Friday, June 28, 2024

ಸತ್ಯ | ನ್ಯಾಯ |ಧರ್ಮ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ತನ್ನ ರಾಜಕೀಯಕ್ಕೆ ಬಳಸಿಕೊಂಡಿತೇ ಬಿಜೆಪಿ?

ಪ್ರತೀ ಬಾರಿಯೂ ದೇಶ ಅಥವಾ ರಾಜ್ಯದಲ್ಲಿ ಕೊಲೆ, ಸುಲಿಗೆ, ಬಾಂಬ್ ಸ್ಫೋಟ, ಕೋಮು ಗಲಭೆಯಂತಹ ಅಹಿತಕರ ಘಟನೆ ನಡೆದಾಗ ಒಂದೋ ಪಾಕಿಸ್ತಾನ ಇಲ್ಲವಾದರೆ ಕೇರಳ ಸುದ್ದಿಯಲ್ಲಿ ಮುಂಚೂಣಿಗೆ ಬರುತ್ತವೆ. ಇದೊಂದು ರಾಜಕೀಯದ ಭಾಗವೇ ಎಂಬ ಅನುಮಾನ ಸೃಷ್ಟಿಯಾಗಿದ್ದು ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯ ದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಕೊಟ್ಟ ಮಾಹಿತಿಯ ಬಗ್ಗೆ.

ಅಷ್ಟಕ್ಕೂ ನಿನ್ನೆ(ಆಗಸ್ಟ್ 5) ಗೃಹ ಸಚಿವರು ಕೊಟ್ಟ ಮಾಹಿತಿ ಏನು?
ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಕೊಲೆಯಾದ ಪ್ರವೀಣ್‌ ನೆಟ್ಟಾರು ಕೊಲೆಯನ್ನು  ಕೇರಳದವರು ಮಾಡಿದ್ದಾರೆ ಎನ್ನಲಾಗಿತ್ತು. ಆದರೆ, ಹಂತಕರು ಸ್ಥಳೀಯರೇ ಹೊರತು ಕೇರಳದವರು ಅಲ್ಲ ಎಂಬುದಾಗಿ ಗೃಹ ಸಚಿವರು ನಿನ್ನೆ ನಡೆದ ಸಂದರ್ಶನದಲ್ಲಿ ಹೇಳಿದ್ದಾರೆ.

ಹಾಗಾದರೆ ಕೊಲೆ ನಡೆದ ದಿನದ ಆಸುಪಾಸಿನಲ್ಲಿ “ಕೇರಳ Registration ಹೊಂದಿರುವ ಗಾಡಿಯಲ್ಲಿ ಬಂದು ಕೊಲೆ ಮಾಡಿದ್ದಾರೆ.., ಕೇರಳ ಮೂಲದವರೇ ನಡೆಸಿದ ಕೃತ್ಯ ಇದು..” ಎಂಬಂತೆ ಸುದ್ದಿ ಹಬ್ಬಿಸಿದ್ದು, ಕರ್ನಾಟಕ, ಕೇರಳದ ಗಡಿ ಭಾಗಗಳಲ್ಲಿ ವಾಹನಗಳ ಗಂಭೀರ ತಪಾಸಣೆ ನಡೆದದ್ದು ಕೇವಲ ಕಣ್ಣೊರೆಸುವ ತಂತ್ರವೇ? ಹೀಗೊಂದು ಅನುಮಾನ ಮತ್ತು ಇಂತಹ ಸುದ್ದಿ ಹಬ್ಬಿಸಲು ಇರುವ ಮೂಲ ಕಾರಣವನ್ನು ಗಂಭೀರವಾಗಿ ತಗೆದುಕೊಳ್ಳಬೇಕಿದೆ.

