Monday, June 17, 2024

ಸತ್ಯ | ನ್ಯಾಯ |ಧರ್ಮ

ಪ್ರಯಾಣಿಕರಿಗೆ ರಸ್ತೆ ಗುಂಡಿಗಳ ಭಯ, ಗಾಯಗೊಂಡವರೆಷ್ಟೋ-ಪ್ರಾಣ ಕಳೆದುಕೊಂಡವರೆಷ್ಟೋ: ಬೆಂಗಳೂರಿಗರ ಆಕ್ರೋಶ

ಬೆಂಗಳೂರು: ನಗರದಲ್ಲಿ ರಸ್ತೆಗುಂಡಿಗಳ ಸಮಸ್ಸೆ, ಹಲವಾರು ಅನಾವುತಗಳಿಂದ ಬೇಸತ್ತ ಪ್ರಯಾಣಿಕರು ಬಿಬಿಎಂಪಿ ವಿರುದ್ಧ ಕಿಡಿಕಾರುತ್ತಿದ್ದಾರೆ.

ರಾಜಧಾನಿಯಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಹೆಚ್ಚಾಗುತ್ತಿದ್ದು , ಸಾಕಷ್ಟು ಪ್ರಯಾಣಿಕರು ರಸ್ತೆಯಲ್ಲಿ ಚಲಿಸುವಾಗ ರಸ್ತೆಗುಂಡಿಗಳಿಗೆ ಸಿಲುಕಿ ಗಾಯಗೊಂಡಿದ್ದಾರೆ. ಇನ್ನು ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ.

ಸಮೀಕ್ಷೆಯೊಂದರಲ್ಲಿ ತಿಳಿದ ಹಾಗೆ ಬೆಂಗಳೂರು ನಗರದಲ್ಲಿ 4545 ರಸ್ತೆ ಗುಂಡಿಗಳು ಇವೆ. ಬೊಮ್ಮನಹಳ್ಳಿ ವಿಭಾಗದಲ್ಲಿ 1076, ದಾಸರಹಳ್ಳಿ 867, ಪೂರ್ವ 566, ಮಹದೇವಪುರ 329, ಆರ್ ಆರ್ ನಗರ 1068, ದಕ್ಷಿಣ 414, ಪಶ್ಚಿಮದಲ್ಲಿ 225 ರಸ್ತೆ ಗುಂಡಿಗಳು ಇದ್ದು ಪ್ರಯಾಣಿರ ಜೀವಕ್ಕೆ ಕುತ್ತುತಂದಿವೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್. ನಗರದಲ್ಲಿ ರಸ್ತೆಗುಂಡಿಗಳು ಹೆಚ್ಚಾಗಿದ್ದು,  ನಾವು ಕ್ರಮ ಕೈಗೊಳ್ಳುತ್ತಲೇ ಇದ್ದೇವೆ ಆದರೆ ಮಳೆಯಿಂದಾಗಿ  ಗುಂಡಿಗಳ ಸಂಖ್ಯೆ ಇನ್ನೂ ಅಧಿಕವಾಗಿವೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಗುಂಡಿ ಮುಚ್ಚುವ ಕಾಮಗಾರಿ ಕೆಲಸಗಳಲ್ಲಿ ಏರುಪೇರಾಗಿದೆ ಎಂದು ಮಾಹಿತಿ ನೀಡಿದರು.

ಬಿಸಿಲಿನ ವಾತವಾರಣ ಇಲ್ಲದ ಕಾರಣ ಗುಂಡಿ ಮುಚ್ಚುವ ಕಾರ್ಯ ಪೂರ್ಣವಾಗುತ್ತಿಲ್ಲ. ಈಗಾಗಲೇ 3900 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ, ಇನ್ನು 600 ಗುಂಡಿಗಳು ಬಾಕಿ ಇವೆ ಎಂದು ಬಿಬಿಎಂಪಿ ತಿಳಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಮ್ಮಬೆಂಗಳೂರಿನ ಮೂಲಸೌಕರ್ಯ ಹದಗೆಟ್ಟಿದೆ. ದುರದೃಷ್ಟಕರ ಘಟನೆಯಲ್ಲಿ ಅಮಾಯಕನೊಬ್ಬ ಗುಂಡಿಗೆ ಬಲಿಯಾಗಿದ್ದಾನೆ. ಅವರ ಕುಟುಂಬಕ್ಕೆ ನನ್ನ ಆಳವಾದ ಸಂತಾಪಗಳು. ದುರ್ಬಲ ಮತ್ತು ಅಸಮರ್ಥ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಾಢ ನಿದ್ರೆಯಲ್ಲಿದ್ದಾರೆ ಮತ್ತು ಹೈಕೋರ್ಟ್‌ನ ಪುನರಾವರ್ತಿತ ಎಚ್ಚರಿಕೆಗಳು ಸಹ ಅವರನ್ನು ಎಬ್ಬಿಸಿಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು