Monday, January 12, 2026

ಸತ್ಯ | ನ್ಯಾಯ |ಧರ್ಮ

ಪ್ರಜ್ವಲ್‌ ವಿಡಿಯೋ ಕೊಟ್ಟಿದ್ದು ನಾನೇ: ಮಾಜಿ ಚಾಲಕ ಕಾರ್ತಿಕ್

ಹಾಸನ: ಪ್ರಜ್ವಲ್​​‌ ಅಶ್ಲೀಲ ವಿಡಿಯೋ ನಾನೇ ಕೊಟ್ಟಿದ್ದು ನಾನೇ ಎಂದು ಪ್ರಜ್ವಲ್‌ ಮಾಜಿ ಚಾಲಕ ಕಾರ್ತಿಕ್‌ ಬಹಿರಂಗ ಪಡಿಸಿದ್ದಾರೆ.

“ನಾನು ಅವರ ಬಳಿಕ ಕೆಲಸ ಮಾಡುತ್ತಿದ್ದೆ, ಅವರಿಂದ ನನಗೆ ಅನ್ಯಾಯವಾದ ಸಲುವಾಗಿ ನಾನು ಅಲ್ಲಿ ಕೆಲಸ ಬಿಟ್ಟೆ ಅಂತ ಹೇಳಿದೆ. ಇನ್ನೂ ನನ್ನ ವಿರುದ್ದ ನ್ಯಾಯಾಲಯದಿಂದ ಮಾನ ಹಾನಿ ಪ್ರಕರಣವನ್ನು ಪ್ರಕಟ ಮಾಡದಂತೆ ಪ್ರಜ್ವಲ್‌ ಆದೇಶವನ್ನು ತಂದರು,” ಎಂದು ಕಾರ್ತಿಕ್‌ ವಿಡಿಯೋದಲ್ಲಿ ಹೇಳಿದ್ದಾರೆ.

“ಇನ್ನೂ ನನ್ನ ಬಳಿ ಇರುವ ವಿಡಿಯೋ, ಪೋಟೋಗಳನ್ನು ಕೊಡುವಂತೆ ದೇವರಾಜೇಗೌಡರು ಕೇಳಿದರು. ಇದಲ್ಲದೇ ಇದು ನಾನು ಕೋರ್ಟ್‌ಗೆ ನೀಡುವುದಾಗಿ ಹೇಳಿದರು. ಕೆಲ ದಿನಗಳ ನಂತರ ಈ ಬಗ್ಗೆ ಕೇಳಿದಾಗ ʼಮುಂದೆ ಈ ಬಗ್ಗೆ ನಿರ್ಧಾರ ಮಾಡುವುದಾಗಿ ಹೇಳಿದರುʼ ಅಂತ ಹೇಳಿದರು. ಇನ್ನೂ ನಾನು ದೇವರಾಜೇಗೌಡರಿಗೆ ಬಿಟ್ಟರೆ ಬೇರೆ ಯಾರಿಗೂ ಕೂಡ ವಿಡಿಯೋವನ್ನು ನೀಡಿಲ್ಲ. ಇದು ಹೇಗೆ ಬೇರೆಯವರಿಗೆ ಹೋಗಿದೆ ಎಂಬುದು ತಿಳಿದಿಲ್ಲ. ನಾನು ಈಕೂಡಲೇ ಎಸ್‌ಐಟಿ ತನಿಖೆ ಮುಂದೆ ಹಾಜರಾಗಿ ನನಗೆ ತಿಳಿದಿರುವ ಬಗ್ಗೆ ಮಾಹಿತಿಯನ್ನು ನೀಡುವತ್ತೇನೆ,” ಎಂದು ಹೇಳಿದ್ದಾರೆ.

ಪ್ರಜ್ವಲ್‌ ವಿಡಿಯೋ ಬಹಿರಂಗದ ಹಿಂದೆ ಕಾಂಗ್ರೇಸ್‌ ಪಕ್ಷದ ಕೈವಾಡವಿಲ್ಲ ಎಂದು ಕಾರ್ತಿಕ್‌ ಸ್ಪಷ್ಟಪಡಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ಇಬ್ಬರೂ ಹೊಳೆನರಸೀಪುರ ಠಾಣೆ ಪೊಲೀಸರ ಮೂಲಕ ಬಲವಂತವಾಗಿ ಕರೆದೊಯ್ದು, ಚಿತ್ರಹಿಂಸೆ ನೀಡಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಕಾರ್ತಿಕ್‌ ಆರೋಪ ಮಾಡಿದ್ದರು. ಹೊಳೆನರಸೀಪುರ ತಾಲ್ಲೂಕಿನಲ್ಲಿ ಇರುವ 13 ಎಕರೆ ಭೂಮಿಗಾಗಿ ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು.

ಹತ್ತು ವರ್ಷಗಳಿಗೂ ಹೆಚ್ಚು ಕಾಲ ಪ್ರಜ್ವಲ್ ರೇವಣ್ಣನ ಕಾರು ಚಾಲಕನಾಗಿದ್ದ ಕಾರ್ತಿಕ್, ಇದೀಗ ಪ್ರಜ್ವಲ್ ರೇವಣ್ಣ, ರೇವಣ್ಣ ಪತ್ನಿ ಭವಾನಿ ವಿರುದ್ಧ ದೂರು ನೀಡಿದ್ದಾರೆ. 2023ರ ಮಾರ್ಚ್ 12ರಂದು ತನ್ನನ್ನು ಕಿಡ್ನಾಪ್ ಮಾಡಿದ್ದರು ಎಂದು ಆರೋಪ ಮಾಡಿದ್ದಾರೆ.

ಕಾರ್ತಿಕ್ ಮತ್ತು ಅವರ ಪತ್ನಿ ಶಿಲ್ಪ ಅವರ ಮೇಲೆ 2023ರ ಮಾರ್ಚ್‌ನಲ್ಲಿ ಭವಾನಿ ರೇವಣ್ಣ ಹಲ್ಲೆ ನಡೆಸಿದ್ದು, ಇದರಿಂದಾಗಿ ಶಿಲ್ಪ ಅವರಿಗೆ ಗರ್ಭಪಾತವಾಗಿದೆ ಎಂದು ಆರೋಪಿಸಿ ಹಾಸನದಲ್ಲಿ ಮಾಜಿ ಶಾಸಕ ಎಟಿ ರಾಮಸ್ವಾಮಿ ಮತ್ತು ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಈ ಕುರಿತು ಕಾರ್ತಿಕ್‌ ಅವರು ಭವಾನಿ ರೇವಣ್ಣ ವಿರುದ್ಧ ಕೇಸು ನೀಡಿದ್ದರೂ ಪೊಲೀಸರು ಪ್ರಕರಣ ದಾಖಲಿಸಿರಲಿಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page