ಇದರ ಜೊತೆಗೆ ನಿರ್ದಿಷ್ಟವಾಗಿ ಒಂದು ಸಮುದಾಯವನ್ನೇ ಗುರಿ ಮಾಡಿ ‘ಇವರೇ ನಿಜವಾದ ಅಪರಾಧಿಗಳು’ ಎಂಬಂತೆ ಬಿಂಬಿಸುವುದು ಸಹ ಬಿಜೆಪಿ ಪಕ್ಷ ಹಿಂದಿನಿಂದಲೂ ರೂಢಿಸಿಕೊಂಡು ಬಂದ ರಾಜಕೀಯ ತಂತ್ರಗಾರಿಕೆ ಎಂಬುದು ಸಾಮಾಜಿಕ ಜಾಲತಾಣಗಳ ಮೂಲಕ ಕೇಳಿ ಬರುತ್ತಿರುವ ಮಾತು. ಇದಕ್ಕೆ ಪೂರಕ ಎಂಬಂತಹ ಘಟನೆ ಸುರತ್ಕಲ್ ನಲ್ಲಿ ಫಾಸಿಲ್ ಎಂಬ ಯುವಕನ ಹತ್ಯೆ. ಹತ್ಯೆ ನಡೆದ ಬೆನ್ನಲ್ಲೇ ಆರೋಪಿಗಳು “ಪ್ರೇಮ ಪ್ರಕರಣ, ಮುಸ್ಲಿಂ ಒಳಪಂಗಡದ ಜಗಳ” ಎಂಬಂತೆ ವೈರಲ್ ಮಾಡಿದ್ದನ್ನು ಗಮನಿಸಬೇಕು. ಇಂತಹ ಹಲವಷ್ಟು ಕೃತ್ಯಗಳನ್ನು ಬಿಜೆಪಿ ಹಿನ್ನೆಲೆಯ ವ್ಯಕ್ತಿಗಳು ಮಾಡಿದಾಗ ಅವರನ್ನು ಮಾನಸಿಕ ಅಸ್ವಸ್ಥರು ಎಂಬಂತೆ Certificate ನೀಡಿ ತಿಪ್ಪೆ ಸಾರಿಸಿದ ಹೆಚ್ಚು ಪ್ರಕರಣಗಳು ಇನ್ನೂ ಕಣ್ಣ ಮುಂದಿವೆ.

ಹೀಗೆ ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ “ಕಮ್ಯುನಿಸ್ಟರ ಕೈವಾಡ ಅಥವಾ ಮುಸ್ಲಿಂ ಮೂಲಭೂತವಾದಿಗಳ ಕೈವಾಡ”ದ ಬಗ್ಗೆ ಬಿಂಬಿಸಲು ಹೊರಟ ಬಗ್ಗೆ ಅನುಮಾನಗಳು ದಟ್ಟವಾಗಿದೆ. ಎಷ್ಟೋ ಸಂದರ್ಭದಲ್ಲಿ ಆಡಳಿತದಲ್ಲಿ ಇರುವ ಬಿಜೆಪಿ ಪಕ್ಷವೇ ತನಿಖೆಗೂ ಮೊದಲೇ ಪ್ರತಿಭಟನೆ, ಪ್ರತೀಕಾರದ ಮಾತನ್ನಾಡುವುದು ಇಂತಹ ಪ್ರಕರಣಗಳು ಹಳ್ಳ ಹಿಡಿಸುವ ಉದ್ದೇಶ ಇರಬಹುದು ಎಂಬುದು ಸಧ್ಯಕ್ಕೆ ಎದ್ದಿರುವ ಅನುಮಾನ.

ನಿನ್ನೆಯ ದಿನ ಗೃಹ ಮಂತ್ರಿಗಳು ಆರೋಪಿಗಳು ಕರ್ನಾಟಕದವರೇ ಎಂದಿದ್ದಾರೆ. ಹಾಗಾದರೆ ಸಾವಿನ ಸಂದರ್ಭವನ್ನೂ ಬಿಜೆಪಿ ತನ್ನ ಅನುಕೂಲಕ್ಕೆ ಬಳಸಿಕೊಂಡಿತೇ ಎಂಬುದು ಈಗ ಎದ್ದಿರುವ ಪ್ರಶ್ನೆ. ಇದರ ಜೊತೆಗೆ ಶುರುವಿನಲ್ಲಿ ತನಿಖೆ ದಾರಿ ತಪ್ಪಿಸಿದವರ ವಿರುದ್ಧ ಏನು ಕ್ರಮ ಕೈಗೊಳ್ಳುವರು ಎಂಬುದನ್ನೂ ಗೃಹ ಮಂತ್ರಿಗಳು ಸ್ಪಷ್ಟಪಡಿಸುತ್ತಾರೆಯೇ?

Related Articles

ಇತ್ತೀಚಿನ ಸುದ್ದಿಗಳು