Friday, June 28, 2024

ಸತ್ಯ | ನ್ಯಾಯ |ಧರ್ಮ

ಪ್ರೇಮಿಗಳನ್ನು ಪೊಲೀಸರಿಗೊಪ್ಪಿಸಿದ ಹಿಂದುತ್ವ ಕಾರ್ಯಕರ್ತರು

ಧರ್ಮಸ್ಥಳ: ಅನ್ಯಕೋಮಿನ ಜೋಡಿಯನ್ನು ಹಿಂದೂತ್ವ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಓಪ್ಪಿಸಿದ ಘಟನೆ ಕಾಪಿನಬಾಗಿಲು ಎಂಬಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಗದಗಿನ ರಫೀಕ್ ಹಾಗೂ ಗದಗಿನ ಹಿಂದೂ ಯುವತಿ ಧರ್ಮಸ್ಥಳಕ್ಕೆ ಬಂದಿದ್ದು ಖಾಸಗಿ ಲಾಡ್ಜ್‌ ಒಂದಕ್ಕೆ ರೂಮ್‌ ಬುಕ್‌ ಮಾಡಲು ಹೋದ ಸಂದರ್ಭದಲ್ಲಿ ಅವರಿಗೆ ರೂಮ್‌ ನೀಡಲು ವಸತಿ ಗೃಹದ ಸಿಬ್ಬಂದಿ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಜೋಡಿ ತಕ್ಷಣವೇ ಬೆಂಗಳೂರಿಗೆ ತೆರಳಲು ಬಸ್‌ ಹತ್ತಿದ್ದು ಈ ವಿಷಯ ತಿಳಿದ ಹಿಂದೂತ್ವದ ಕಾರ್ಯಕರ್ತರು ಅವರನ್ನು ಕೊಕ್ಕಡ ಎಂಬಲ್ಲಿ ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ.
ಬಳಿಕ ಅವರನ್ನು ನೆಲ್ಯಾಡಿ ಪೊಲೀಸರಿಗೆ ಒಪ್ಪಿಸಿದ್ದು ಪೊಲೀಸರುವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು