Saturday, June 15, 2024

ಸತ್ಯ | ನ್ಯಾಯ |ಧರ್ಮ

ಪ್ರವೀಣ್‌ ನೆಟ್ಟಾರು ಹತ್ಯೆ ಮಾಡಿದ್ದು ಸ್ಥಳೀಯರು, ಕೇರಳಿಗರಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಇತ್ತೀಚೆಗೆ ಕೊಲೆಯಾಗಿದ್ದ ಪ್ರವೀಣ್‌ ನೆಟ್ಟಾರು ಹತ್ಯೆ ಕುರಿತಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಪ್ರವೀಣ್‌ ನೆಟ್ಟಾರು ಹತ್ಯೆ ಮಾಡಿದ್ದು ಸ್ಥಳೀಯರೇ ಹೊರತು ಕೇರಳಿಗರಲ್ಲ ಎನ್ನುವುದನ್ನು ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಪ್ರಸ್ತುತ ಸಂದರ್ಶನದಲ್ಲಿ ಅವರು, ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಕೊಲೆಯಾದ ಪ್ರವೀಣ್‌ ನೆಟ್ಟಾರು ಕೊಲೆಯನ್ನು  ಕೇರಳದವರು ಮಾಡಿದ್ದಾರೆ ಎನ್ನಲಾಗಿತ್ತು. ಆದರೆ, ಹಂತಕರು ಸ್ಥಳೀಯರೇ ಹೊರತು ಕೇರಳದವರು ಅಲ್ಲ ಎಂಬುದಾಗಿ ಹೇಳಿದ್ದಾರೆ.

ಪ್ರವೀಣ್‌ ಕೊಲೆಯಾದ ಬಳಿಕ ಹಿಂದೂ ಸಂಘಟನೆಯ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದಿದ್ದರು.  ಅನೇಕ ಕಾರ್ಯಕರ್ತರು ಬಿಜೆಪಿ ಸ್ಥಳೀಯ ಸಂಘಟನೆಗಳಿಗೆ ರಾಜೀನಾಮೆ ಕೂಡಾ ನೀಡಿದ್ದರು. ಈ ಹೊತ್ತಲ್ಲೇ ಇಂದು ಸ್ಪೋಟಕ ಮಾಹಿತಿಯನ್ನು ಗೃಹ ಸಚಿವರು ಬಿಚ್ಚಿಟ್ಟಿದ್ದಾರೆ.    

Related Articles

ಇತ್ತೀಚಿನ ಸುದ್ದಿಗಳು