Monday, June 17, 2024

ಸತ್ಯ | ನ್ಯಾಯ |ಧರ್ಮ

ಕನ್ನಡ ವಿಷಯದಲ್ಲಿ NTA ಸಿಬ್ಬಂದಿಯ ಎಡವಟ್ಟು : ಮರುಪರೀಕ್ಷೆಗೆ ಯುಜಿಸಿ ನಿರ್ಧಾರ

ಬೆಂಗಳೂರು : ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯ ನೇಮಕಾತಿ ಸಂಬಂಧಿಸಿದಂತೆ ಕನ್ನಡ ವಿಷಯ ಪರೀಕ್ಷೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ದೇವನಹಳ್ಳಿಯ ಪರೀಕ್ಷಾ ಕೇಂದ್ರದ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಬಳ್ಳಾಪುರ ಘಟಕ ಪ್ರತಿಭಟನೆ ನಡೆಸಿದ ಪರಿಣಾಮವಾಗಿ ಯುಜಿಸಿ ಮರುಪರೀಕ್ಷೆ ನಡೆಸಲು ಒಪ್ಪಿಕೊಂಡು ಆದೇಶ ನೀಡಿತು.

ಈ ಹಿನ್ನಲೆ ದೇವನಹಳ್ಳಿಯ ಬೀಡಗಾನಹಳ್ಳಿಯಲ್ಲಿರುವ ʼನಾಗಾರ್ಜುನ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ(NCET) ಕಾಲೇಜಿʼನಲ್ಲಿ ಇಂದು ನಡೆಯುತ್ತಿದ್ದ ಯುಜಿಸಿ ಎನ್‌ಇಟಿ ಕನ್ನಡ ವಿಷಯ ಪತ್ರಿಕೆ ಪರೀಕ್ಷಾ ಕೇಂದ್ರಗಳನ್ನೇ ಬೆಂಗಳೂರಿಗೆ ಬದಲಾಯಿಸಿ ಹಾಜರಿದ್ದ 50% ವಿದ್ಯಾರ್ಥಿಗಳಿಗೆ ಗೊಂದಲ ಸೃಷ್ಟಿ ಮಾಡಿದ್ದಾರೆ. ʼಒಂಬತ್ತು ಗಂಟೆಗೆ ಪರೀಕ್ಷಾ ಸಮಯವಾದರೂ ಕೊನೆಗಳಿಗೆಯಲ್ಲಿ ಸಿಬ್ಬಂದಿಗಳು ನಮಗೆ ಮುಂಜಾನೆ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರಗಳನ್ನು  ಬದಲಿಸಲಾಗಿದೆ ಎಂದು ಮಾಹಿತಿ ಬಂದಿದ್ದರಿಂದ ಈ ರೀತಿಯಾಗಿದೆ. ನಿಮ್ಮ ಪರೀಕ್ಷಾ ಕೇಂದ್ರ ಬೆಂಗಳೂರಿನಲ್ಲಿದೆ. ನಿಮಗೆ ನಿಮ್ಮ ಪರೀಕ್ಷಾ ಕೆಂದ್ರಗಳಿಗೆ ಹೋಗಲು ಬಸ್‌ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನು ನಿರಾಕರಿಸಿದ ವಿದ್ಯಾರ್ಥಿಗಳು ನಮಗೆ ಬೇರೆ ದಿನ ಪರೀಕ್ಷೆ ಏರ್ಪಡಿಸಬೇಕು. ಸಿಬ್ಬಂದಿ ಮಾಡಿರುವ ಎಡವಟ್ಟುಗಳಿಗೆ ನಮ್ಮ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ . ನಾವು ಈ ದಿನ ಪರೀಕ್ಷೆ ಬರೆಯುವುದಿಲ್ಲʼ ಎಂದು ಬೆಂಗಳೂರಿನ ಓರ್ವ ವಿದ್ಯಾರ್ಥಿ ಪೀಪಲ್‌ ಮೀಡಿಯಾದೊಂದಿಗೆ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ.

