Thursday, December 12, 2024

ಸತ್ಯ | ನ್ಯಾಯ |ಧರ್ಮ

ಇಂದು ಮತ್ತೆ ನಾಳೆ ಬೆಂಗಳೂರಿನ ಹಲವೆಡೆ ವಿದ್ಯುತ್‌ ವ್ಯತ್ಯಯ

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಕೋರಮಂಗಲ ವಿಭಾಗದ ದೇವರಬೀಸನಹಳ್ಳಿ ಮತ್ತು ಆಡುಗೋಡಿ ಉಪಕೇಂದ್ರ ದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ 12.12.2024ರ ಇಂದು ಮತ್ತು 13.12.2024ರ ನಾಳೆ ಬೆಳಗ್ಗೆ 10:00 ರಿಂದ ಮಧ್ಯಾಹ್ನ 03:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಇಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

“ಬೆಳ್ಳಂದೂರು, ಆರ್ ಎಮ್ ಜೆಡ್, ಎಕ್ಸೊಸ್ಪೇಸ್ ಎಕೋವರ್ಲ್ಡ, ದೇವರಬೀಸನಹಳ್ಳಿ, ಕರಿಯಮ್ಮನ ಅಗ್ರಹಾರ, ಸಕ್ರ ಆಸ್ಪತ್ರೆ, ಪಾಸ್ ಪೋರ್ಟ್ ಆಫೀಸ್, ಶೋಭ ಅಪಾರ್ಟಮೆಂಟ್, ಹೊರ ವರ್ತುಲ ರಸ್ತೆ, 5ನೇ ಇಂಡಸ್ಟ್ರಿಯಲ್ ಲೇಔಟ್, ಕೋರಮಂಗಲ, ಮಡಿವಾಳ ವೆಂಕಟೇಶ್ವರ ಬಡಾವಣೆ, ಚಿಕ್ಕ ಆಡುಗೋಡಿ, ಜೋಗಿ ಕಾಲೋನಿ, ಈಸ್ಟ್ ಲ್ಯಾಂಡ್ ಹೊಲ್ಡಿಂಗ್ ಬಿಲ್ಡಿಂಗ್, ಸೈಂಟ್ ಜಾನ್ ಸ್ಟಾಫ್ ಕ್ವಾಟ್ರಸ್, ಮಾರುತಿನಗರ, ಆಡುಗೋಡಿ 7ನೇ ಮತ್ತು 8ನೇ ಬ್ಲಾಕ್, ಸಿ.ಎ.ಆರ್. ಪೊಲೀಸ್ ಕ್ವಾಟ್ರಸ್, ಆಡುಗೊಡಿ ಮುಖ್ಯ ರಸ್ತೆ, ಸೈಂಟ್ ಜಾನ್ ಆಸ್ಪತ್ರೆ, ಮಡಿವಾಳ, ಮಾರುತಿ ನಗರ, ಡಾಲರ್ಸ್ ಕಾಲೋನಿ, 100 ಫೀಟ್ ರಿಂಗ್ ರಸ್ತೆ, ಆರ್ಯಾಕಲ್ ಕಂಪನಿ, ಬಿ.ಜಿ.ರಸ್ತೆ, ಕೆ.ಹೆಚ್.ಬಿ. ಕಾಲೋನಿ, 5ನೇ ಬ್ಲಾಕ್ ಇಂಡಸ್ಟ್ರಿಯಲ್ ಏರಿಯಾ ಕೋರಮಂಗಲ, ಮೈಕೋ 3ನೇ 4ನೇ 5ನೇ ಮತ್ತು 6ನೇ ಬ್ಲಾಕ್ ಕೋರಮಂಗಲ, ಭುವನಪ್ಪ ಕಾವೇರಿ ಬಡಾವಣೆ, ಕೃಷ್ಣಾ ನಗರ ಇಂಡಸ್ಟ್ರಿಯಲ್ ಲೇಔಟ್, ಎಸ್.ಜಿ.ಪಾಳ್ಯ, 2ನೇ ಬ್ಲಾಕ್ ಧವನ್ ಜ್ಯೂಯಲರಿ, ಮಡಿವಾಳ ಸಂತೆ, ಸಿದ್ದಾರ್ಥ ಕಾಲೋನಿ, ಹ್ಯಾಪಿ ಮೈಂಡ್ ಕಂಪನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ.

ದಿನಾಂಕ 13-12-2024ರ ನಾಳೆ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಇದಲ್ಲದೇ ಬೆಂಗಳೂರು ಉತ್ತರ ವೃತ್ತ ಅಟ್ಟೂರು ಯಲಹಂಕ ಎಂಯುಎಸ್ ಎಸ್ ದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ 13.12.2024 (ಶುಕ್ರವಾರ) ರಂದು ಬೆಳಗ್ಗೆ 11:00 ರಿಂದ ಮಧ್ಯಾಹ್ನ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

“ಕೋರಮಂಗಲ ವಿಭಾಗದಲ್ಲಿ ಮತ್ತು ಕೆ.ಎಂ.ಎಫ್, ಮದರ್ ಡೈರಿ, ಎಸ್.ಎಫ್.ಎಸ್ 208, ಎಸ್.ಎಫ್.ಎಸ್ 407 ಉನ್ನಿಕೃಷ್ಣನ್ ರಸ್ತೆ, ಬಿ ಸೆಕ್ಟರ್, ಎನ್.ಇ.ಎಸ್ ರಸ್ತೆ, ಸಿ.ಎಂ ಎನ್ಕ್ಲೇವ್, ಮಾತೃ ಲೇಔಟ್, ಸೋಮೇಶ್ವರನಗರ, ಕನಕನಗರ, ನ್ಯಾಯಾಂಗ ಬಡಾವಣೆ, ಯಲಹಂಕ ಓಲ್ಡ್ ಟೌನ್, ಗಾಂಧಿ ನಗರ, ಹಳೆಯ ಪಟ್ಟಣ ಬಿಬಿಎಮಪಿ ರಸ್ತೆ, ಕರೆ, ಬಿಬಿಎಂಪಿ ರಸ್ತೆ ಕೋಡಿ ರೋಡ್, ಪುರವಂಕರ, ಅಪಾರ್ಟ್ ಮೆಂಟ್ ಆರ್.ಎಂ.ಝೆಡ್ ಮಾಲ್, ಆರ್.ಎಂ.ಝಡ್ ರೆಸಿಡೆನ್ಸಿಯಲ್ ಅಟ್ಟೂರು ಯಲಹಂಕ ಎಂಯುಎಸ್ ಎಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಅಡಚಣೆ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page