Saturday, July 26, 2025

ಸತ್ಯ | ನ್ಯಾಯ |ಧರ್ಮ

ಬೆಂಗಳೂರಿನ ವಿವಿಧೆಡೆ ಇಂದು ವಿದ್ಯುತ್‌ ಕಡಿತ: ಬೆಸ್ಕಾಂ

ಬೆಂಗಳೂರು : ಬೆಂಗಳೂರು ವಿದ್ಯುತ್‌ ಸರಬರಾಜು ನಿಗಮವು (ಬೆಸ್ಕಾಂ) ನಿರ್ವಹಣೆ ಕಾರ್ಯ ಕೈಗೊಂಡಿರುವ ಹಿನ್ನಲೆ ನಗರದ ವಿವಿಧೆಡೆ ಸೆಪ್ಟಂಬರ್‌ 18ರಂದು ಬೆಳಗ್ಗೆ 10.30 ರಿಂದ 3.30ರವರೆಗೆ  ವಿದ್ಯುತ್‌ ಕಡಿತವಾಗಲಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ಈ ಹಿನ್ನಲೆ, ಅನ್ನಪೂರ್ಣೇಶ್ವರಿ ನಗರ, ಕಪಿಲಾ ನಗರ, ಶಾಂಭವಿ ನಗರ, ಪೀಣ್ಯಾ ಎರಡನೇ ಹಂತ, ದೊಡ್ಡಣ್ಣ ಇಂಡಸ್ಟ್ರಿಯಲ್‌ ಎಸ್ಟೇಟ್‌, ಹೆಗ್ಗನಹಳ್ಳಿ ಮುಖ್ಯರಸ್ತೆ, ಅಂದ್ರಹಳ್ಳಿ ಮುಖ್ಯರಸ್ತೆ, ಗೌರಿ ಶಂಕರ ರಸ್ತೆ, ಬೃಂದಾವನ ಮುಖ್ಯ ರಸ್ತೆ, ರಾಮಯ್ಯ ಕಾಲೇಜು ರಸ್ತೆಯ, ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಜಿಗಣಿ ಮಾದಪ್ಪಣ್ಣ, ಬುಕ್ಕಸಾಗರ, ಹಾರಗದ್ದೆ, ಅತ್ತಿಬೆಲೆ ಹಾಗೂ ಅತ್ತಿಬೆಲೆ ಕೈಗಾರಿಕಾ ಪ್ರದೇಶ ಸೇರಿದಂತೆ, ಮಾಯಸಂದ್ರ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯತ್‌ ಕಡಿತವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page