ಪ್ರವೀಣ್‌ ನೆಟ್ಟಾರು ಹತ್ಯೆಯ ಪ್ರಮುಖ 3 ಆರೋಪಿಗಳ ಬಂಧನ

ಮಂಗಳೂರು: ರಾಜ್ಯಾದಂತ ಸಂಚಲನ ಮೂಡಿಸಿದ ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳನ್ನ ಪೋಲಿಸರು ಇಂದು ಬಂಧಿಸಿದ್ದಾರೆ.

ಹತ್ಯೆಗೆ ಸಂಬಂಧಿಸಿದ ಏಳು ಜನರನ್ನ ಈಗಾಗಲೇ ಬಂಧಿಸಲಾಗಿದ್ದು, ಇನ್ನೂ ಮೂವರು ಪ್ರಮುಖ ಆರೋಪಿಗಳಾದ ಶಿಯಾಬುದ್ದಿನ್‌ ಅಲೀ, ರೀಯಾಝ್‌ ಅಂಕತಡ್ಕ, ಬಶೀರ್‌ ಎಂಬುವರನ್ನು ತಲಾಪಡಿ ಚೆಕ್‌ ಪೋಸ್ಟ್‌ ಬಳಿ ಬಂಧಿಸಲಾಗಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು