವದಿಸಿ: ಪಾದ್ರಿಗಳಿಗೆ ಪೋಪ್‌ ಫ್ರಾನ್ಸಿಸ್ ಕರೆ

“ನಾವು ಗೇ ಜೋಡಿಗಳನ್ನು ನಿರಾಕರಿಸುವ, ತಿರಸ್ಕರಿಸುವ ಮತ್ತು ಹೊರಗಿಡುವ ನ್ಯಾಯಾಧೀಶರಾಗಲು ಸಾಧ್ಯವಿಲ್ಲ,” ಎಂದು ಕ್ಯಾಥೋಲಿಕ್ ಚರ್ಚ್ ಸಮ ಲೈಂಗಿಕ ಜೋಡಿಗಳನ್ನು ಆಶೀರ್ವದಿಸಲು ಮುಕ್ತವಾಗಿರುತ್ತದೆ ಎಂದು ಪೋಪ್ ಫ್ರಾನ್ಸಿಸ್ ಸೂಚಿಸಿದ್ದಾರೆ.

ಆಶೀರ್ವಾದವನ್ನು ಪ್ಯಾಸ್ಟೋರಲ್‌ ಚಾರಿಟಿಯಂದೇ ಪರಿಗಣಿಸಬೇಕು ಎಂದು ಈ ವಿಷಯದ ಬಗ್ಗೆ ಸ್ಪಷ್ಟತೆ ಕೇಳಿದ ಕಾರ್ಡಿನಲ್‌ಗಳಿಗೆ ತಿಳಿಸಿದರು. ಆದರೆ ಚರ್ಚ್ ಇನ್ನೂ ಗೇ ಸಂಬಂಧಗಳನ್ನು “ಪಾಪ” ಎಂದೇ ಪರಿಗಣಿಸುತ್ತದೆ ಮತ್ತು ಗೇ ವಿವಾಹಗಳನ್ನು ಪರಿಗಣಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ಅವುಗಳನ್ನು ಕೇಸ್-ಬೈ-ಕೇಸ್ ಆಧಾರದ ಮೇಲೆ ನಿರ್ಧರಿಸಬೇಕು ಮತ್ತು ಭಿನ್ನ ಲಿಂಗಗಳ ನಡುವಿನ ವಿವಾಹ ಸಮಾರಂಭಗಳಿಗೆ ಸಮಾನವಾಗಿ ನೋಡಬಾರದು ಎಂದು ಫ್ರಾನ್ಸಿಸ್ ಎಚ್ಚರಿಕೆ ನೀಡಿದ್ದಾರೆ.

2021 ರಲ್ಲಿ ವ್ಯಾಟಿಕನ್ ಗೇ ಸಂಬಂಧಗಳನ್ನು ಕ್ಷಮಿಸಲು ಸಾಧ್ಯವಿಲ್ಲ, “ದೇವರು ಪಾಪಿಗಳನ್ನು ಆಶೀರ್ವದಿಸುವುದಿಲ್ಲ,” ಎಂದು ಹೇಳಿಕೆ ನೀಡಿತ್ತು.  ಆದರೆ ಸೋಮವಾರ, ಈ ನಿಲುವಿನಲ್ಲಿ ಅಪವಾದಗಳಿರಬಹುದು ಎಂದು ಫ್ರಾನ್ಸಿಸ್ ಸೂಚಿಸಿದ್ದಾರೆ. “ನಾವು ನಿರಾಕರಿಸುವ, ತಿರಸ್ಕರಿಸುವ ಮತ್ತು ಅವರನ್ನು ಹೊರಗಿಡುವ ನ್ಯಾಯಾಧೀಶರಾಗಲು ಸಾಧ್ಯವಿಲ್ಲ” ಎಂದು ಪೋಪ್ ಐದು ಸಂಪ್ರದಾಯವಾದಿ ಕಾರ್ಡಿನಲ್‌ಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಏಷ್ಯಾ, ಯುರೋಪ್, ಆಫ್ರಿಕಾ, ಅಮೇರಿಕಾ ಮತ್ತು ಲ್ಯಾಟಿನ್ ಅಮೆರಿಕದ ಐದು ಸಂಪ್ರದಾಯವಾದಿ ಕಾರ್ಡಿನಲ್‌ಗಳು ವ್ಯಕ್ತಪಡಿಸಿರುವ “ದುಬಿಯಾ” (ಸಂಶಯಗಳು – ಪ್ರಶ್ನೆಗಳು) ಗಳಿಗೆ ಪೋಪ್ ಪ್ರತಿಕ್ರಿಯಿಸಿದ್ದಾರೆ.

ನೈಸರ್ಗಿಕವಾದ ಲೈಂಗಿಕಾಸಕ್ತಿಯನ್ನು ಧರ್ಮದ ಆಧಾರದದಲ್ಲಿ ಹತ್ತಿಕ್ಕುವ, LGBTQ+ ಲೈಂಗಿಕ ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಂಡಿರುವ ಈ ಸಂದರ್ಭದಲ್ಲಿ ಪೋಪ್‌ನ ಈ ನಡೆಯನ್ನು ಗೇ, ಲೆಸ್ಬಿಯನ್‌ಗಳು ಒಂದು ಸುಧಾರಣೆಯೆಂಬಂತೆ ನೋಡುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು