Saturday, April 19, 2025

ಸತ್ಯ | ನ್ಯಾಯ |ಧರ್ಮ

ಪ್ರಾಣಹೋದರೂ ಭೂಮಿ ಬಿಡುವುದಿಲ್ಲ: ಕೆಐಎಡಿಬಿ ವಿರುದ್ಧ ರೈತರ ಪ್ರತಿಭಟನೆ

ದಾವಣಗೆರೆ: ಜಿಲ್ಲೆಯ ಹೊರವಲಯ ಗ್ರಾಮಗಳಾದ ಮೆಳ್ಳೆಕಟ್ಟೆ, ಅಣಜಿ ಮತ್ತು ಲಿಂಗಾಪುರ ಗ್ರಾಮದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿರುವ ಕರ್ನಾಟಕ ಕೈಗಾರಿಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿರುದ್ಧ ರೈತರು ಪ್ರತಿಭಟನೆ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಗ್ರಾಮೀಣ ಪ್ರದೇಶಗಳಾದ ಅಣಜಿ, ಮೆಳ್ಳಕಟ್ಟಿ, ಲಿಂಗಾಪುರ ದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ 1,156 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದು, ಕೆಐಎಡಿಬಿಯ ವಿಶೇಷ ಭೂ ಸ್ವಾಧೀನಾಧಿಕಾರಿಗಳು 258 ಜನ ರೈತರಿಗೆ ನೋಟಿಸ್‌ ನೀಡಿದ್ದಾರೆ. ಇದರಿಂದ  ಆಕ್ರೋಶಗೊಂಡ ಜನ  ಪ್ರಾಣಹೋದರೂ ಭೂಮಿ ಬಿಡುವುದಿಲ್ಲ ಎಂದು, ನಗರದ ಗಾಂಧಿ ವೃತ್ತದ ಬಳಿ ಪ್ರತಿಭಟನೆ ಮಾಡುವ ಮೂಲಕ ಕೈಗಾರಿಕ ಅಭಿವೃದ್ಧಿ ಮಂಡಳಿ ( ಕೆಐಎಡಿಬಿ ) ಗೆ  ಎಚ್ಚರಿಕೆ ನೀಡಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮೆಳ್ಳೆಕಟ್ಟೆಯ  ರೈತ ಎಂ.ಎಸ್. ನಾಗರಾಜ್, ಈ ಪ್ರದೇಶದಲ್ಲಿರು ಭೂಮಿಗಳು ಫಲವತ್ತಾಗಿದ್ದು, ಇಲ್ಲಿ ಅನೇಕ ಬೆಳೆಗಳನ್ನ ಬೆಳೆಯಲಾಗುತ್ತದೆ, ಈ ಭಾಗದ ಜಮೀನು ನಾಲ್ಕು ಕೆರೆಗಳ ವ್ಯಾಪ್ತಿಗೆ ಬರುತ್ತದೆ. ನಮ್ಮದು ‘ಎ’ ಗ್ರೇಡ್‍ನ ಎರೆಭೂಮಿ ಮತ್ತು ಫಲವತ್ತಾದ ಭೂಮಿ, ರೈತರು ಇಲ್ಲಿ ಮಳೆ ಇಲ್ಲದಿದ್ದರು 2 ಬೆಳೆಗಳನ್ನ ತೆಗೆಯುತ್ತಾರೆ, ಹಾಗೂ  ಈ ಪ್ರದೇಶಗಳಲ್ಲಿನ ರೈತರು ಭೂಮಿಯನ್ನೆ ನಂಬಿ ಜೀವಿಸುತ್ತಿದ್ದಾರೆ. ಇಂತಹ ಜಮೀನುಗಳಲ್ಲಿ ಸರ್ಕಾರ ಕೈಗಾರಿಕಾ ಕಾರಿಡಾರ್ ಮಾಡಲು ಮುಂದಾಗಿರುವುದು ಯಾವ ನ್ಯಾಯ ಸ್ವಾಮಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎಪಿಎಂಸಿ ಅಧ್ಯಕ್ಷ ಅಣಜಿ ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್. ಬಸವಂತಪ್ಪ, ಮುಖಂಡರಾದ ಹನುಮಂತಪ್ಪ, ವೀರಭದ್ರಪ್ಪ, ಮಲ್ಲಿಕಾರ್ಜುನ, ಸಿ.ಟಿ. ಕುಮಾರ್, ರಾಜಶೇಖರ್, ಲಿಂಗರಾಜ್, ಶೋಭಾ, ಪವಿತ್ರ, ನವೀನ ಮತ್ತಿತರರು ಇದ್ದು, ಆದೇಶ ಹಿಂಪಡೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page