ಇದೇ ರೀತಿ ಹಿಂದಿನ ವರ್ಷ ನಡೆದ ಯುಜಿಸಿ ಎನ್‌ಇಟಿ ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆಪತ್ರಿಕೆ ಬದಲು ಹಿಂದಿ ಪ್ರಶ್ನೆ ಪತ್ರಿಕೆ ಕೊಟ್ಟು ಗೊಂದಲಗಳಲ್ಲಿ ಪರೀಕ್ಷೆ ಬರೆದ ಅನೇಕ ಜನರನ್ನು ಫೇಲ್‌ ಮಾಡಿದ್ದಾರೆ. ಈ ಬಾರಿ ನಡೆಯುತ್ತಿರುವ ಕನ್ನಡ ಪ್ರಶ್ನೆ ಪತ್ರಿಕೆ ಇರುವ ದಿನವೇ ಈ ರೀತಿಯ ಸಮಸ್ಯೆಗಳನ್ನು ಸೃಷ್ಟಿ ಮಾಡಿರುವುದು ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಿದಂತಾಗಿದೆ ಎಂದು ಅಲ್ಲಿನ ಕೆಲ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿಕೊಂಡಿದ್ದಾರೆ.

ತಮ್ಮ ಬೇಜವಬ್ದಾರಿತನದಿಂದ 9.15 ಸಮಯಕ್ಕೆ ಪರೀಕ್ಷಾ ಸ್ಥಳಕ್ಕೆ ಆಗಮಿಸಿದ ಎನ್‌ಟಿಎ ಅಧಿಕಾರಿಯೊಬ್ಬರು ವಿದ್ಯಾರ್ಥಿಗಳಿಗೆ ʼನೀವು ಪರೀಕ್ಷೆ ಬರೆಯುವ ಸಾಫ್ಟ್‌ ವೇರ್‌ ಇಲ್ಲಿಗೆ ತರೆಸಿ ಪರೀಕ್ಷೆ ಬರೆಯುವಂತೆ ಅವಕಾಶ ಮಾಡಿಕೊಡುತ್ತೇವೆ ಇಲ್ಲಿಯೇ ಪರೀಕ್ಷೆ ಬರಯಬಹುದು ಎಂದು ಸಲಹೆ ನೀಡಿದ್ದರು. ಅದರೂ ಸುಮಾರು 30 ಮಂದಿ ವಿದ್ಯಾರ್ಥಿಗಳು ಮರು ಪರೀಕ್ಷೆ ಬೇರೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟಿಸಿದ್ದಾರೆ.

ಈ ಹಿನ್ನಲೆ ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಬಳ್ಳಾಪುರ ಘಟಕ ದೇವನಹಳ್ಳಿಯ ಪರೀಕ್ಷಾ ಕೇಂದ್ರದ ಬಳಿ ಪ್ರತಿಭಟನೆ ನಡೆಸಿದ ಪರಿಣಾಮವಾಗಿ ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದು ಪರೀಕ್ಷೆಯನ್ನು ಮುಂದೂಡಿದ್ದಾರೆ. NTA ವಿದ್ಯಾರ್ಥಿಗಳಿಗೆ ಲೆಟರ್‌ನಲ್ಲಿ ಪರೀಕ್ಷೆಯ ಮುಂದೂಡಿಕೆಯ ಬಗ್ಗೆ ಬರೆದು ಸಹಿ ಹಾಕುವ ಮುಖಾಂತರ ಗೊಂದಲಕ್ಕೊಳಗಾದ ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.

“ಈ ಮೂಲಕ ಸ್ಪರ್ಧಾರ್ಥಿಗಳಿಗೆ ತಿಳಿಸುವುದೇನೆಂದರೆ ದಿನಾಂಕ : 01/10/2022 ಕನ್ನಡ ವಿಷಯ ಪತ್ರಿಕೆ ಪರೀಕ್ಷೆಗೆ ತೊಂದರೆಯಾದ ವಿದ್ಯಾರ್ಥಿಗಳಿಗೆ UGC NET ಪರೀಕ್ಡೆಯನ್ನು ಪುನಃ ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂದು NTA ತಿಳಿಸಿದೆ. ಸ್ಪರ್ಧಾರ್ಥಿಗಳಿಗೆ ಮುಂದಿನ ದಿನದಲ್ಲಿ ಪರೀಕ್ಷೆಯ ದಿನಾಂಕ ತಿಳಿಸಲಾಗುವುದು” ಎಂದು ಲೆಟರ್‌ ನಲ್ಲಿ ಬರೆದಿದ್ದು ಮಾಡಿದ ಎಡವಟ್ಟನ್ನು ಸರಿಪಡಿಸಿಕೊಂಡಿದ್ದಾರೆ.

🔸ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ಯಶ್‌ ಹಾಲಿವುಡ್ ಗೆ!?

https://www.instagram.com/reel/CjIk3DkgpKX/?=MDJmNzVkMjY=

Related Articles

ಇತ್ತೀಚಿನ ಸುದ್ದಿಗಳು