Wednesday, June 19, 2024

ಸತ್ಯ | ನ್ಯಾಯ |ಧರ್ಮ

ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟುವವರಾರು?

ನೋಡಿ ಸ್ವಾಮಿ ನಾವಿರೋದು ಹೀಗೆ. ಎಲ್ಲಿ ಬೇಕೆಂದರೆ ಅಲ್ಲಿ ಬಿಸಾಡುತ್ತೇವೆ. ಪ್ಲಾಸ್ಟಿಕ್ ಬಳಕೆ ಮಾಡಿ ಈ ತರಾ ಬಿಸಾಡಿದರೆ ಏನ್ ಆಗುತ್ತೆ ಅಂಥಾ ಯೋಚನೆ ಮಾಡಿ ಸ್ವಲ್ಪ. ಈ ಜನಗಳು ಹೇಗೆ ಅಂದ್ರೆ ಕೆಲಸ ಮುಗಿದ ಮೇಲೆ ಅದನ್ನು ಯಾವ ರೀತಿ ವಿಂಗಡಣೆ ಮಾಡಿ ತಮ್ಮ ತಮ್ಮ ವ್ಯಾಪ್ತಿಯ ಪಂಚಾಯತಿ/ಪುರಸಭೆ/ನಗರಸಭೆ/ಬಿಬಿಎಂಪಿ ವಾಹನಗಳಿಗೆ ಕೊಡಬೇಕು ಅಂತ ಯೋಚನೆ ಮಾಡದೆ ಸುಮ್ಮನೆ ಎಲ್ಲೆಂದರಲ್ಲಿ  Blockspot ಮಾಡಿ ಅದು ದೊಡ್ಡದಾಗಿ ಹರಡುವಂತೆ ಮಾಡುತ್ತಾರೆ. ಈ ರೀತಿ ಮಾಡಿದರೆ ಸ್ವಚ್ಚ ಭಾರತ ದೇಶ ಅಸ್ತಿತ್ವಕ್ಕೆ ಬರಲು ಹೇಗೆ ಸಾಧ್ಯವಾಗುತ್ತದೆ. ಆಲೋಚಿಸಿ!

ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮಗಳಾಗುತ್ತವೆ. ಇದರಿಂದ ಗಾಳಿ ನೀರು, ಮಣ್ಣು ಮತ್ತು ವಾತಾವರಣ ಕಲುಷಿತಗೊಂಡು ರೋಗಗಳು ಹರಡುತ್ತವೆ. ಹಾಗಾಗಿ ಪ್ರತಿಯೊಬ್ಬರು ಜಾಗೃತರಾಗಿ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ.  ಪ್ಲಾಸ್ಟಿಕ್ ಬಳಕೆ ಮಾಡಿದ್ರೆ ನಮ್ಮ ಆರೋಗ್ಯಕ್ಕೆ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ,  ಗಂಭೀರವಾಗಿ ಚಿಂತಿಸಿ. ಉದಾಹರಣೆಗೆ, ಮಲೇರಿಯಾ ಮತ್ತು ಡೆಂಗ್ಯೂ ಮುಂತಾದ ರೋಗಗಳಿಗೆ ಇದು ಕಾರಣವಾಗುತ್ತದೆ. ಇಂತಹ  ಬೇರೆ ರೋಗಗಳೂ ಬರುವ ಸಾಧ್ಯತೆ ಹೆಚ್ಚಿದೆ.

ನಾವು ಯಾವುದೇ ರೀತಿಯಿಂದಲೂ  ಪ್ಲಾಸ್ಟಿಕ್‌ ಬಳಸುವುದು ಉತ್ತಮವಲ್ಲ. ಇದರಿಂದಾಗುವ ಇನ್ನಷ್ಟು ದುಷ್ಪರಿಣಾಮಗಳೆಂದರೆ ಪರಿಸರಕ್ಕೆ ಹಾನಿ. ಇದು ಬೇಗನೆ ಹಾಳಾಗುವುದಿಲ್ಲ, ಕೊಳೆಯುವುದಿಲ್ಲ. ಸುಟ್ಟರೆ ಸುಸ್ಥಿರ ಇದ್ದ ವಾತಾವರಣದ ಹೃದಯವನ್ನು ನಾವೇ ಕಲಕಿ ಹಾಳು ಮಾಡಿ ಹಾನಿ ಮಾಡಿದಂತಾಗುತ್ತದೆ. ಅದನ್ನು ನಮ್ಮ ಕೈಯಾರೆ ಮಾಡಬಾರದೆಂಬುದು ನಮ್ಮ ಆಶಯ! ದಯವಿಟ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದರ ಕಡೆ ಗಮನಹರಿಸಿ, ಸಾಧ್ಯವಾಗುವುದಾದರೆ ಸಂಪೂರ್ಣ ತ್ಯಜಿಸಿ. ಪ್ಲಾಸ್ಟಿಕ್ ಮಾಲಿನ್ಯವು ಕೂಡ ಹವಾಮಾನದ ಮೇಲೆ ಹಲವಾರು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ.

ದಯವಿಟ್ಟು ಇನ್ಮುಂದೆ ನಾವು ಪರಿಸರ, ಭೂಮಿ  ಮತ್ತು ಪ್ರಾಣಿ, ಪಕ್ಷಿಗಳ ಮೇಲೆ ತುಸು ಹೆಚ್ಚು ಪ್ರೀತಿಯನ್ನೇ ತೋರಿಸೋಣ, ಮುಂದಿನ ಜನಾಂಗಕ್ಕೆ ಸ್ವಚ್ಛ ಪರಿಸರ ನೀಡಲು ಕಾರ್ಯಪ್ರವೃತ್ತರಾಗೋಣ

ಡಿ ಬಾಲಾಜಿ

SWMRT -Solid Waste Management Round Table

Related Articles

ಇತ್ತೀಚಿನ ಸುದ್ದಿಗಳು