Thursday, June 20, 2024

ಸತ್ಯ | ನ್ಯಾಯ |ಧರ್ಮ

ಕೋಲಾರದಲ್ಲಿ SDPI ನಿಂದ ಚುನಾವಣೆ ಪೂರ್ವ ಸಿದ್ಧತಾ ಕಾರ್ಯಕ್ರಮ

ಕೋಲಾರ: SDPI ವತಿಯಿಂದ ಚುನಾವಣೆ ಸಿದ್ಧತೆ ಕಾರ್ಯಕ್ರಮದಲ್ಲಿ 2023 ಚುನಾವಣೆ ಪೂರ್ವ ಸಿದ್ಧತೆಗಾಗಿ ಕಾರ್ಯಕ್ರಮ ನಡೆದಿದ್ದು, ಸೋಮವಾರದಂದು ಕೋಲಾರದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್‌ ಭಾಸ್ಕರ್‌ ಪ್ರಸಾದ್‌ ಭಾಗವಹಿಸಿ ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ SDPIನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್‌ ಭಾಸ್ಕರ್‌  ಪ್ರಸಾದ್‌, ʼಈದಿನ ಹಮ್ಮಿಕೊಂಡಿದ್ದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಕೋಲಾರ ಜಿಲ್ಲೆಯ ಹಲವಾರು ದಲಿತ ಹಾಗೂ ರೈತ ಮುಖಂಡರು ಪ್ರೋತ್ಸಾಹದಾಯಕವಾದ ಸಲಹೆಗಳನ್ನು ಹಂಚಿಕೊಂಡಿದ್ದು, ಅವರ ಎಲ್ಲಾ ಸಲಹೆ, ಮಾರ್ಗಸೂಚಿ ಯನ್ನು SDPI ಒಪ್ಪಿಕೊಳ್ಳುತ್ತದೆ. 2023ರಲ್ಲಿ ಕೋಲಾರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಸ್ಪರ್ಧೆ  ಮಾಡಬೇಕು ಅನ್ನುವ ಯೋಚನೆ ಈಗ ಮಾಡಬೇಕಿದೆ. ಇನ್ನು ಕೆಲವೇ ದಿನಗಳಲ್ಲಿ ನಾವು ಸ್ಪರ್ಧಿಸುವ ಕ್ಷೇತ್ರಗಳ ಜೊತೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ. ತಾವೆಲ್ಲರೂ ಸಂವಿಧಾನವನ್ನು ಉಳಿಸಿ ಜಾಗೃತಿಯನ್ನು ಮೂಡಿಸುವಂತ ನಮ್ಮ ಹೋರಾಟದೊಂದಿಗೆ ಜೊತೆ ಇರುಬೇಕು ಎಂದು ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ SDPI(Social democratic party of India) ನ ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ನ ಮುಖಂಡರು, ದಲಿತ ಮುಖಂಡರು, ರೈತ ಪರ ಮುಖಂಡರು ಸೇರಿದಂತೆ ಹಲವರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು