Thursday, June 20, 2024

ಸತ್ಯ | ನ್ಯಾಯ |ಧರ್ಮ

ಒಡಿಯಾ ಚಿತ್ರರಂಗದ ಜನಪ್ರಿಯ ನಟಿ ಝರನಾ ದಾಸ್‌ ನಿಧನ

ಒಡಿಶಾ: ಒಡಿಯಾ ಚಿತ್ರರಂಗದ ಜನಪ್ರಿಯ ನಟಿ ಝರನಾ ದಾಸ್‌(82)  ತನ್ನ ವಯೋಸಹಜ ಕಾಯಿಲೆಯಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ .

1960ರ ಜನಪ್ರಿಯ ನಟಿಯಾಗಿದ್ದ ಝರನಾ ದಾಸ್‌ ಶ್ರೀ ಜಗನ್ನಾಥ, ನಾರಿ, ಆದಿನಮೇಘಾ, ಅಭಿನೇತ್ರಿ, ಅಮಡಾ ಬಾಟಾ, ಮಲಜಹ್ನಾ, ಮಾರಿ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಅತ್ಯಂತ ಹೆಸರುವಾಸಿಯಾಗಿದ್ದಾರೆ.

ಕತಕ್‌ ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುವುದಲ್ಲದೆ, ಬಾಲನಟಿಯಾಗಿ, ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ದಾಸ್‌ ಅವರು ಅತ್ಯಂತ ಜನಪ್ರಿಯವಾಗಿದ್ದರು. ಅಷ್ಟಲ್ಲದೇ ಮಾಜಿ ಮುಖ್ಯಮಂತ್ರಿ ಹರೇಕೃಷ್ಣ ಮಹ್ತಾಬ್‌ ಜೀವನಾಧಾರಿತ ಸಾಕ್ಷ್ಯಚಿತ್ರವನ್ನು ಸಹ ದಾಸ್‌ ಅವರು ನಿರ್ದೇಶಿಸಿದ್ದು ಖ್ಯಾತಿ ಗಳಿಸಿದ್ದರು.

ಝರನಾ ದಾಸ್‌ ಅವರು ಹಲವಾರು ನಾಟಕಗಳು, ಟಿವಿ ಸರಣಿಗಳು ಮತ್ತು ಧಾರವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಗುರು ಕೇಲುಚರಣ್‌ ಮೊಹಪಾತ್ರ ಅವರ ಅಡಿಯಲ್ಲಿ ಒಡಿಸ್ಸಿ ನೃತ್ಯವನ್ನು ಕಲಿತು, 2016 ರಲ್ಲಿ ʼಗುರು ಕೇಲುಚರಣ್‌ ಮೋಹಪಾತ್ರ ಪ್ರಶಸ್ತಿʼ ಯನ್ನು ಪಡೆದಿದ್ದರು.

ರಾಜ್ಯ ಸರ್ಕಾರ ದಾಸ್‌ ಅವರ ಸಿನಿಮಾ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರತಿಷ್ಟಿತ ಪ್ರಶಸ್ತಿ ಜಯದೇವ್‌ ಪುರಸ್ಕಾರ ಪಡೆದಿದ್ದರು.

Related Articles

ಇತ್ತೀಚಿನ ಸುದ್ದಿಗಳು